ನಿರಾಸೆ ತಂದ ಪ್ರಧಾನಿಯ ಮೌನ ನಡೆ, 'ಮಹಾದಾಯಿ' ಬಗ್ಗೆ ಚಕಾರವೆತ್ತದ ಮೋದಿ

    

Last Updated : Feb 4, 2018, 07:08 PM IST
ನಿರಾಸೆ ತಂದ ಪ್ರಧಾನಿಯ ಮೌನ ನಡೆ, 'ಮಹಾದಾಯಿ' ಬಗ್ಗೆ ಚಕಾರವೆತ್ತದ ಮೋದಿ title=

ಬೆಂಗಳೂರು: ಕರ್ನಾಟಕದ ಜನತೆಗೆ ನರೇಂದ್ರ ಮೋದಿಯ ಭಾಷಣ ತೀವ್ರ ನೀರಾಸೆಯನ್ನುಂಟು ಮಾಡಿದೆ. ಮಹದಾಯಿ ಮತ್ತು ಕಳಸಾ-ಬಂಡೂರಿ ವಿಚಾರವಾಗಿ ಪ್ರಧಾನಿ ಮೋದಿಯವರು ಭಾಷಣ ಮಾಡುತ್ತಾರೆ ಎಂದು ನೀರಿಕ್ಷಿಸಿ ರಾಜ್ಯದ ದೂರದ ಊರುಗಳಿಂದ ಬೆಂಗಳೂರಿನ ಅರಮನೆ ಮೈದಾನಕ್ಕೆ ಆಗಮಿಸಿದ್ದ ಸಾವಿರಾರು ಜನರಿಗೆ ಮಹಾದಾಯಿ ವಿಚಾರವನ್ನು ಭಾಷಣದಲ್ಲಿ ಪ್ರಸ್ತಾಪಿಸದಿರುವುದಕ್ಕೆ ನಿರಾಶರಾಗಿ ಮರಳಿ ಮನೆಗೆ ತೆರಳಬೇಕಾದ ಸ್ತಿತಿ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿದ್ದ ಜನಸ್ತೋಮದ್ದಾಗಿತ್ತು.

ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿದ ಮೋದಿ ಕರ್ನಾಟಕದ ಮಹಾನ ವ್ಯಕ್ತಿಗಳನ್ನು ಸ್ಮರಿಸಿದರು. ಸುಮಾರು ಒಂದು ಗಂಟೆಗಳ ಸುದೀರ್ಘ ಭಾಷಣದಲ್ಲಿ ಕೇಂದ್ರ ಸರ್ಕಾರವು ತಂದಂಥ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಅವರು  ತಮ್ಮ ಸರ್ಕಾರ  ಸುಧಾರಣೆ(ರಿಫಾರ್ಮ್) ನಿರ್ವಹಣೆ (ಪರ್ಫಾರ್ಮ್) ಬದಲಾವಣೆ (ಟ್ರಾನ್ಸ್ ಫಾರ್ಮ್) ನೀತಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ತಮ್ಮ ಸರ್ಕಾರ ಆರೋಗ್ಯ,ಶಿಕ್ಷಣ,ಮೆಟ್ರೋ ದಂತಹ ಕಾರ್ಯಕ್ರಮಗಳಿಗೆ ಬದ್ದವಾಗಿದೆ ಎಂದ ಮೋದಿ, ಮೂರುವರೆ ವರ್ಷದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೇ ಸಾಕಷ್ಟು ರೀತಿಯ ಅನುದಾನವನ್ನು ನೀಡಿದೆ ಆದರೆ ಅದನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ಆರೋಪಿಸಿದರು. ಎಲ್ಲ ಕಡೆ ವಾಣಿಜ್ಯವನ್ನು ವಿಸ್ತರಿಸುವ ಚರ್ಚೆ ನಡೆದಿದ್ದರೆ ಇಲ್ಲಿ ಹತ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. 

ಮೋದಿ ತಮ್ಮ ಈ ಒಂದು ಘಂಟೆಯ ಭಾಷಣದಲ್ಲಿ ಎಲ್ಲಿಯೂ ಕೂಡಾ ಮಹದಾಯಿ ಸಮಸ್ಯೆಯ ಬಗ್ಗೆ ತುಟಿ ಬಿಚ್ಚದೆ ಇರುವುದು ಈ ಸಮಾವೇಶದಲ್ಲಿ ಭಾಗವಹಿದ್ದ ಜನರಿಗೆ ಅಚ್ಚರಿಯನ್ನು ತಂದಿತ್ತು, ಪ್ರಧಾನಿಗಳ ಭಾಷಣದಲ್ಲಿ ಮಹಾದಾಯಿ ವಿಷಯ ಪ್ರಸ್ತಾಪವಾಗುತ್ತೆ ಎಂದು ನಿರೀಕ್ಷಿಸಿದ್ದ ರಾಜ್ಯದ ಜನರು ಕೊನೆಗೆ ನಿರಾಶೆಯಿಂದ ಪರಿವರ್ತನಾ ಯಾತ್ರೆಯಿಂದ ಕಾಲು ಕೀಳಬೇಕಾಯಿತು.

 

Trending News