32 ಕಿ.ಮೀ ಮೈಲೇಜ್ ನೀಡುವ ಕಾರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮಾರುತಿ

ಕಾರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ತನ್ನ ವ್ಯಾಗನ್-Rನ BS-VI ಇಂಜಿನ್ ಹೊಂದಿರುವ CNG ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ

Last Updated : Feb 14, 2020, 09:33 PM IST
32 ಕಿ.ಮೀ ಮೈಲೇಜ್ ನೀಡುವ ಕಾರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮಾರುತಿ title=

ಕಾರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ತನ್ನ ವ್ಯಾಗನ್-Rನ BS-VI ಇಂಜಿನ್ ಹೊಂದಿರುವ CNG ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಷೋ ರೂಮ್ ಬೆಲೆ 5.25 ರೂ.ಗಳಿಂದ ಆರಂಭವಾಗಲಿದೆ.

ಕಾರಿನ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ Wagon R S-CNG ಹೊಸ ಹೊರಸೂಸುವಿಕೆಯ ಮಾನದಂಡಗಳಿಗೆ ಅನುಗುಣವಾಗಿ ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ. ಈ ಕಾರಿನಲ್ಲಿ ಸುಮಾರು 60 ಲೀಟರ್ ಕ್ಷಮತೆಯ ಇಂಧನ ಟ್ಯಾಂಕ್ ಇರಲಿದ್ದು, ಪ್ರತಿ ಕೆಜಿ ಇಂಧನಕ್ಕೆ ಇದು 32.52 ಮೈಲೇಜ್ ನೀಡಲಿದೆ ಎಂದು ಹೇಳಿದೆ.

ಎಕ್ಸ್ ಷೋರೂಮ್ ಬೆಲೆ
ವ್ಯಾಗನ್ ಆರ್ ಎಸ್-ಸಿಎನ್‌ಜಿ, ಎಲ್‌ಎಕ್ಸ್‌ಐ ಮತ್ತು ಎಲ್‌ಎಕ್ಸ್‌ಐ (ಒ) ಎಂಬ ಎರಡು ಆವೃತ್ತಿಗಳನ್ನು ಹೊಂದಿದ್ದು, ಇವುಗಳ ಎಕ್ಸ್ ಷೋರೂಮ್ ಬೆಲೆಯನ್ನು ಕ್ರಮವಾಗಿ 5.25 ಲಕ್ಷ ಮತ್ತು 5.32 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.

ಮಿಶನ್ ಗ್ರೀನ್ ಮಿಲಿಯನ್
ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಕಾರ್ಯಕಾರಿ ನಿರ್ದೇಶಕ(ಮಾರ್ಕೆಟಿಂಗ್) ಶಶಾಂಕ್ ಶ್ರೀವಾಸ್ತವ್, ಮಿಶನ್ ಗ್ರೀನ್ ಮಿಲಿಯನ್ ಘೋಷಣೆಯ ಜೊತೆಗೆ ನಾವು ದೇಶದ ಪರಿಸರಕ್ಕೆ ಅನುಕೂಲವಾಗುವ ಸಂಚಾರಕ್ಕೆ ಒತ್ತು ನೀಡುವಲ್ಲಿ ತಮ್ಮ ಕಂಪನಿ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಆಟೋ ಎಕ್ಸ್ಪೋ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಟೋ ಎಕ್ಸ್ಪೋನಲ್ಲಿ ಹೇಳಿದೆ ನೀಡಿದ್ದ ಕಂಪನಿ, ತನ್ನ ಮಿಶನ್ ಗ್ರೀನ್ ಮಿಲಿಯನ್ ಅಡಿ ಮುಂದಿನ ಕೆಲ ವರ್ಷಗಳಲ್ಲಿ CNG, HYBRID ಹಾಗೂ ELECTRIC ಆವೃತ್ತಿಯ 10 ಲಕ್ಷ ವಾಹನಗಳನ್ನು ಮಾರಾಟ ಮಾಡುವುದಾಗಿ ಹೇಳಿತ್ತು.

Trending News