ಚಾಮರಾಜನಗರದಲ್ಲಿ ಬಂದ್‌ಗೆ 20ಕ್ಕೂ ಹೆಚ್ಚು ಸಂಘಟನೆ ಬೆಂಬಲ: ಕರಪತ್ರ ಹಂಚಿದ ಸಂಘಟನೆಗಳು

ಮಳೆ  ಬರಲಿ ಎಂದು ಸಿದ್ದರಾಮಯ್ಯ ದೇವರಿಗೆ ಬೇಡಿಕೊಂಡಿದ್ದಾರೆ. ದೇವರಿಗೆ ಬೇಡಿದರೆ ಮಳೆ ಬರಲ್ಲ, ಇರುವ ನೀರನ್ನು ಮೊದಲು ಉಳಿಸಿ ಅಂಥಾ ನಾವು ಕೇಳುತ್ತಿದ್ದೇವೆ- ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ 

Written by - Yashaswini V | Last Updated : Sep 28, 2023, 03:53 PM IST
  • ಬೆಂಗಳೂರು ಬಂದ್‌ಗೆ ಕರೆ ಕೊಟ್ಟಾಗಲೇ ತಮಿಳುನಾಡು ನೋಂದಣಿ ವಾಹನಗಳು ಕರ್ನಾಟಕದ ಗಡಿ ದಾಟಿ ಬಂದಿರಲಿಲ್ಲ.
  • ಗುಂಡ್ಲುಪೇಟೆ ತಾಲೂಕಿನ ತಮಿಳುನಾಡು ಗಡಿ ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ತಮಿಳುನಾಡು ನೋಂದಣಿ ವಾಹನಗಳು ರಾಜ್ಯಕ್ಕೆ ಪ್ರವೇಶ ನೀಡದಂತೆ ತಮಿಳುನಾಡು‌ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.‌
  • ಈಗ, ಕರ್ನಾಟಕ ಬಂದ್ ಆಗುವ ಹಿನ್ನೆಲೆ ತಮಿಳುನಾಡು ನೋಂದಣಿ ವಾಹನಗಳು ರಾಜ್ಯ ಪ್ರವೇಶಿಸುವುದು ಬಹುತೇಕ ಸಂದೇಹವಾಗಿದೆ.
ಚಾಮರಾಜನಗರದಲ್ಲಿ ಬಂದ್‌ಗೆ 20ಕ್ಕೂ ಹೆಚ್ಚು ಸಂಘಟನೆ ಬೆಂಬಲ: ಕರಪತ್ರ ಹಂಚಿದ ಸಂಘಟನೆಗಳು title=

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದನ್ನು ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿತ್ತು 20ಕ್ಕೂ ಹೆಚ್ಚು ಸಂಘಟನೆ ಬೆಂಬಲ ಘೋಷಣೆ ಮಾಡಿವೆ.

ಸೆಪ್ಟೆಂಬರ್ 29ರ ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ತನಕ ಚಾಮರಾಜನಗರವನ್ನು ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧರಿಸಲಾಗಿದ್ದು ಕಬ್ಬು ಬೆಳೆಗಾರರ ಸಂಘ, ರೈತ ಸಂಘಟನೆ, ಕನ್ನಡಪರ ಸಂಘಟನೆಗಳು, ಖಾಸಗಿ ಸಾರಿಗೆ ಸಂಘ, ಆಟೋ ಚಾಲಕರು, ತಮಿಳರ ಸಂಘ, ಬಿಜೆಪಿ, ಜೆಡಿಎಸ್, ಬಿಎಸ್ ಪಿ, ಎಸ್ ಡಿಪಿಐ ಸೇರಿದಂತೆ 20 ಕ್ಕೂ  ಸಂಘಟನೆಗಳು, ರಾಜಕೀಯ ಪಕ್ಷಗಳು ಬಂದ್‌ಗೆ ಬೆಂಬಲ ಘೋಷಣೆ ಮಾಡಿವೆ.

ಬೆಳಗ್ಗೆ 6 ರಿಂದಲೇ ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆ, ಧರಣಿ, ಮೆರವಣಿಗೆ ನಡೆಯಲಿದ್ದು ಅದಾದ ಬಳಿಕ ಕಾವೇರಿ ಕ್ರಿಯಾ ಸಮಿತಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ನೀರು ಬಿಡದಂತೆ ಮನವಿ ಸಲ್ಲಿಸಲು ಪ್ಲಾನ್ ಮಾಡಲಾಗಿದೆ. 

