R.Shankar: 'ಇಂದು ಸಂಜೆಯೇ ನಾನು ಮಂತ್ರಿಯಾಗಬಹುದು'

ಸಚಿವಾಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಎಂ ಎಲ್ ಸಿ ಆರ್.ಶಂಕರ್

Last Updated : Jan 5, 2021, 12:35 PM IST
  • ಬಿಜೆಪಿ ಕಾರ್ಯಕಾರಿಣಿ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಮತ್ತೆ ಗರಿಗೆದರಿದ್ದು
  • ಸಚಿವಾಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಎಂ ಎಲ್ ಸಿ ಆರ್.ಶಂಕರ್
  • ಸದ್ಯ ಸಂಪುಟ ವಿಸ್ತರಣೆ ಕಾಲ ಕೂಡಿ ಬಂದಿದೆ. ಹಾಗಾಗಿ ಇಂದು ಸಂಜೆಯೆ ನಾನು ಮಂತ್ರಿಯಾದರೂ ಆಗಬಹುದು ಎಂದರು.
R.Shankar: 'ಇಂದು ಸಂಜೆಯೇ ನಾನು ಮಂತ್ರಿಯಾಗಬಹುದು' title=

ಬೆಂಗಳೂರು: ಬಿಜೆಪಿ ಕಾರ್ಯಕಾರಿಣಿ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಮತ್ತೆ ಗರಿಗೆದರಿದ್ದು, ಸಚಿವಾಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಎಂ ಎಲ್ ಸಿ ಆರ್.ಶಂಕರ್ ನಾನು ಇಂದು ಸಂಜೆಯೇ ಮಂತ್ರಿಯಾಗಬಹುದು ಹೇಳಲಾಗಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಭೇಟಿ ಬಳಿಕ ಮಾತನಾಡಿದ ಆರ್.ಶಂಕರ್(R.Shankar), ಇನ್ನೆರಡು ದಿನಗಳಲ್ಲಿ ನೀನು ಮಂತ್ರಿಯಾಗ್ತೀಯಾ ಎಂದು ಸಿಎಂ ಹೇಳಿದ್ದಾರೆ. ಈಗಾಗಲೇ ಸಂಪುಟ ವಿಸ್ತರಣೆ ಸಾಕಷ್ಟು ತಡವಾಗಿದೆ. ಸದ್ಯ ಸಂಪುಟ ವಿಸ್ತರಣೆ ಕಾಲ ಕೂಡಿ ಬಂದಿದೆ. ಹಾಗಾಗಿ ಇಂದು ಸಂಜೆಯೆ ನಾನು ಮಂತ್ರಿಯಾದರೂ ಆಗಬಹುದು ಎಂದರು.

ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಫಿಕ್ಸ್..? ಆಕಾಂಕ್ಷಿಗಳು ಹೇಳಿದ್ದೇನು..?

ಎಂದಿನಂತೆ ಇಂದು ಕೂಡ ಸಿಎಂ ಬಿ.ಎಸ್.ವೈ ಅವರನ್ನು ಭೇಟಿಯಾಗಿದ್ದೇನೆ ಹೊರತು ಯಾವುದೇ ಒತ್ತಡ ಹೇರುವ ನಿಟ್ಟಿನಲ್ಲಿ ಭೇಟಿಯಾಗಿಲ್ಲ ಎಂದು ತಿಳಿಸಿದರು.

ಪ್ರಧಾನಿ ಮೋದಿಯಿಂದ ಇಂದು ಕೊಚ್ಚಿ-ಮಂಗಳೂರು Natural Gas ಪೈಪ್‌ಲೈನ್ ಉದ್ಘಾಟನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

iOS Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News