ಮುಂಗಾರು ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಲಭ್ಯ

ರೈತಭಾಂ.ಧವರು ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಗತ್ಯವಿರುವ ಬಿತ್ತನೆ ಬೀಜವನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಡಿ ಪಡೆಯಬಹುದಾಗಿದೆ

Last Updated : Apr 20, 2020, 07:35 AM IST
ಮುಂಗಾರು ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಲಭ್ಯ title=

ತುಮಕೂರು: ಪ್ರಸಕ್ತ ಸಾಲಿನ ಪೂರ್ವ ಮುಂಗಾರು ಪ್ರಾರಂಭವಾಗಿದ್ದು ತುಮಕೂರು (Tumkur) ತಾಲ್ಲೂಕಿನಲ್ಲಿ ಜನವರಿಯಿಂದ ಏಪ್ರಿಲ್ 9ರವರೆಗೆ ಬರಬೇಕಾದ ಮಳೆ 22ಮೀ.ಮೀ ಇದ್ದು ಪ್ರಸ್ತುತ 34ಮೀ.ಮೀ ನಷ್ಟು ಮಳೆಯಾಗಿದೆ, ಬೆಳ್ಳಾವಿ ಹೋಬಳಿಯಲ್ಲಿ 46ಮೀ.ಮೀ, ಹೆಬ್ಬೂರು ಮತ್ತು ಕೋರ ಹೋಬಳಿಯಲ್ಲಿ 41ಮೀ.ಮೀ ಮಳೆಯಾಗಿರುತ್ತದೆ.

ಈ ಮಳೆಯಿಂದ ಪ್ರಸಕ್ತ ಸಾಲಿನ ಕೃಷಿ ಚಟುವಟಿಕೆಗಳು ಗರಿಗೆದರಿದ್ದು ರೈತರ (Farmers) ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ.  ಪ್ರಸ್ತುತ ಹಂಗಾಮಿನಲ್ಲಿ ತುಮಕೂರು ತಾಲ್ಲೂಕಿನ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳಾದ ಹೆಸರು ಬಿ.ಜಿ.ಎಸ್-9, ಅಲಸಂದೆ ಡಿ.ಸಿ-15, ತೊಗರಿ ಬಿ.ಆರ್.ಜಿ-1 ಒಟ್ಟು 22.80ಕ್ವಿಂಟಾಲ್ ದಾಸ್ತಾನೀಕರಿಸಿದ್ದು, ಇತರೆ ವರ್ಗದ ರೈತರಿಗೆ ಶೇ.50, ಎಸ್.ಸಿ/ಎಸ್.ಟಿ ರೈತರಿಗೆ ಶೇ.75ರ ರಿಯಾಯಿತಿಯಲ್ಲಿ ವಿತರಿಸಲಾಗುತ್ತಿದೆ.

ಬಿತ್ತನೆ ಬೀಜಗಳನ್ನು ಪೀಡೆನಾಶಕಗಳಿಂದ ಬೀಜೋಪಚಾರ ಮಾಡಲಾಗಿದ್ದು ಗೃಹಬಳಕೆ ಮಾಡಬಾರದು. ರೈತಭಾಂಧವರು ಕೊರೊನಾವೈರಸ್ (Coronavirus) ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಗತ್ಯವಿರುವ ಬಿತ್ತನೆ ಬೀಜವನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಡಿ ಪಡೆಯಬಹುದಾಗಿದೆ.

ರಸಗೊಬ್ಬರವನ್ನು ತಾಲ್ಲೂಕಿನ 60 ಖಾಸಗಿ ವ್ಯಾಪಾರಿಗಳಲ್ಲಿ ಹಾಗೂ 16 ಸಹಕಾರಿ ಸಂಘಗಳ ಮೂಲಕ ಪಡೆಯಬಹುದಾಗಿದೆ ಹಾಗೂ ಪ್ರತಿ ಹೋಬಳಿಯ ಬಾಡಿಗೆ ಆಧಾರಿತ ಸೇವಾ ಕೇಂದ್ರದಿಂದ ಉಪಕರಣಗಳ ಬಾಡಿಗೆ ಪಡೆಯುವಂತೆ ರೈತಬಾಂಧವರಿಗೆ ಸಹಾಯಕ ಕೃಷಿ ನಿರ್ದೇಶಕರಾದ ಎನ್.ಕೆಂಗೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News