ಬೈಕ್ ರ್ಯಾಲಿ‌ ವೇಳೆ ನಡೆದ ಲಾಠಿ ಚಾರ್ಜ್ಗೆ ಸಚಿವ ಅನಂತ್ ಕುಮಾರ್ ಬೇಸರ

  ಸಿದ್ದರಾಮಯ್ಯ ಪಾದಯಾತ್ರೆಗೆ ಅಂದಿನ ಬಿಜೆಪಿ ಸರ್ಕಾರ ಸಹಕಾರ ನೀಡಿತ್ತು. ಈಗ ರಾಜ್ಯ ಸರ್ಕಾರ ಬಿಜೆಪಿ ಯುವ ಮೋರ್ಚಾ ಬೈಕ್ ರ್ಯಾಲಿಗೆ ಅವಕಾಶ ಕೊಡಬೇಕಿತ್ತು-  ಕೇಂದ್ರ ಸಚಿವ ಅನಂತಕುಮಾರ್

Last Updated : Sep 5, 2017, 05:40 PM IST
ಬೈಕ್ ರ್ಯಾಲಿ‌ ವೇಳೆ ನಡೆದ ಲಾಠಿ ಚಾರ್ಜ್ಗೆ ಸಚಿವ ಅನಂತ್ ಕುಮಾರ್ ಬೇಸರ  title=

ನವ ದೆಹಲಿ: ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ ಗೆ ಕೇಂದ್ರ ಸಚಿವ ಅನಂತಕುಮಾರ್ ದೆಹಲಿಯಲ್ಲಿ  ಬೇಸರ ವ್ಯಕ್ತಪಡಿಸಿದ್ದಾರೆ. 

ಸಿದ್ದರಾಮಯ್ಯ ಪಾದಯಾತ್ರೆಗೆ ಅಂದಿನ ಬಿಜೆಪಿ ಸರ್ಕಾರ ಸಹಕಾರ ನೀಡಿತ್ತು. ಈಗ ರಾಜ್ಯ ಸರ್ಕಾರ ಬಿಜೆಪಿ ಯುವ ಮೋರ್ಚಾ ಬೈಕ್ ರ್ಯಾಲಿಗೆ ಅವಕಾಶ ಕೊಡಬೇಕಿತ್ತು. ಇದು ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಹೋರಾಟವಾಗಿತ್ತು. ಆದರೆ, ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಅನಂತ್ ಕುಮಾರ್ ತಿಳಿಸಿದರು.

ಮಂಗಳೂರು ಆತಂಕವಾದ ಮತ್ತು ಕೋಮುವಾದದ ತಾಣವಾಗಿದೆ. ಅಲ್ಲಿನ ಶಾಂತಿಗಾಗಿ ಬಿಜೆಪಿ ಯುವ ಮೋರ್ಚಾ ಬೈಕ್ ರ್ಯಾಲಿ ನಡೆಸುತ್ತಿತ್ತು. ಪೊಲೀಸರು ನಮ್ಮ ಯುವ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಈ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ‌ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.

Trending News