Relief: ಹಾಲಿನ ಉತ್ಪನ್ನಗಳ ದರ ಇಳಿಕೆ ಮಾಡಿ ಆದೇಶ ಹೊರಡಿಸಿದ ಕೆಎಂಎಫ್ ಎಂಡಿ, ಯಾವುದರ ಬೆಲೆಯಲ್ಲಿ ಎಷ್ಟು ಇಳಿಕೆ?

Milk Products Price Cut: ನಂದಿನಿ, ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರ ಮತ್ತು ಇತರೆ ಹಾಲಿನ ಉತ್ಪನ್ನಗಳ ಮೇಲೆ ಇಂದಿನಿಂದ ಜಿಎಸ್ಟಿ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಈ ನೂತನ ದರ ಜಾರಿಗೆ ಮಾಡಿ ಕೆಎಂಎಫ್ ಈ ದರ ಏರಿಕೆಯ ಕುರಿತು ತನ್ನ ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಜಾರಿಗೊಳಿಸಿತ್ತು.   

Written by - Manjunath Hosahalli | Edited by - Nitin Tabib | Last Updated : Jul 18, 2022, 10:45 PM IST
  • ಇಂದು ಬೆಳಗ್ಗೆಯಷ್ಟೇ ಈ ಉತ್ಪನ್ನಗಳ ಬೆಲೆಯನ್ನು 1 ರೂ. ನಿಂದ 3 ರೂ.ಗಳವರೆಗೆ ಹೆಚ್ಚಿಸಲಾಗಿತ್ತು.
  • ಆದರೆ ಗ್ರಾಹಕರಿಂದ ಈ ಬೆಲೆ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ
  • ಈ ಮೂತನ ಕ್ರಮ ಕೈಗೊಳ್ಳಲಾಗಿದೆ ಎಂದು ತನ್ನ ಆದೇಶದಲ್ಲಿ ಸತೀಶ್ ತಿಳಿಸಿದ್ದಾರೆ.
Relief: ಹಾಲಿನ ಉತ್ಪನ್ನಗಳ ದರ ಇಳಿಕೆ ಮಾಡಿ ಆದೇಶ ಹೊರಡಿಸಿದ ಕೆಎಂಎಫ್ ಎಂಡಿ, ಯಾವುದರ ಬೆಲೆಯಲ್ಲಿ ಎಷ್ಟು ಇಳಿಕೆ? title=
Milk Products Price Cut

Milk Products Price Cut: ಬೆಂಗಳೂರು: ನಂದಿನಿ, ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರ ಮತ್ತು ಇತರೆ ಹಾಲಿನ ಉತ್ಪನ್ನಗಳ ಮೇಲೆ ಇಂದಿನಿಂದ ಜಿಎಸ್ಟಿ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಈ ನೂತನ ದರ ಜಾರಿಗೆ ಮಾಡಿ ಕೆಎಂಎಫ್ ಈ ದರ ಏರಿಕೆಯ ಕುರಿತು ತನ್ನ ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಜಾರಿಗೊಳಿಸಿತ್ತು. ಇದು ನಂತರ ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ ಕೆಎಂಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಇದೀಗ ಕೆಲ ಉತ್ಪನ್ನಗಳ ದರಗಳನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗಾದರೆ ಬನ್ನಿ, ಯಾವ ಹೈನೋತ್ಪನ್ನಗಳ ಬೆಲೆಯಲ್ಲಿ ಎಷ್ಟು ಇಳಿಕೆಯನ್ನು ಮಾಡಲಾಗಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

ಇದನ್ನೂ ಓದಿ-ಸರ್ಕಾರದ ಹೊಸ ಪ್ಲಾನ್: ಟ್ರಾಫಿಕ್ ಪೊಲೀಸರ ಮಾದರಿಯಲ್ಲಿ ಜೈಲು ಸಿಬ್ಬಂದಿಗೂ ಬಾಡಿವೋರ್ನ್ ಕ್ಯಾಮೆರಾ

ಎಲ್ಲ ಹಾಲಿನ ಉತ್ಪನ್ನಗಳ ದರಗಳನ್ನು 50 ಪೈಸೆಯಿಂದ 1.50 ರಷ್ಟು ಕಡಿಮೆ ಮಾಡಲಾಗಿದೆ.  ಇಂದು ಬೆಳಗ್ಗೆಯಷ್ಟೇ ಈ ಉತ್ಪನ್ನಗಳ ಬೆಲೆಯನ್ನು 1 ರೂ. ನಿಂದ 3 ರೂ.ಗಳವರೆಗೆ ಹೆಚ್ಚಿಸಲಾಗಿತ್ತು. ಆದರೆ ಗ್ರಾಹಕರಿಂದ ಈ ಬೆಲೆ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಈ ಮೂತನ ಕ್ರಮ ಕೈಗೊಳ್ಳಲಾಗಿದೆ ಎಂದು ತನ್ನ ಆದೇಶದಲ್ಲಿ ಸತೀಶ್  ತಿಳಿಸಿದ್ದಾರೆ.

ಇದನ್ನೂ ಓದಿ-Good News: ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ತಪ್ಪದೆ ಓದಿ

ಪರಿಷ್ಕರಿಸಿದ ದರಗಳ ಪ್ರಕಾರ 200 ಗ್ರಾಂ ಮೊಸರಿಗೆ ಬೆಲೆ ರೂ. 10.50ಕ್ಕೆ ನಿಗದಿಯಾಗಿದೆ. ಒಟ್ಟಿನಲ್ಲಿ ಎಲ್ಲ ಹಾಲು ಉತ್ಪನ್ನಗಳ ದರ ಹಿಂದಿನ ದರಕ್ಕಿಂತ 50 ಪೈಸೆಯಷ್ಟು ಮಾತ್ರ ಹೆಚ್ಚಿಸಿದಂತಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News