ಕಾಂಗ್ರೆಸ್ ಗೆ ಮುದ್ದಹನುಮೇಗೌಡ ಎಂಟ್ರಿ.. ತುಮಕೂರು ಕೈ ಬಿರುಕು..?

Muddahanumegowda:‌ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ.. ಇದರ ಬೆನ್ನಲೆ ಕಾಂಗ್ರೆಸ್ ನಲ್ಲಿ ದಿನೇ ದಿನೇ ಭಿನ್ನಮತ ಸ್ಫೋಟಗೊಳ್ಳುತ್ತಿದೆ. ಪ್ರಬಲ ಆಕಾಂಕ್ಷಿ ಮುರಳೀಧರ್ ಹಾಲಪ್ಪ ಅಕ್ಷರ ಸಹಃ ಕೆರಳಿ ಕೆಂಡವಾಗಿದ್ದಾರೆ. ಹಾಲಪ್ಪ ಪ್ರತಿಷ್ಠಾನ ಹೆಸರಿನಲ್ಲಿ ಕರೆಯಲಾಗಿದ್ದ ಸಾರ್ವಜನಿಕರ ಸಭೆಯಲ್ಲಿ ಆಗಿದ್ದೇನು.. ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್..

Written by - Savita M B | Last Updated : Jan 17, 2024, 05:03 PM IST
  • ಮುದ್ದಹನುಮೇಗೌಡ ಕೈ ಸೇರ್ಪಡೆ ಹಿನ್ನಲೆ ಸ್ಫೋಟಗೊಂಡ ಭಿನ್ನಮತ
  • ತುಮಕೂರಿನಲ್ಲಿ ಎಸ್ ಪಿಎಂ ವಿರುದ್ಧ ಕಾಂಗ್ರೆಸ್ ಮುಖಂಡರ ಸಭೆ
  • ಮುರುಳೀಧರ್ ಹಾಲಪ್ಪಗೆ ಎಂಪಿ ಟಿಕೆಟ್ ನೀಡಲು ಒಗ್ಗಟ್ಟು ಪ್ರದರ್ಶನ
ಕಾಂಗ್ರೆಸ್ ಗೆ ಮುದ್ದಹನುಮೇಗೌಡ ಎಂಟ್ರಿ.. ತುಮಕೂರು ಕೈ ಬಿರುಕು..? title=

ತುಮಕೂರು ಕಾಂಗ್ರೆಸ್ ಕೈ ಮನೆಯಲ್ಲಿ ಅಸಮಧಾನ.. ಆಕ್ರೋಶ.. ಅತೃಪ್ತಿಯ ಕಟ್ಟೆ ನಿಧಾವಾಗಿ ಸ್ಫೋಟಗೊಳ್ಳಲು ಶುರುವಾಗಿದೆ. ಮುದ್ದಹನುಮೇಗೌಡರ ಪರವಾಗಿ ಮೃಧುವಾಗಿ ಮಾತನಾಡುತಿದ್ದವರೆಲ್ಲಾ ಈಗ ಒಳಗೊಳಗೆ ಕೊತ ಕೊತ ಅಂತ ಕುದಿಯಲಾರಂಭಿಸಿದ್ದಾರೆ,. ಇದಕ್ಕೆ ಪ್ರಮುಖ ಕಾರಣ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಮತ್ತೆ ಕಾಂಗ್ರೆಸ್ ಮನೆಗೆ ಬರಲು ತುದಿಗಾಲಲಿ ನಿಂತಿರೋದು.. ಕಾಂಗ್ರೆಸ್ ಸೇರ್ಪಡೆಗೂ ಇದೇ ಜನವರಿ 19 ರಂದು ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಈ ನಡುವೆ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ನಡೆದ ಸಭೆಯಲ್ಲಿ ಕೈ ಮುಖಂಡರು ಭಾಗಿಯಾಗಿದ್ದರು.

