Gang Rape : ಬೆಚ್ಚಿಬಿದ್ದ ಸಿಲಿಕಾನ್‌ ಸಿಟಿ : 16 ವರ್ಷದ ಬಾಲಕಿ ಮೇಲೆ 8 ಜನರಿಂದ ಗ್ಯಾಂಗ್‌ರೇಪ್

ಇಬ್ಬರು ಆರೋಪಿಗಳು ಮೊದಲು 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ವಿಚಾರ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಸಿ ಕಳಿಸಿದ್ದಲ್ಲದೆ, ನಂತರ ಆ ವಿಡಿಯೋವನ್ನು ತೋರಿಸಿ ಬೆದರಿಸಿ ಎಂಟು ಜನ ಲೈಂಗಿಕ‌ ದೌರ್ಜನ್ಯ ಎಸಗಿದ್ದಾರೆ.

Written by - Zee Kannada News Desk | Last Updated : Apr 9, 2022, 01:40 PM IST
  • ಅಪ್ರಾಪ್ತ ಬಾಲಕಿಯ ಮೇಲೆ 8 ಜನರಿಂದ ಗ್ಯಾಂಗ್‌ ರೇಪ್‌
  • ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
  • ಆರು ವಿಕೃತಕಾಮಿಗಳನ್ನು ಬಂಧಿಸಿದ ಪೊಲೀಸರು
Gang Rape : ಬೆಚ್ಚಿಬಿದ್ದ ಸಿಲಿಕಾನ್‌ ಸಿಟಿ  : 16 ವರ್ಷದ ಬಾಲಕಿ ಮೇಲೆ 8 ಜನರಿಂದ ಗ್ಯಾಂಗ್‌ರೇಪ್ title=
Bengaluru Crime

ಬೆಂಗಳೂರು : ಅಪ್ರಾಪ್ತ ಬಾಲಕಿ ಮೇಲೆ 8 ಜನರು ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ. ಈ ಆತಂಕಕಾರಿ ಘಟನೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಗರವೇ ಬೆಚ್ಚಿ ಬಿದ್ದಿದೆ.  

ಘಟನೆ ಹಿನ್ನೆಲೆ: ಇಬ್ಬರು ಆರೋಪಿಗಳು ಮೊದಲು 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ವಿಚಾರ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಸಿ ಕಳಿಸಿದ್ದಲ್ಲದೆ, ನಂತರ ಆ ವಿಡಿಯೋವನ್ನು ತೋರಿಸಿ ಬೆದರಿಸಿ ಎಂಟು ಜನ ಲೈಂಗಿಕ‌ ದೌರ್ಜನ್ಯ ಎಸಗಿದ್ದಾರೆ.

ಇದನ್ನು ಓದಿ: ಕೇಂದ್ರ ನೌಕರರಿಗೆ ಶಾಕ್! ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಬಿಗ್ ಅಪ್​ಡೇಟ್

ಇನ್ನು ಕಾಮುಕರ ಕೈಯಿಂದ ತಪ್ಪಿಸಿಕೊಂಡು ಮನೆಗೆ ಬಂದ ಬಾಲಕಿಯನ್ನು ಪೋಷಕರು ಪ್ರಶ್ನಿಸಿದ್ದು, ಆರಂಭದಲ್ಲಿ ಹೆದರಿದ್ದ ಬಾಲಕಿ ಕಬಾಬ್ ಖಾರ ಇತ್ತು. ಹಾಗಾಗಿ ಅಳುತ್ತಿದ್ದೆ ಎಂದಿದ್ದಾಳೆ. ನಂತರ ನಿಧಾನವಾಗಿ ವಿಚಾರಿಸಿದಾಗ ವಿಚಾರ ಬಯಲಾಗಿದೆ. ತಕ್ಷಣ ಬಾಲಕಿಯ ತಾಯಿ ಏಪ್ರಿಲ್ 5ರಂದು ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.

ಇದನ್ನು ಓದಿ: Hafiz Muhammad Saeed : ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ 31 ವರ್ಷ ಜೈಲು ಶಿಕ್ಷೆ!

ಕೇಸು ದಾಖಲಿಸಿಕೊಂಡ ಪೊಲೀಸರು ಕೂಡಲೇ ಪೋಕ್ಸೋ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು 6 ಜನ ಆರೋಪಿಗಳನ್ನು ಬಂಧಿಸಿದ್ದರು. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News