ಮೇಕೆದಾಟು ಪಾದಯಾತ್ರೆ : ರಂಗೋಲಿ ಬಿಡಿಸಿ ಪಾದಯಾತ್ರಿಗಳ ಸ್ವಾಗತ; ಬಾಯಾರಿಕೆಗೆ ಎಳನೀರು!

 ಇಂದು ತಾಪಮಾನ ಹೆಚ್ಚಿರುವ ಹಿನ್ನಲೆಯಲ್ಲಿ ಪಾದಯಾತ್ರಿಗಳಿಗೆ ಎಳನೀರನ್ನು ರಸ್ತೆಯ ಬದಿಯಲ್ಲಿ ಉಚಿತವಾಗಿ ನೀಡುತ್ತಿದ್ದಾರೆ. ಜೊತೆಗೆ ರಂಗೋಲಿ ಬಿಡಿಸಿ ಸ್ವಾಗತ ಕೋರಲಾಗಿದೆ. 

Written by - Prashobh Devanahalli | Edited by - Ranjitha R K | Last Updated : Feb 28, 2022, 12:01 PM IST
  • ಎರಡನೇ ದಿನಕ್ಕೆ ಕಾಲಿಟ್ಟ ಮೇಕೆದಾಟು 2.0 ಪಾದಯಾತ್ರೆ
  • ರಸ್ತೆಯುದ್ದಕ್ಕೂ ಅಲ್ಲಲ್ಲಿ ರಂಗೋಲಿ
  • ಬಿಡದಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಳನೀರು
 ಮೇಕೆದಾಟು ಪಾದಯಾತ್ರೆ : ರಂಗೋಲಿ ಬಿಡಿಸಿ ಪಾದಯಾತ್ರಿಗಳ ಸ್ವಾಗತ; ಬಾಯಾರಿಕೆಗೆ ಎಳನೀರು! title=
ರಸ್ತೆಯುದ್ದಕ್ಕೂ ಅಲ್ಲಲ್ಲಿ ರಂಗೋಲಿ

ಬೆಂಗಳೂರು : ಮೇಕೆದಾಟು 2.0, ಎರಡನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಬಿಡದಿಯಿಂದ ಕೆಂಗೇರಿಗೆ ಕೆಪಿಸಿಸಿ ನಾಯಕರು ನಡೆಯಲಿದ್ದಾರೆ (Congress Leaders). ಇಂದಿನ ಪಾದಯಾತ್ರೆ ವೇಳೆ ಪಾದಯಾತ್ರಿಗಳಿಗೆ ಸ್ವಾಗತ ಕೋರುವ ದೃಷ್ಟಿಯಿಂದ ರಸ್ತೆಯಲ್ಲಿ ಅಲ್ಲಲ್ಲಿ ರಂಗೋಲಿ ಬಿಡಿಸಲಾಗಿದೆ. 

ಇಂದು ತಾಪಮಾನ ಹೆಚ್ಚಿರುವ ಹಿನ್ನಲೆಯಲ್ಲಿ ಪಾದಯಾತ್ರಿಗಳಿಗೆ ಎಳನೀರನ್ನು ರಸ್ತೆಯ ಬದಿಯಲ್ಲಿ ಉಚಿತವಾಗಿ ನೀಡುತ್ತಿದ್ದಾರೆ. ಜೊತೆಗೆ ರಂಗೋಲಿ (Rangoli)ಬಿಡಿಸಿ ಸ್ವಾಗತ ಕೋರಲಾಗಿದೆ. 

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ: ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ

ಈ ಕಾರ್ಯಕ್ರಮವನ್ನು ಬಿಡದಿ ಬ್ಲಾಕ್ ಕಾಂಗ್ರೆಸ್  ಆಯೋಜನೆ ಮಾಡಿದೆ (Bidadi block congress). ವ್ಯವಸ್ಥೆಯನ್ನ ಸಂಸದ ಡಿಕೆ ಸುರೇಶ್ (DK Suresh)ಅವಲೋಕಿಸಿ ಎಳನೀರನ್ನು ಕುಡಿದರು. ಇಂದು ರಾತ್ರಿ ಕೆಂಗೇರಿಗೆ ಪಾದಯಾತ್ರೆ ಆಗಮಿಸಲಿದ್ದು, ನಾಳೆ ಬೆಂಗಳೂರಿಗೆ ಪಾದಯಾತ್ರೆ ಮುಂದುವರೆಯಲಿದೆ (Mekedatu Padayatre).

ಮೇಕೆದಾಟು ಯೋಜನೆ  ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ  ಜನವರಿ 9ರಂದು ಆರಂಭವಾಗಿತ್ತು. ಕೊರೊನಾ ಸಾಂಕ್ರಾಮಿಕದ (Coronavirus) ಹಿನ್ನೆಲೆಯಲ್ಲಿ  ಮೇಕೆದಾಟು ಪಾದಯಾತ್ರೆಯನ್ನು ರಾಮನಗರದಲ್ಲಿ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಆದರೆ ಇದೀಗ ಅದೇ ಸ್ಥಳದಿಂದ ಕಾಂಗ್ರೆಸ್ ನಾಯಕರು ‘ಮೇಕೆದಾಟು ಪಾದಯಾತ್ರೆ 2.0’ಗೆ ಚಾಲನೆ ನೀಡಿದ್ದಾರೆ. 

ಇದನ್ನೂ ಓದಿ :  ಮೇಕೆದಾಟು ಪಾದಯಾತ್ರೆ: ಸ್ವಂತ ಖರ್ಚಿನಿಂದ ಒಂದು ಟನ್ ಕಬಾಬ್ ವಿತರಣೆ!

ಮೇಕೆದಾಟು 2ನೇ ಹಂತದ ಪಾದಯಾತ್ರೆ ಮಾರ್ಚ್ 3ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪಲಿದೆ. ಇನ್ನು ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ಸರ್ಕಾರ (BJP Government) ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ (Congress) ಆರೋಪಿಸಿದರೆ, ತಮ್ಮ ಸರ್ಕಾರವಿದ್ದಾಗ ಯೋಜನೆಯನ್ನು ಏಕೆ ಜಾರಿ ಮಾಡಿಲ್ಲವೆಂದು ಎನ್ನುವುದು ಬಿಜೆಪಿ ಪ್ರಶ್ನೆ . 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News