‘ನೀನು ಬಾ, ಇಲ್ಲ ಬಿಡು, ರಾಮಮಂದಿರ ನಿಲ್ಲಲ್ಲ’: ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ವಾಗ್ಧಾಳಿ

Ananth Kumar Hegde VS Siddaramaiah: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹೋಗುವುದಿಲ್ಲವೆಂದು ಹೇಳಿದ್ದಾರೆ. ‘ನೀನು ಬಾ, ಇಲ್ಲ ಅಂದ್ರೆ ಬಿಡು, ರಾಮಮಂದಿರ ನಿಲ್ಲಲ್ಲ ಮಗನೇ’ ಅಂತಾ ಏಕವಚನದಲ್ಲಿಯೇ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.  

Written by - Puttaraj K Alur | Last Updated : Jan 14, 2024, 01:58 PM IST
  • ರಾಮಮಂದಿರ ಉದ್ಘಾಟನೆಗೆ ಹೋಗಲ್ಲವೆಂಬ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು
  • ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಅನಂತಕುಮಾರ್ ಹೆಗಡೆ
  • ‘ನೀನು ಬಾ, ಇಲ್ಲ ಅಂದ್ರೆ ಬಿಡು, ರಾಮಮಂದಿರ ನಿಲ್ಲಲ್ಲ ಮಗನೇ’ ಎಂದು ಆಕ್ರೋಶ
‘ನೀನು ಬಾ, ಇಲ್ಲ ಬಿಡು, ರಾಮಮಂದಿರ ನಿಲ್ಲಲ್ಲ’: ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ವಾಗ್ಧಾಳಿ title=
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ !

ಉತ್ತರ ಕನ್ನಡ: ‘ನನಗೆ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಬಂದಿಲ್ಲ, ಹೀಗಾಗಿ ನಾನು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಲ್ಲವೆಂಬ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹೋಗುವುದಿಲ್ಲವೆಂದು ಹೇಳಿದ್ದಾರೆ. ‘ನೀನು ಬಾ, ಇಲ್ಲ ಅಂದ್ರೆ ಬಿಡು, ರಾಮಮಂದಿರ ನಿಲ್ಲಲ್ಲ ಮಗನೇ’ ಅಂತಾ ನೇರಾನೇರವಾಗಿ ಏಕವಚನದಲ್ಲಿಯೇ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.  

ಇದನ್ನೂ ಓದಿ: ಲೋಕಸಭೆಗೆ ಮತಬೇಟೆ: ಇಂದಿನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲಿರುವ ರಾಹುಲ್ ಗಾಂಧಿ!

ನಾನು ಅಯೋಧ್ಯೆಗೆ ಹೋಗುತ್ತೇನೆ, ಆದರೆ 22ಕ್ಕೆ ಹೋಗಲ್ಲ. ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ದಮ್ ಅಂತಾ ಅನಂತಕುಮಾರ್ ಹೆಗಡೆ ಕುಟುಕಿದ್ದಾರೆ.

ಈ ಕಾಂಗ್ರೆಸ್‍ಗೆ ನಮ್ಮ ವಿರೋಧ ಅಲ್ಲವೇ ಅಲ್ಲ, ಅದು ಕೇವಲ ರಾಜಕೀಯಕೋಸ್ಕರ ಅದು ಇದು ಅಂತಾ ಬಡಿದಾಡುತ್ತಿದೆ. ನಮ್ಮ ವಿರೋಧಿ ಸಿದ್ದರಾಮಯ್ಯ, ಆದರೆ ಕಾಂಗ್ರೆಸ್ ಅಲ್ಲ. ಏಕೆಂದರೆ ಆ ಗತಿಗೆಟ್ಟ ಮಾನಸಿಕತೆ ಏನಿದೆ, ಅದು ಅಲ್ಪಸಂಖ್ಯಾತರ ವೋಟಿಗಾಗಿ ಹರಾಜಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷ ಬುರುತ್ತೆ, ಒಂದು ಪಕ್ಷ ಹೋಗುತ್ತದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಇದು ಸ್ವಾಭಾವಿಕ, ನಾಳೆ ನಾವೇನೂ ಖಾಯಂ ಅಧಿಕಾರದಲ್ಲಿರುವುದಿಲ್ಲ. ಆದರೆ ಆ ಸಿದ್ದರಾಮಯ್ಯನವರ ಹಿಂದೂ ಮಾನಸಿಕತೆಗೆ ನಮ್ಮ ವಿರೋಧವಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Crime News: ಪ್ರಿಯಕರನೊಂದಿಗೆ‌ ಬೆಡ್‌ ರೂಮ್‌ನಲ್ಲಿದ್ದಾಗ ಬಂದ ಪತಿಯ ಕೊಂದ ಪತ್ನಿ.. ಹೃದಯಾಘಾತ ಎಂದು ಹೈಡ್ರಾಮಾ!

ಚಿನ್ನದಪಲ್ಲಿ ಮಸೀದಿ ನಿರ್ನಾಮ!

ಮಂಗಳೂರಿನ ಭಟ್ಕಳದಲ್ಲಿ ಇರುವಂತ ಚಿನ್ನದಪಲ್ಲಿ ಮಸೀದಿ ಕೂಡ ಬಾಬ್ರಿ ಮಸೀದಿಯಂತೆ ನಿರ್ನಾಮವಾಗಲಿದೆ. ಅದರಲ್ಲಿ ಎರಡು ಮಾತಿಲ್ಲ. ಇದನ್ನು ಬೇಕಾದ್ರೆ ಬೆದರಿಕೆ ಅಂತಾ ಬೇಕಾದ್ರೂ ತಿಳಿಯಿರಿ ಅಂತಾ ಇದೇ ವೇಳೆ ಅನಂತಕುಮಾರ್ ಹೆಗಡೆ ಹೊಸ ಬಾಂಬ್ ಸಿಡಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News