ಕಾಲಮಿತಿಯಲ್ಲಿ ವಸತಿ ಯೋಜನೆ ಅನುಷ್ಠಾನಕ್ಕೆ ಸಚಿವ ಜಮೀರ್ ಅಹಮದ್ ಗಡುವು

Minister Zameer Ahmed : ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ರಾಜ್ಯದೆಲ್ಲೆಡೆ ಕೈಗೆತ್ತಿ ಕೊಂಡಿರುವ ವಸತಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಗಡುವು ನೀಡಿದ್ದಾರೆ.

Written by - Prashobh Devanahalli | Last Updated : Aug 21, 2023, 11:01 PM IST
  • ರಾಜ್ಯದೆಲ್ಲೆಡೆ ಕೈಗೆತ್ತಿ ಕೊಂಡಿರುವ ವಸತಿ ಯೋಜನೆ
  • ತಿಂಗಳಲ್ಲಿ 12 ಸಾವಿರ ಮನೆ ಹಂಚಿಕೆಗೆ ನಿರ್ದೇಶನ
  • ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಗಡುವು
ಕಾಲಮಿತಿಯಲ್ಲಿ ವಸತಿ ಯೋಜನೆ ಅನುಷ್ಠಾನಕ್ಕೆ ಸಚಿವ ಜಮೀರ್ ಅಹಮದ್ ಗಡುವು  title=

ಬೆಂಗಳೂರು : ಸೋಮವಾರ ಕಾವೇರಿ ಭವನದಲ್ಲಿರುವ ಗೃಹ ಮಂಡಳಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ನಿಗಮದಿಂದ  47882 ಕುಟುಂಬಗಳಿಗೆ ಸೂರು ಕಲ್ಪಿಸುವ 42 ಯೋಜನೆ ಕೈಗೆತ್ತಿ ಕೊಂಡಿದ್ದರೂ 4665 ಮನೆ ಮಾತ್ರ ಪೂರ್ಣಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು,  ಕಾಲಮಿತಿ ನಿಗದಿ ಮಾಡಿಕೊಂಡು ಆದಷ್ಟು ಶೀಘ್ರ ಯೋಜನೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ರಾಜ್ಯದ ಎಲ್ಲೆಡೆ ಕೈಗೊಂಡಿರುವ ಪ್ರತಿ ಯೋಜನೆ ಪ್ರಸ್ತುತ ಯಾವ ಹಂತದಲ್ಲಿದೆ ಎಂಬ ಬಗ್ಗೆ ವರದಿ ಸಲ್ಲಿಸಿ, ಅನುದಾನ ಕೊರತೆ ಅಥವಾ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ವರದಿಯಲ್ಲಿ ಸೇರಿಸಿ ಎಂದು ಸೂಚನೆ ನೀಡಿದರು.

ನಿಗಮದ ವಸತಿ ಯೋಜನೆಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಾಗಿ ಹಣ ಬಿಡುಗಡೆ ಮಾಡಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕಹಂತ ಹಂತ ವಾಗಿ ಹಣ ಬಿಡುಗಡೆ ಮಾಡದೆ ಕೆಲಸ ಪೂರ್ತಿ ಮಾಡದಿದ್ದರೂ ಯಾವ ಕಾರಣಕ್ಕೆ ಪಾವತಿ ಮಾಡಲಾಗಿದೆ ಎಂದು ಪ್ರೆಶ್ನೆ ಮಾಡಿದರು.

ಇದನ್ನೂ ಓದಿ: ನಾಗಮೋಹನ್ ದಾಸ್ ಕಮೀಟಿಯಿಂದ ಟೂಲ್ ಕಿಟ್ ಹಗರಣದ ನಿಸ್ಪಕ್ಷ ತನಿಖೆ ಅಸಾಧ್ಯ

ಇನ್ಮುಂದೆ ಯಾವುದೇ ಕಾರಣಕ್ಕೂ ಈ ರೀತಿ ಮಾಡುವಂತಿಲ್ಲ. ಜತೆಗೆ ಫಲಾನುಭವಿಗಳ ವಂತಿಗೆ ಪಡೆಯದೆ, ಬ್ಯಾಂಕ್ ಸಾಲ ದ ಖಾತರಿ ದೊರಕದೆ ಹಂಚಿಕೆ ಪತ್ರ ನೀಡುವಂತಿಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರ ಒಂದು ಲಕ್ಷ ಮನೆ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳದ ಬಗ್ಗೆಯೂ ಬೇಸರ ವ್ಯಕ್ತ ಪಡಿಸಿದ ಸಚಿವರು, ಕಾಲ ಮಿತಿಯಲ್ಲಿ ಮನೆ ನಿರ್ಮಿಸಿ ಕೊಡದಿದ್ದರೆ ಜನರಲ್ಲಿ ವಿಶ್ವಾಸ ಬರಲು ಹೇಗೆ ಸಾಧ್ಯ ಎಂದು ಕೇಳಿದರು.

ಒಂದು ತಿಂಗಳಲ್ಲಿ 12 ಸಾವಿರ ಮನೆ ಹಂಚಿಕೆಗೆ ಕ್ರಮ ವಹಿಸಬೇಕು. ಫಲಾನುಭ ವಿಗಳಿಗೆ ಬ್ಯಾಂಕ್ ಸಾಲ ವ್ಯವಸ್ಥೆ ಮಾಡಿಸಿ ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಕೀ ಹಸ್ತಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ಒಟ್ಟಾರೆ 2013 ರಿಂದ ಇದುವರೆಗಿನ ನಿಗಮದ ಯೋಜನೆಗಳ ಪ್ರಗತಿ ಕುರಿತು ವರದಿ ಸಲ್ಲಿಸುವಂತೆಯೂ ಸೂಚನೆ ನೀಡಿದರು. ಮುಂದಿನ ಪ್ರಗತಿ ಪರಿಶೀಲನೆ ಸಭೆಗೆ ಬರುವಷ್ಟರಲ್ಲಿ ಯಾವ್ಯಾವ ಯೋಜನೆ ಎಷ್ಟು ಪ್ರಗತಿ ಕಂಡಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿ ಮಾಹಿತಿ ಪಡೆಯಲಿದ್ದೇನೆ ಎಂದು ಹೇಳಿದರು.ದ್ದರು.

ಇದನ್ನೂ ಓದಿ: ಲೀಥಿಯಂ ಸೆಲ್ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳಿಸಲು ಯೋಜನೆ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News