ಮೊಳಗಿದ ‘ಅಮರ್ ರಹೇ ಪ್ರಾಂಜಲ್’ ಘೋಷಣೆ; ವೀರಯೋಧನ ಅಂತಿಮ ದರ್ಶನಕ್ಕೆ ಜನಸಾಗರ

Martyr soldier K Pranjal's funeral: ಇಂದು ಬೆಳಗ್ಗೆ 10.15 ರಿಂದ 10.30ರವರೆಗೆ ಸೇನಾ ತಂಡ ಮತ್ತು ಸ್ಥಳೀಯ ಪೊಲೀಸ್ ಪಡೆಗಳಿಂದ ‘ಗಾಢ್ ಆಫ್ ಆನರ್’ ಗೌರವ ಸಲ್ಲಿಸಲಾಗುತ್ತದೆ. ನಂತರ 10.30 ರಿಂದ 11.30ರವರೆಗೆ ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಪೂಜೆ ನೆರವೇರಲಿದೆ.

Written by - Puttaraj K Alur | Last Updated : Nov 25, 2023, 10:01 AM IST
  • ಜಿಗಣಿಯ ನಂದನವನ ಬಡಾವಣೆ ಮನೆಯ ಸಮೀಪ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ
  • ಬೆಳಗ್ಗೆ 11ಕ್ಕೆ ಸೇನಾ ವತಿಯಿಂದ ಹುತಾತ್ಮ ಯೋಧ ಪ್ರಾಂಜಲ್ ಅವರಿಗೆ ‘ಗಾರ್ಡ್ ಆಫ್ ಆನರ್’ ಗೌರವ
  • ಕೂಡ್ಲುಗೆಟ್ ವಿದ್ಯುತ್ ಚಿತಾಗರದಲ್ಲಿ ಬ್ರಾಹ್ಮಣ ವಿಧಿ-ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ
ಮೊಳಗಿದ ‘ಅಮರ್ ರಹೇ ಪ್ರಾಂಜಲ್’ ಘೋಷಣೆ; ವೀರಯೋಧನ ಅಂತಿಮ ದರ್ಶನಕ್ಕೆ ಜನಸಾಗರ title=
ಹುತಾತ್ಮ ವೀರಯೋಧನಿಗೆ ಸಿಎಂ ಗೌರವನಮನ

ಆನೇಕಲ್: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಶುಕ್ರವಾರ ರಾತ್ರಿ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ತರಲಾಯಿತು. ಸಕಲ ಸೇನಾ ಗೌರವಗಳೊಂದಿಗೆ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

HALನಲ್ಲಿ ಮೃತ ಯೋಧನ ಪಾರ್ಥಿವ ಶರೀರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಕೆ.ಜೆ ಜಾರ್ಜ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಇದನ್ನೂ ಓದಿ: ಡಿಕೆಶಿ ವಿರುದ್ಧ CBI ತನಿಖೆ ವಾಪಸ್: ನಾಳೆ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ!

ಹುತಾತ್ಮ ಪ್ರಾಂಜಲ್ ತಂದೆ ವೆಂಕಟೇಶ್, ತಾಯಿ ಅನುರಾಧ, ಪತ್ನಿ ಅದಿತಿಯವರು ಸಹ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. HAL ವಿಮಾನ ನಿಲ್ದಾಣದಿಂದ ಆನೇಕಲ್‌ ತಾಲೂಕಿನ ಜಿಗಣಿ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಜಿಗಣಿಯ ನಂದನವನ ಬಡಾವಣೆ ಮನೆಯ ಸಮೀಪವೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಇಂದು ಬೆಳಗ್ಗೆ 11ಗಂಟೆಗೆ ಸೇನಾ ವತಿಯಿಂದ ಹುತಾತ್ಮ ಯೋಧ ಪ್ರಾಂಜಲ್ ಅವರಿಗೆ ‘ಗಾರ್ಡ್ ಆಫ್ ಆನರ್’ ಗೌರವ ಸಲ್ಲಿಸಲಾಗುವುದು. ನಂತರ ಕೂಡ್ಲುಗೆಟ್ ವಿದ್ಯುತ್ ಚಿತಾಗರದಲ್ಲಿ ಬ್ರಾಹ್ಮಣ ವಿಧಿ-ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಲಿದೆ.

ಅಂತಿಮ ದರ್ಶನಕ್ಕೆ ಸಲಕ ವ್ಯವಸ್ಥೆ

ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ನಿವಾಸದತ್ತ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು, ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರ ವೀಕ್ಷಣೆ ಹಾಗೂ ಮೆರವಣಿಗೆಯ ಕುರಿತು ಬೆಂಗಳೂರು ಗ್ರಾಮಾಂತರ ಎಸ್‍ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾಹಿತಿ ಪಡೆಯುತ್ತಿದ್ದಾರೆ. ಪಾರ್ಥಿವ ಶರೀರದ ಎಡ ಭಾಗದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ದರ್ಶನದ ಬಳಿಕ ಬಲಭಾಗದಲ್ಲಿ ತೆರಳಲು ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ನೂರಾರು ಜನರು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ನಿವಾಸದ ಬಳಿ ಆಪ್ತರು ಹಾಗೂ ಕುಟುಂಬಸ್ಥರು ಸಹ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ದಪ್ಪ ಚರ್ಮದ ಸರ್ಕಾರದ ವಿರುದ್ಧ ಜನರೇ ದಂಗೆ ಹೇಳುವ ಕಾಲ ದೂರವಿಲ್ಲ: ಬಿ.ವೈ.ವಿಜಯೇಂದ್ರ

23 ಕಿಮೀ ಪಾರ್ಥಿವ ಶರೀರದ ಮೆರವಣಿಗೆ

ಬೆಳಗ್ಗೆ 7.30 ರಿಂದ 9.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 9.45 ರಿಂದ 10.15ರವರೆಗೆ ಗಣ್ಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 10.15 ರಿಂದ 10.30ರವರೆಗೆ ಸೇನಾ ತಂಡ ಮತ್ತು ಸ್ಥಳೀಯ ಪೊಲೀಸ್ ಪಡೆಗಳಿಂದ ‘ಗಾಢ್ ಆಫ್ ಆನರ್’ ಗೌರವ ಸಲ್ಲಿಸಲಾಗುತ್ತದೆ. ನಂತರ 10.30 ರಿಂದ 11.30ರವರೆಗೆ ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಪೂಜೆ ನೆರವೇರಲಿದೆ. ಬಳಿಕ 23 ಕಿಮೀ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ಓಟಿಸಿ ವೃತ್ತ, ಜಿಗಣಿ, ಬನ್ನೇರುಘಟ್ಟ, ನೈಸ್ ರಸ್ತೆ ಮಾರ್ಗವಾಗಿ ಕೂಡ್ಲು ತಲುಪಲಿದೆ. ಕೊನೆಯದಾಗಿ ಕೂಡ್ಲುಗೇಟ್‍ನ ಸೋಮಸುಂದರ್ ಪಾಳ್ಯ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರಾದಾಯದಂತೆ ಅಂತಿಮ‌ ಸಂಸ್ಕಾರ ನೆರವೇರಲಿದೆ. ಕುಟುಂಸ್ಥರಿಗೆ ಮಾತ್ರ ಅಂತಿಮ ವಿಧಿ-ವಿಧಾನಕ್ಕೆ ಅವಕಾಶ ನೀಡಲಾಗಿದೆ.

50 ಲಕ್ಷ ರೂ. ಪರಿಹಾರ ಘೋಷಣೆ

ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News