ಇದನ್ನೂ ಓದಿ- ನಾಳೆ ಸಿ‌ಡಬಲ್ಯು‌ಎಮ್‌ಎ ಹೈವೋಲ್ಟೇಜ್‌ ಮೀಟಿಂಗ್: ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಗಂಭೀರ ಚರ್ಚೆ ಸಾಧ್ಯತೆ

ತಮಿಳುನಾಡು ವಾಹನಗಳು ಬರುವುದು ಡೌಟ್: 
ಬೆಂಗಳೂರು ಬಂದ್‌ಗೆ ಕರೆ ಕೊಟ್ಟಾಗಲೇ ತಮಿಳುನಾಡು ನೋಂದಣಿ ವಾಹನಗಳು ಕರ್ನಾಟಕದ ಗಡಿ ದಾಟಿ ಬಂದಿರಲಿಲ್ಲ. ಗುಂಡ್ಲುಪೇಟೆ ತಾಲೂಕಿನ ತಮಿಳುನಾಡು ಗಡಿ ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ತಮಿಳುನಾಡು ನೋಂದಣಿ ವಾಹನಗಳು ರಾಜ್ಯಕ್ಕೆ ಪ್ರವೇಶ ನೀಡದಂತೆ ತಮಿಳುನಾಡು‌ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.‌ ಈಗ, ಕರ್ನಾಟಕ ಬಂದ್ ಆಗುವ ಹಿನ್ನೆಲೆ ತಮಿಳುನಾಡು ನೋಂದಣಿ ವಾಹನಗಳು ರಾಜ್ಯ ಪ್ರವೇಶಿಸುವುದು ಬಹುತೇಕ ಸಂದೇಹವಾಗಿದೆ. 

ಇದನ್ನೂ ಓದಿ- ಕರ್ನಾಟಕ ಬಂದ್: ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ

ಮಾದಪ್ಪನನ್ನು ಬೇಡಿದರೆ ನೀರು ಬರಲ್ಲ- ಹರಿಸುತ್ತಿರುವ ನೀರು ನಿಲ್ಲಿಸಿ: 
ವರ್ತಕರು, ವಾಹನ ಚಾಲಕರು, ಹೋಟೆಲ್ ಗಳಿಗೆ ಇಂದು ಕಬ್ಬು ಬೆಳೆಗಾರರ ಸಂಘ ಕರಪತ್ರಗಳನ್ನು ಹಂಚಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಬಳಿಕ, ಸುದ್ದಿಗಾರರೊಂದಿಗೆ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮಳೆ  ಬರಲಿ ಎಂದು ಸಿದ್ದರಾಮಯ್ಯ ದೇವರಿಗೆ ಬೇಡಿಕೊಂಡಿದ್ದಾರೆ. ದೇವರಿಗೆ ಬೇಡಿದರೆ ಮಳೆ ಬರಲ್ಲ, ಇರುವ ನೀರನ್ನು ಮೊದಲು ಉಳಿಸಿ ಅಂಥಾ ನಾವು ಕೇಳುತ್ತಿದ್ದೇವೆ. ಪ್ರಕೃತಿ ಮುನಿದರೆ ನಾವು ಏನು ಮಾಡಲಾಗಲ್ಲ, ಇರುವ ನೀರನ್ನು ಉಳಿಸಿ ಎಂದು ನಾವು ಬೇಡುತ್ತಿದ್ದೇವೆ, ಅಧಿಕಾರಕ್ಕಾಗಿ ನಾನು ಅಂಟಿಕೊಂಡಿಲ್ಲ ಎಂದು ಘೋಷಿಸಿ ನೀರು ಬಿಡದ ನಿರ್ಣಯ ಮಾಡಿ, ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ಕಾವೇರಿಗಾಗಿ ಕಳೆದ 25 ದಿನಗಳಿಂದಲೂ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದ್ದು ನಾಳಿನ ಬಂದ್ ಕೂಡ ಚಾಮರಾಜನಗರ ಸ್ತಬ್ಧವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News