KR Ramesh Kumar: 'ರಾಮಮಂದಿರ ಕಟ್ಟಿದರೆ ಸಾಕು ಎನ್ನುವವರಿಗೆ ದೇಶ ಬಿಟ್ಟಿದ್ದೇವೆ'

ರೈತರು, ಸೈನಿಕರು ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ?' ಎಂದು ಶಾಸಕ ಕೆ. ಆರ್‌. ರಮೇಶ್‌ಕುಮಾರ್‌ ಆಕ್ರೋಶ

Last Updated : Jan 29, 2021, 08:57 PM IST
  • 'ಉಪವಾಸ ಇರೋನಿಗೆ ಊಟ ಬೇಡ, ಊರಿಗೆ ಶಾಲೆ ಬೇಡ, ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತೋರಿಗೆ ಈ ದೇಶ ಆಳಲು ಬಿಟ್ಟಿದ್ದೇವೆ.
  • ರೈತರು, ಸೈನಿಕರು ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ?' ಎಂದು ಶಾಸಕ ಕೆ. ಆರ್‌. ರಮೇಶ್‌ಕುಮಾರ್‌ ಆಕ್ರೋಶ
  • ಶನಿವಾರದೊಳಗೆ ಘಾಜಿಪುರ ಗಡಿಯಲ್ಲಿ 10 ಲಕ್ಷ ರೈತರು ಸೇರುತ್ತಿದ್ದಾರೆ. ಇದು ರೈತರ ಶಕ್ತಿ' ಎಂದು ರಮೇಶ್ ಕುಮಾರ್ ಹೇಳಿದರು.
KR Ramesh Kumar: 'ರಾಮಮಂದಿರ ಕಟ್ಟಿದರೆ ಸಾಕು ಎನ್ನುವವರಿಗೆ ದೇಶ ಬಿಟ್ಟಿದ್ದೇವೆ' title=

ಕೋಲಾರ: 'ಉಪವಾಸ ಇರೋನಿಗೆ ಊಟ ಬೇಡ, ಊರಿಗೆ ಶಾಲೆ ಬೇಡ, ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತೋರಿಗೆ ಈ ದೇಶ ಆಳಲು ಬಿಟ್ಟಿದ್ದೇವೆ. ರೈತರು, ಸೈನಿಕರು ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ?' ಎಂದು ಶಾಸಕ ಕೆ. ಆರ್‌. ರಮೇಶ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ತಾಲೂಕಿನ ಸುಗಟೂರು ಸೊಸೈಟಿ ಆಶ್ರಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ರೈತರಿಗೆ 1.97 ಕೋಟಿ ರೂ ಶೂನ್ಯ ಬಡ್ಡಿಯ ಕೆಸಿಸಿ ಸಾಲ ವಿತರಿಸಿ ಮಾತನಾಡಿದ ಕೆ. ಆರ್‌. ರಮೇಶ್‌ಕುಮಾರ್(KR Ramesh Kumar), ದಿಲ್ಲಿ ರೈತರ ಹೋರಾಟದ ಕುರಿತು ಮಾತನಾಡಿದ ಅವರು, ಮಾಧ್ಯಮಗಳು ಒಂದು ಲಕ್ಷ ಟ್ರ್ಯಾಕ್ಟರ್‌ ಒಂದೆಡೆ ಸೇರಿಸುವ ರೈತರ ನೋವಿನ ಕುರಿತು ಸುದ್ದಿ ಮಾಡುತ್ತಿಲ್ಲ. ಕೇವಲ ಯಾವನೋ ಒಬ್ಬ ಕಿಡಿಗೇಡಿ ಕೆಂಪು ಕೋಟೆ ಮೇಲೆ ಬಾವುಟ ಹಾಕಿದ್ದನ್ನು ಪದೇಪದೆ ತೋರಿಸುತ್ತಿವೆ' ಎಂದು ಟೀಕಿಸಿದರು.

Good News: ಖಾಸಗಿ ಶಾಲೆಗಳ ಶುಲ್ಕ ವಸೂಲಿ ಕ್ರಮಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

'ದಿಲ್ಲಿಯಲ್ಲಿ ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಲಾಗಿದೆ. ರೈತರಿರುವ ಏರಿಯಾದಲ್ಲಿ ಕರೆಂಟ್‌, ನೀರು ಕಟ್‌ ಮಾಡಲಾಗಿದೆ. ಶನಿವಾರದೊಳಗೆ ಘಾಜಿಪುರ ಗಡಿಯಲ್ಲಿ 10 ಲಕ್ಷ ರೈತರು ಸೇರುತ್ತಿದ್ದಾರೆ. ಇದು ರೈತರ ಶಕ್ತಿ' ಎಂದು ರಮೇಶ್ ಕುಮಾರ್ ಹೇಳಿದರು.

Prakash Rathod: ಕಲಾಪದ ನಡುವೆ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಬಿದ್ದ ಕಾಂಗ್ರೆಸ್ MLC

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News