ಬೆಂಗಳೂರು: ಬೆಂಗಳೂರಿನ ನೂತನ ಮಹಾಪೌರ ಸಂಪತ್ ರಾಜ್ ನಗರ ಪರಿಶೀಲನೆಗಾಗಿ ಬೆಳಿಗ್ಗೆ 8 ಗಂಟೆಗೆ ಬರುವುದಾಗಿ ಹೇಳಿ 10 ಗಂಟೆಗೆ ಹೋಗಿದ್ದಾರೆ. ಜನರು ತಮ್ಮ ಸಮಸ್ಯೆ ಹೇಳಿಕೊಳ್ಳುವ ಸಲುವಾಗಿ ಸಾಲಾಗಿ ಕಾದು ನಿಂತಿದ್ದಾರೆ. ಆದರೆ ಮಾನ್ಯ ಮಹಾಪೌರರಿಗೆ ಸಮಯದ ಅರಿವೇ ಇಲ್ಲ.
ಪುಲಿಕೇಶೀ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಸಿಲ್ಟ್ ಅಂಡ್ ಟ್ರ್ಯಾಕ್ಟರ್ ಹಾಗೂ ಬಿಬಿಎಂಪಿ ಪೌರ ಕಾರ್ಮಿಕರ ಪರಿಶೀಲನೆ ಕೈಗೊಂಡಿದ್ದ ಮೇಯರ್. ಮೇಯರ್ ಪರಿಶೀಲನೆ ವೇಳೆ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಉಂಟಾಗಿದೆ. ಅಲ್ಲದೆ ಮೇಯರ್ ಎದುರೇ ಕಾರ್ಮಿಕರು ಕೈಗೆ ಗ್ಲೌಸ್, ಮಾಸ್ಕ್ ಹಾಕದೆ ಕೆಲಸ ಮಾಡುತ್ತಿರುವುದನ್ನು ನೋಡಿದರೂ ಮೇಯರ್ ಅವರ ಸಮಸ್ಯೆಯನ್ನು ಕೇಳದೆ ಹಾಗೆಯೇ ಮುಂದೆ ಸಾಗಿದ್ದಾರೆ.
ಡಿಜೆ ಹಳ್ಳಿ ವಾರ್ಡ್ ನ ಟ್ಯಾನರಿ ರಸ್ತೆ ಸುತ್ತಮುತ್ತಲಿನ ಪರದೇಶಗಳಲ್ಲಿ ಮೇಯರ್ ವೀಕ್ಷಣೆ ನಡೆಸಿದ್ದಾರೆ. ಫ್ರೆಜರ್ ಟೌನ್ ನ ರೈಲ್ವೆ ಬ್ರಿಡ್ಜ್ ಬಳಿ ಮೇಯರ್ ಸಂಪತ್ ರಾಜ್ ನೇತೃತ್ವದಲ್ಲಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.