ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನದ ಅಂಗವಾಗಿ ಡಿಸೆಂಬರ್ 25 ರಂದು ಕಿಸಾನ್ ಸಮ್ಮಾನ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ಕರೆಂಟ್ ಸಿಗೋದೇ ಡೌಟು: ಹೈ ಸ್ಪೀಡ್ ಇಂಟರ್‌ನೆಟ್ ಕೊಡ್ತಾರಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್
ಪ್ರಧಾನಮಂತ್ರಿಗಳ ಭಾಷಣವನ್ನು ಎಲ್ಲ ರೈತರು ವೀಕ್ಷಿಸಲು ಅನುಕೂಲವಾಗುವಂತೆ ಎಪಿಎಂಸಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಜ.1ರಿಂದ ಶಾಲೆ ಪುನರಾರಂಭ, ಆದರೆ ಕಂಡೀಷನ್ ಅಪ್ಲೇ!
ಎಪಿಎಂಸಿ ತಿದ್ದುಪಡಿ ವಿಧೇಯಕದಿಂದ ರೈತರಿಗೆ ಆಗಲಿರುವ ಪ್ರಯೋಜನಗಳ ಕುರಿತು 30 ಜಿಲ್ಲೆಗಳಲ್ಲಿಯೂ ಪ್ರವಾಸ ಕೈಗೊಂಡು ಅರಿವು ಮೂಡಿಸಲಾಗುವುದು. ಎಪಿಎಂಸಿ ಮುಚ್ಚುವುದಿಲ್ಲ. ಕೆಲವರು ವಿನಾಕಾರಣ ಈ ಕುರಿತು ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
'ಬಿಜೆಪಿ ಹೈಕಮಾಂಡ್‌ಗೆ ಧಮ್, ತಾಕತ್ ಇದ್ರೆ ಬಿಎಸ್ ವೈ ರಾಜೀನಾಮೆ ಪಡೆಯಬೇಕು'
ವಾಜಪೇಯಿ ಜನ್ಮ ದಿನದ ಅಂಗವಾಗಿ ಕಿಸಾನ್ ಸಮ್ಮಾನ್ ದಿನಾಚರಣೆ ಹಮ್ಮಿಕೊಂಡಿದ್ದು, ಡಿಸೆಂಬರ್ 25ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. 18000 ಕೋಟಿ ರೂ. ರೈತರ ಖಾತೆಗೆ ಜಮಾ ಮಾಡಲಾಗುವುದು.
ನಾಳೆಯಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ : ಕರ್ಫ್ಯೂ ಅವಧಿಯಲ್ಲಿ ದಿಢೀರ್ ಬದಲಾವಣೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರದಿಂದ ತಲಾ ಎರಡು ಸಾವಿರ ರೂಪಾಯಿಯ ಮೂರು ಕಂತುಗಳಲ್ಲಿ ವಾರ್ಷಿಕ 6000 ವಿತರಿಸಲಿದ್ದು, ರಾಜ್ಯ ಸರ್ಕಾರದಿಂದ 2 ಕಂತುಗಳಲ್ಲಿ 4000 ರೂಪಾಯಿ ನೀಡಲಾಗುವುದು. ರಾಜ್ಯದ ರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿ ನೆರವು ಸಿಗಲಿದೆ ಎಂದು ಹೇಳಲಾಗಿದೆ.
ಗೋವಾದಲ್ಲಿ ಗೋ ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದೀರಾ : ಸಿಟಿ ರವಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