/kannada/photo-gallery/shubha-yoga-will-be-formed-by-venus-mercury-conjunction-people-of-this-zodiac-sign-will-get-a-lot-of-wealth-249438 ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ!  ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ! 249438

ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ತನಿಖೆ ಮಾಡಲು ಸರ್ಕಾರಕ್ಕೆ ಎಷ್ಟು ಸಮಯ ಬೇಕು? ತನಿಖೆಗೆ ವಿಳಂಬ ಆಗಿರುವುದಾದರೂ ಏಕೆ?- ತನಿಖೆ ವಿಳಂಬ ಮಾಡಿರುವುದಕ್ಕೆ ಸುಪ್ರೀಂ ಆಕ್ರೋಶ.

Last Updated : Nov 27, 2018, 08:10 AM IST
ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ title=

ನವದೆಹಲಿ: ಖ್ಯಾತ ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಳಂಬ ಮಾಡಿರುವುದಕ್ಕೆ ಸೋಮವಾರ ಸುಪ್ರೀಂ ಕೋರ್ಟ್​ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ತನಿಖೆ ಮಾಡಲು ಸರ್ಕಾರಕ್ಕೆ ಎಷ್ಟು ಸಮಯ ಬೇಕು? ತನಿಖೆಗೆ ವಿಳಂಬ ಆಗಿರುವುದಾದರೂ ಏಕೆ? ಎಂದು ನ್ಯಾ. ರೊಹಿಂಟನ್ ನಾರಿಮನ್ ನೇತೃತ್ವದ ದ್ವಿಸದಸ್ಯ ಪೀಠ ಆಕ್ರೋಶ ವ್ಯಕ್ತಪಡಿಸಿತು. ಜೊತೆಗೆ ಎರಡು ವಾರದೊಳಗೆ ತನಿಖೆಯ ಸಂಪೂರ್ಣ ವಿವರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.

ವಿಚಾರಚಾದಿ ಎಂ.ಎಂ. ಕಲ್ಬುರ್ಗಿ ಅವರನ್ನು ಧಾರವಾಡದ ಅವರ ನಿವಾಸದಲ್ಲಿ 2013ರ ಆಗಸ್ಟ್ ನಲ್ಲಿ ಗುಂಡಿಕ್ಕಿ‌ ಕೊಲ್ಲಲಾಯಿತು. ಈ‌ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರ ತನಿಖೆಗೆ ವಿಶೇಷ ತನಿಖಾ ತಂಡವನ್ನು ನೇಮಿಸಿತು. ಆದರೆ ಯಾವುದೇ ಪ್ರಯೋಜನವಾಗಿಲ್ಲ.‌ ಮೂರು ವರ್ಷವಾದ್ರೂ ಹಂತಕರ ಕುರುಹು ಸಿಕ್ಕಿಲ್ಲ. ಎಂ.ಎಂ.‌ ಕಲ್ಬುರ್ಗಿ ಹತ್ಯೆಯಾದ ಕೂಡಲೇ ಅಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಬೇಧಿಸಲು ವಿಶೇಷ ತನಿಖಾ ತಂಡ ನೇಮಿಸುವ ಕಾಳಜಿ‌ ತೋರಿದರು. ಆದರೆ ವಿಶೇಷ ತನಿಖಾ ತಂಡ ಹತ್ಯೆ ಮಾಡಿದವರನ್ನು ಹುಡುಕುವಲ್ಲಿ ಯಶಸ್ವಿಯಾಗಲಿಲ್ಲ. 

ಕೊಲೆಗಡುಕರು ಯಾರೆಂಬುದು ತಿಳಿಯುತ್ತದೆ. ಉದ್ದೇಶವೂ ಗೊತ್ತಾಗುತ್ತದೆ. ತಮಗೆ ನ್ಯಾಯ ಸಿಗುತ್ತದೆ ಎಂದು ನಂಬಿ ಕುಟುಂಸ್ಥರು ಬರೊಬ್ಬರಿ ಎರಡು ವರ್ಷ ಕಾದು ಕುಳಿತರೂ ಪ್ರಯೋಜನವಾಗದೆ ಎಂ.ಎಂ. ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಸರ್ವೋಚ್ಚ ನ್ಯಾಯಾಲಯದ ಮೊರೆಹೋದರು. 

ಸೋಮವಾರ ಉಮಾದೇವಿ ಅವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ರೋಹಿಂಗ್ಟನ್ ನಾರೀಮನ್ ನೇತೃತ್ವದ ದ್ಚಿಸದಸ್ಯ ಪೀಠ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ನೇರವಾಗಿ ನಿಮ್ಮ ತನಿಖೆಯಲ್ಲಿ ಏನೇನೂ ಪ್ರಗತಿ ಆಗಿಲ್ಲ ಎಂದು ಹೇಳಿತು. ತೀಕ್ಷ್ಣ ಮಾತುಗಳಿಂದ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಎರಡು ವಾರದೊಳಗೆ ತನಿಖಾ ವಿವರಗಳನ್ನೊಳಗೊಂಡ ವರದಿಯನ್ನು ಸುಪ್ರೀಂ ಕೋರ್ಟಿಗೆ ಕೊಡಿ ಎಂದು ತಾಖೀತು ಮಾಡಿತು.