ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಿದ್ದರಾಮಯ್ಯ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಕನಿಷ್ಠ ಸಂಸ್ಕಾರ ಎಂಬುದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

Last Updated : Aug 29, 2018, 06:08 PM IST
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಿದ್ದರಾಮಯ್ಯ title=

ಬಾಗಲಕೋಟೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ. ಆತ ಮನುಷ್ಯನೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣಾ ಪ್ರಚಾರಾರ್ಥ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಕನಿಷ್ಠ ಸಂಸ್ಕಾರ ಎಂಬುದಿಲ್ಲ. ಕೇಂದ್ರ ಸಚಿವ ಸ್ಥಾನದಲ್ಲಿದ್ದುಕೊಂಡು ಮಾನಸಿಕ ಅಸ್ವಸ್ಥನಂತೆ ಮಾತನಾಡುತ್ತಾರೆ. ಇಂಥವರನ್ನು ಸಂಪುಟದಲ್ಲಿಟ್ಟುಕೊಂದಿರುವ ಪ್ರಧಾನಿ ಮೋದಿ ಅವರಿಗೂ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

ಮುಂದುವರೆದು ಬಸವನಗೌಡ ಪಾಟೀಲ್ ಯತ್ನಾಳ್, ಅನಂತಕುಮಾರ್ ಹೆಗಡೆ ಅವರು ಬುರ್ಖಾ ಹಾಕಿದವರು, ಟೋಪಿ ಹಾಕಿದವರು ತಮ್ಮ ಬಳಿಗೆ ಬರಬಾರದೆಂದು ಹೇಳುತ್ತಾರೆ. ಇಂಥವರಿಗೆ ಮತ ಹಾಕಬೇಡಿ ಎಂದ ಸಿದ್ದರಾಮಯ್ಯ, ತಮ್ಮನ್ನು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ನಾನು ಹಿಂದೂ ವಿರೋಧಿನಾ? ಗಾಂಧೀಜಿ ಅವರು, ಹಿಂದೂ-ಮುಸ್ಲಿಂ ಒಂದಾಗಿ ಎನ್ನುತ್ತಿದ್ದರು. ಆದರೆ ಅವರನ್ನೇ ಕೊಂದರು ಎಂದು ಆರೋಪಿಸಿದರು.

Trending News