ಐದು ಸಾವಿರ ಜನರಿಗೆ ಇಫ್ತಾರ್ ಕೂಟ ಆಯೋಜಿಸಿದ ಸಚಿವ ಎಂಟಿಬಿ ನಾಗರಾಜ್

ಸಚಿವ ಎಂ.ಟಿ.ಬಿ ನಾಗರಾಜ್ ಅವರು ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಅದ್ದೂರಿ ಇಪ್ತಿಯಾರ್ ಕೂಟವನ್ನು ಆಯೋಜಿಸಿದ್ದರು.

Written by - Zee Kannada News Desk | Last Updated : Apr 28, 2022, 07:31 PM IST
  • ಕುಟುಂಬದ ಸದಸ್ಯರ ಜೊತೆ ಕೂಟದಲ್ಲಿ ಪಾಲ್ಗೊಂಡ ಅವರು ಅಲ್ಲಿಗೆ ಆಗಮಿಸಿದ್ದ ಜನರಿಗೆ ಬಿರಿಯಾನಿ, ಕಬಾಬ್, ಪಿಶ್ ಸೇರಿದಂತೆ ಅದ್ದೂರಿ ಭೋಜನವನ್ನು ಉಣಬಡಿಸಿದರು ಎನ್ನಲಾಗಿದೆ.
  • ಈ ವಿಶೇಷ ಕೂಟದಲ್ಲಿ ಸಚಿವ ಎಂಟಿಬಿ ನಾಗರಾಜು, ಅವರ ಮಗ ನಿತೀಷ್ ಪುರುಷೋತ್ತಮ್ ಹಾಗು ಎಂಟಿಬಿ ನಾಗರಾಜು ಪತ್ನಿ ಶಾಂತಮ್ಮ ಅವರು ಭಾಗವಹಿಸಿದ್ದರು.
 ಐದು ಸಾವಿರ ಜನರಿಗೆ ಇಫ್ತಾರ್ ಕೂಟ ಆಯೋಜಿಸಿದ ಸಚಿವ ಎಂಟಿಬಿ ನಾಗರಾಜ್ title=

ಹೊಸಕೋಟೆ: ಸಚಿವ ಎಂ.ಟಿ.ಬಿ ನಾಗರಾಜ್ ಅವರು ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಹೊಸಕೋಟೆ ನಗರದ ಸುಲ್ತಾನ್ ಪೇಟೆಯ ಪ್ಯಾಲೇಸ್ ನಲ್ಲಿ ಅವರು ಇಪ್ತಿಯಾರ್ ಕೂಟವನ್ನು ಆಯೋಜಿಸಿದ್ದರು.ಈ ಕೂಟದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಜನರು ಸೇರಿದ್ದರು.

ಇದನ್ನೂ ಓದಿ : ಆರೋಗ್ಯಕರವಾಗಿ ತೂಕ ತಿಳಿಸಲು ನಿಮ್ಮ ಬೆಳಗಿನ ಉಪಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ

ಕುಟುಂಬದ ಸದಸ್ಯರ ಜೊತೆ ಕೂಟದಲ್ಲಿ ಪಾಲ್ಗೊಂಡ ಅವರು ಅಲ್ಲಿಗೆ ಆಗಮಿಸಿದ್ದ ಜನರಿಗೆ ಬಿರಿಯಾನಿ, ಕಬಾಬ್, ಪಿಶ್ ಸೇರಿದಂತೆ ಅದ್ದೂರಿ ಭೋಜನವನ್ನು ಉಣಬಡಿಸಿದರು.ಈ ವಿಶೇಷ ಕೂಟದಲ್ಲಿ ಸಚಿವ ಎಂಟಿಬಿ ನಾಗರಾಜು, ಅವರ ಮಗ ನಿತೀಷ್ ಪುರುಷೋತ್ತಮ್ ಹಾಗು ಎಂಟಿಬಿ ನಾಗರಾಜು ಪತ್ನಿ ಶಾಂತಮ್ಮ ಅವರು ಭಾಗವಹಿಸಿದ್ದರು.

ಇದನ್ನೂ ಓದಿ : Diabetes Symptoms: ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಡಯಾಬಿಟಿಸ್‌ ಪರೀಕ್ಷೆ ಮಾಡಿಸಿಕೊಳ್ಳಿ!

ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ಹೊಸಕೋಟೆ ತಾಲ್ಲೂಕಿನಲ್ಲಿ ರೌಡಿಸಂ ಗುಡಾಂಗಿರಿ ತಾಂಡವಾಡುತ್ತಿದ್ದು, ಕೆಲ ಗ್ರಾಮಗಳಲ್ಲಿ ಮತ ಚಲಾಹಿಸುವಾಗ ಇರಲಿಲ್ಲ, ಆದರೆ 2004 ರಲ್ಲಿ ನಾನು ಹೊಸಕೋಟೆಗೆ ಬಂದ ಮೇಲೆ ಈ ಎಲ್ಲಾ ದಬ್ಬಾಳಿಕೆಗೆ ಕಡಿವಾಣ ಹಾಕಿ ಎಲ್ಲಾ ಸಮುದಾಯಗಳನ್ನು ಸಾಮರಸ್ಯದಿಂದ ಒಟ್ಟುಗೂಡಿಸಿ ತಾಲ್ಲೂಕಿನ ಅಭಿವೃದ್ಧಿ ಮಾಡಿದ್ದೇನೆ.ನಾನು ಈ ಕ್ಷೇತ್ರಕ್ಕೆ ಬಂದಾಗಿನಿಂದ ಯಾರೊಬ್ಬರಿಗೂ ಕಿಂಚಿತ್ತು ತೊಂದರೆ ಕೊಟ್ಟಿಲ್ಲ ಎಂದು ಎಂಟಿಬಿ ನಾಗರಾಜ್ ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News