ಹಾವು- ಮುಂಗುಸಿಗಳಂತಿದ್ದ ಸಾರಾ ಮಹೇಶ್, ವಿಶ್ವನಾಥ್ ಈಗ ಭಾಯಿ-ಭಾಯಿ

ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಹೊರತಾಗಿ  ಮೇ.8,9,10ರಂದು ಹೆಚ್. ವಿಶ್ವನಾಥ್ 75 ರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಹುಟ್ಟುಹಬ್ಬ ಕಾರ್ಯಕ್ರಮದ ನೇತೃತ್ವ ನಾನೇ ವಹಿಸಿದ್ದೇನೆ ಎಂದು ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.

Written by - Zee Kannada News Desk | Last Updated : May 7, 2022, 05:48 PM IST
  • ಸಮ್ಮಿಶ್ರ ಸರ್ಕಾರ ಪತನದ ನಂತರ ಎಂಎಲ್ ಸಿ ಹೆಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ ಮಹೇಶ್ ನಡುವೆ ದೊಡ್ಡಮಟ್ಟದ ಟಾಕ್ ವಾರ್, ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣದ ಹೈಡ್ರಾಮಾ ನಡೆದಿತ್ತು
ಹಾವು- ಮುಂಗುಸಿಗಳಂತಿದ್ದ ಸಾರಾ ಮಹೇಶ್, ವಿಶ್ವನಾಥ್ ಈಗ ಭಾಯಿ-ಭಾಯಿ  title=

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಹೊರತಾಗಿ  ಮೇ.8,9,10ರಂದು ಹೆಚ್. ವಿಶ್ವನಾಥ್ 75 ರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಹುಟ್ಟುಹಬ್ಬ ಕಾರ್ಯಕ್ರಮದ ನೇತೃತ್ವ ನಾನೇ ವಹಿಸಿದ್ದೇನೆ ಎಂದು ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನದ ನಂತರ ಎಂಎಲ್ ಸಿ ಹೆಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ ಮಹೇಶ್ ನಡುವೆ ದೊಡ್ಡಮಟ್ಟದ ಟಾಕ್ ವಾರ್, ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣದ ಹೈಡ್ರಾಮಾ ನಡೆದಿತ್ತು. ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಹುಟ್ಟುಹಬ್ಬದ  ಸಂಭ್ರಮದಲ್ಲಿ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದಾಗಿ ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: Pramodh Madhwaraj : ಪ್ರಮೋದ್ ಮಧ್ವರಾಜ್ ರಾಜೀನಾಮೆ : ಶೀಘ್ರ ಬಿಜೆಪಿಗೆ

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾರಾ ಮಹೇಶ್, ರಾಜಕಾರಣವೇ ಬೇರೆ, ವೈಯಕ್ತಿಕ ಜೀವನವೇ ಬೇರೆ.ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಚಾರದಲ್ಲಿ ವೈಯಕ್ತಿಕ ಟೀಕೆ ಟಿಪ್ಪಣಿಗಳಾಗಿವೆ.ಅದನ್ನ ಮೈಸೂರಿನಲ್ಲಿ ನಾನು ಹಾಗೂ ವಿಶ್ವನಾಥ್ ರವರು ಹೆಚ್ಚಾಗಿಯೇ ಮಾಡಿದ್ದೇವೆ. ಆದರೆ ಅವರು ನಮ್ಮ ಕ್ಷೇತ್ರದ ಹಿರಿಯ ರಾಜಕಾರಣಿ.ಸಾರ್ವಜನಿಕ ಜೀವನದಲ್ಲಿ 75 ವರ್ಷ ಪೂರೈಸಿದ್ದಾರೆ‌. ಕ್ಷೇತ್ರದ ಶಾಸಕನಾಗಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ನೇತೃತ್ವವನ್ನು ನಾನೇ ವಹಿಸಿದ್ದೇನೆ.ಸ್ವಾಗತ ಸಮಿತಿಯ ಅಧ್ಯಕ್ಷನೂ ಕೂಡಾ ನಾನೇ ಆಗಿದ್ದೇನೆ. ಪಕ್ಷೇತರವಾಗಿ ಕಾರ್ಯಕ್ರಮ ಮಾಡ್ತಿದ್ದೇವೆ. ಕ್ಷೇತ್ರದ ಶಾಸಕನಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗೋದು ನನ್ನ ಜವಾಬ್ದಾರಿ.ಚುನಾವಣೆ ಸಂದರ್ಭವೇ ಬೇರೆ ಆದರೆ ವೈಯುಕ್ತಿಕ ವಿಚಾರವೇ ಬೇರೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶೇ.1.6 ರಷ್ಟು ಪಾಸಿಟಿವಿಟಿ ರೇಟ್- ನಿತ್ಯವೂ 10 ಸಾವಿರ ಕೋವಿಡ್ ಟೆಸ್ಟ್

ಮೇ. 8, 9, 10 ರಂದು ವಿಶ್ವನಾಥ್ 75ರ ಸಂಭ್ರಮ ಕಾರ್ಯಕ್ರಮ ಮಾಡ್ತಿದ್ದೇವೆ.ಇದು ರಾಜಕೀಯ ಹೊರತಾದಂತ ಕಾರ್ಯಕ್ರಮ.ಹಾಗಾಗಿ ಕಾರ್ಯಕ್ರಮಕ್ಕೆ ಕ್ಷೇತ್ರದ ಹೆಚ್ಚಿನ ಜನರು‌ ಭಾಗವಹಿಸಬೇಕು.ಹೆಚ್.ವಿಶ್ವನಾಥ್ ರ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆ.ಆರ್ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇವೆ.ಸಂಗೀತ ಕಾರ್ಯಕ್ರಮ,ಮೆರವಣಿಗೆ, ಶುದ್ದ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಸೇರಿ ಹಲವು ಕಾರ್ಯಕ್ರಮ ನಡೆಯಲಿದೆ.

ಭಾನುವಾರ ಅದ್ದೂರಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಆದಿ ಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಜೆ ಎಸ್ ಎಸ್ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಗುರು ಪೀಠದ ನಿರಂಜನನಂದ ಪುರಿ ಸ್ವಾಮೀಜಿ, ಫಾದರ್ ಜೆ ಜೋಸೆಫ್, ಜಾಮೀಯಾ ಮಸೀದಿ ಅಲೀ ಹಸನ್ ಹಿಮಾಮ್ ಸೇರಿ ಹಲವು ಶ್ರೀಗಳು ಭಾಗಿಯಾಗಲಿದ್ದಾರೆ ಎಂದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News