Laxman Savadi: ‘ಬಲಗೈ ಉಂಗುರ ರಹಸ್ಯ’ ಶ್ರೀರಾಮುಲುಗೆ ಲಕ್ಷ್ಮಣ ಸವದಿ ಏನು ಮಾಡಿದ್ರು ಗೊತ್ತಾ?

ಸಚಿವ ಶ್ರೀರಾಮುಲು ಬಲಗೈ ಮಧ್ಯಬೆರಳಿನಲ್ಲಿದ್ದ ಉಂಗುರದ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಕುತೂಹಲದಿಂದ ಮಾಹಿತಿ ಪಡೆದುಕೊಂಡರು

Last Updated : Jan 4, 2021, 05:00 PM IST
  • ‘ಬಲಗೈ ಉಂಗುರ’ಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ನಡೆದ ಮಾತುಕತೆ ಪ್ರಸಂಗ ಕುತೂಹಲ ಕೆರಳಿಸಿದೆ.
  • ಸಚಿವ ಶ್ರೀರಾಮುಲು ಬಲಗೈ ಮಧ್ಯಬೆರಳಿನಲ್ಲಿದ್ದ ಉಂಗುರದ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಕುತೂಹಲದಿಂದ ಮಾಹಿತಿ ಪಡೆದುಕೊಂಡರು
  • ಉಂಗುರವನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು, ಯಾವ ಹರಳಿನ ಉಂಗುರವಿದು ಮುಂತಾದ ಪ್ರಶ್ನೆಗಳನ್ನು ಕೇಳಿದರು. ಅಲ್ಲದೆ ರಾಶಿ, ನಕ್ಷತ್ರದ ಆಧಾರದ ಮೇಲೆ ಹರಳನ್ನು ಧರಿಸಬೇಕು ಎಂಬ ಸಲಹೆ
Laxman Savadi: ‘ಬಲಗೈ ಉಂಗುರ ರಹಸ್ಯ’ ಶ್ರೀರಾಮುಲುಗೆ ಲಕ್ಷ್ಮಣ ಸವದಿ ಏನು ಮಾಡಿದ್ರು ಗೊತ್ತಾ? title=

ಬೆಂಗಳೂರು: ‘ಬಲಗೈ ಉಂಗುರ’ಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ನಡೆದ ಮಾತುಕತೆ ಪ್ರಸಂಗ ಕುತೂಹಲ ಕೆರಳಿಸಿದೆ. ನಗರದ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ಇಂದು ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀರಾಮು ಹಾಗೂ ಲಕ್ಷ್ಮಣ ಸವದಿ ಬಲಗೈ ಉಂಗುರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.

ಸಚಿವ ಶ್ರೀರಾಮುಲು ಬಲಗೈ ಮಧ್ಯಬೆರಳಿನಲ್ಲಿದ್ದ ಉಂಗುರದ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ(Laxman Savadi) ಕುತೂಹಲದಿಂದ ಮಾಹಿತಿ ಪಡೆದುಕೊಂಡರು. ದೊಡ್ಡ ಹಸಿರು ವರ್ಣದ ಹರಳು ಇದ್ದ ಉಂಗುರವನ್ನು ಸಚಿವ ಶ್ರೀರಾಮುಲು ಧರಿಸಿದ್ದರು. ಈ ಉಂಗುರದ ಬಗ್ಗೆ ಸವದಿ ಮಾಹಿತಿ ಪಡೆದುಕೊಂಡರು.

B.S.Yediyurappa,: ಸಿಎಂ ಬಿಎಸ್ ವೈಗೆ ಶಾಸಕರ ದೂರು..! ಯಾರ ಮೇಲೆ? ಯಾಕೆ?

ಸಿಎಂ‌ ಬಿಎಸ್‌ ಯಡಿಯೂರಪ್ಪ ಎದುರೇ ರಾಮುಲು ಕೈಯನ್ನು ಹಿಡಿದುಕೊಂಡ ಸವದಿ ಉಂಗುರದ ಕುರಿತಾಗಿ ವಿಚಾರಣೆ ನಡೆಸಿದರು. ಉಂಗುರವನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು, ಯಾವ ಹರಳಿನ ಉಂಗುರವಿದು ಮುಂತಾದ ಪ್ರಶ್ನೆಗಳನ್ನು ಕೇಳಿದರು. ಅಲ್ಲದೆ ರಾಶಿ, ನಕ್ಷತ್ರದ ಆಧಾರದ ಮೇಲೆ ಹರಳನ್ನು ಧರಿಸಬೇಕು ಎಂಬ ಸಲಹೆಯನ್ನು ನೀಡಿದರು.

KPTCL ‌ನಲ್ಲಿ 200 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ..!

ಅಷ್ಟೇ ಅಲ್ಲದೆ, ಯಾವ ಜ್ಯೋತಿಷಿ ಬಳಿ ಮಾತುಕತೆ ನಡೆಸಿ, ಇದನ್ನು ಧರಿಸಿದ್ದೀರಿ? ಸುಖಾಸುಮ್ಮನೆ ಹರಳು ಹಾಕಿಕೊಳ್ಳನಬಾರದು ಎಂಬ ಸಲಹೆಯನ್ನು ಡಿಸಿಎಂ ಲಕ್ಷ್ಮಣ ಸವದಿ ಸಚಿವರಾದ ಶ್ರೀರಾಮುಲಿಗೆ ನೀಡಿದ್ದಾರೆ. ಸುಮಾರು ನಾಲ್ಕೈದು ನಿಮಿಷಗಳ ಕಾಲ ರಾಮುಲು ಕೈ ಹಿಡಿದು ಉಂಗುರದ ಕುರಿತು ಮಾತನಾಡಿದ್ದು ಕುತೂಹಲ ಕೆರಳಿಸಿದೆ.

H D Kumaraswamy : ಸಂಕ್ರಾಂತಿ ಬಳಿಕ ಜೆಡಿಎಸ್ ನಲ್ಲಿ ಭಾರೀ ಬದಲಾವಣೆ.. ಏನಿರಬಹುದು ಚೇಂಜ್ !?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

iOS Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News