ಹಾಲಪ್ಪ ಪ್ರತಿಷ್ಠಾನ ವತಿಯಿಂದ ಈವರೆಗೆ ಹಮ್ಮಿಕೊಂಡಿದ್ದ ರೈತರೊಂದಿಗೆ ನಾವು ಕಾರ್ಯಕ್ರಮ ಮುದ್ದಹನುಮೇಗೌಡ ಆಗಮನ ವಿಷಯ ಚರ್ಚೆಯ ಕೇಂದ್ರವಾಗಿ ಮಾರ್ಪಟ್ಟಿತ್ತು. ಮಾಜಿ ಶಾಸಕ ಎಚ್.ನಿಂಗಪ್ಪ ಮೊದಲು ಮುರುಳೀಧರ್ ಹಾಲಪ್ಪ ಪರ ಬ್ಯಾಟಿಂಗ್ ಮಾಡಿದ್ರು. ಬಳಿಕ ನಾನು ಲೋಕಸಭೆಯ ಪ್ರಬಲ ಆಕಾಂಕ್ಷಿ ಅಂತಾ ಘೋಷಣೆ ಮಾಡಿಕೊಂಡ್ರು. ಅಲ್ಲದೆ ಆಮದು ಮಾಡಿಕೊಂಡವರಿಗೆ ಟಿಕೆಟ್ ಕೊಡಬಾರದು ಅಂತಾ ಮುದ್ದಹನುಮೇಗೌಡರ ವಿರುದ್ಧ ಲೇವಡಿ ಮಾಡಿದ್ರು..

ಇದನ್ನೂ ಓದಿ-ಯತೀಂದ್ರ ಜವಾಬ್ದಾರಿಯುತ ನಾಯಕ, ಅವರ ಮಾತನ್ನು ತಿರುಚುವ ಅಗತ್ಯವಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಸಭೆಯಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲೂಕಗಳಿಂದ ರೈತರು.. ಜನಸಾಮಾನ್ಯರು ಅಲ್ಲದೆ ಹಿರಿಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡು ಮುರುಳೀಧರ್ ಹಾಲಪ್ಪ ಪರ ಬೆಂಬಲಕ್ಕೆ ನಿಂತಿದ್ದು ಕಂಡು ಬಂತು. ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇನ್ನೂ ಜಿಲ್ಲಾ ಮಟ್ಟದ ಪ್ರಬಲ ನಾಯಕರಾದ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ರನ್ನು ಭೇಟಿಯಾಗಿ ಗಮನ ಸೆಳೆದಿದ್ದಾರೆ. ಇದೇ ವೇಳೆ ನಾನು ಕೂಡ ಈ ಬಾರಿಯ ಟಿಕೇಟ್ ಆಕಾಂಕ್ಷಿ ಅಂತಾ ಮಾಜಿ ಶಾಸಕ ಎಚ್.ನಿಂಗಪ್ಪಹೊಸ ಬಾಂಬ್ ಸಿಡಿಸಿದ್ದಾರೆ.

ಮುರುಳೀಧರ್ ಹಾಲಪ್ಪ, ನಿಕೇತ್ ರಾಜ್ ಸಾಲಿಗೆ ಮಾಜಿ ಶಾಸಕ ಎಚ್.ನಿಂಗಪ್ಪ ಸೇರ್ಪಡೆಯಾಗಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ರೇಸ್ ನಿಂದ ಹಿಂದೆ ಸರಿದಿದ್ದಾರೆ. ಬಹುತೇಕ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ಅನ್ನೋದು ಪಕ್ಕಾ ಆಗ್ತಾ ಇದೆ.. ಸಭೆಯಲ್ಲಿ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.. ಮುರುಳೀಧರ್ ಹಾಲಪ್ಪ ಮಾತ್ರ ಮೌನಕ್ಕೆ ಜಾರಿದ್ದರು. ಇಲ್ಲಾದರೆ ದಿನೇ ದಿನೇ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಧಾನ ಮತ್ತಷ್ಟು ಹೆಜ್ಜಾಗುವ ಸಾಧ್ಯತೆ ಕೈ ಪಡೆ ಮರೆಯುವಂತಿಲ್ಲ.. ಆದ್ರೆ ಮುಂದಿನ ದಿನಗಳಲ್ಲಿ ಸಿಡಿದಿರುವ ಕೈ ಮುಖಂಡರನ್ನು ಅದ್ಯಾವ ರೀತಿ ಸಮದಾಧಾನ ಮಾಡ್ತಾರೆ ಜಿಲ್ಲೆಯ ಹೈ ಕಮಾಂಡ್ ಕಾದು ನೋಡಬೇಕು..

ಇದನ್ನೂ ಓದಿ-ಪ್ರಧಾನಿ ಮೋದಿ ಟೀಕಿಸಿದ್ದ ಸಿಎಂ ಸಿದ್ದರಾಮಯ್ಯಗೆ ಬಸವರಾಜ್ ಬೊಮ್ಮಾಯಿ ತಿರುಗೇಟು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News