ಮಂಗಳೂರು: ಸಿನಿಮಾ ದೃಶ್ಯದಲ್ಲಿ ತೋರಿಸುವಂತೆ ಮಂಗಳೂರು (Mangalore) ಪೊಲೀಸರು ಕಳ್ಳನನ್ನು ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ.
ನೆಹರು ಮೈದಾನದ ಬಳಿ ವ್ಯಕ್ತಿಯೋರ್ವರ ಮೊಬೈಲ್ ಕದ್ದು (Mobile theft) ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ ಬುಧವಾರ ಈ ಘಟನೆ ನಡೆದಿದೆ.
ಜನವರಿ 12 (ನಿನ್ನೆ) ರಂದು ಮಂಗಳೂರಿನಲ್ಲಿ ಘಟನೆ ನಡೆದ 10 ನಿಮಿಷದಲ್ಲಿ ರಾಬರಿ (Robbery) ಪ್ರಕರಣದ ಆರೋಪಿಯನ್ನು ಮಂಗಳೂರಿನ ಪೊಲೀಸ್ ವರುಣ್ ರವರು ಬೆನ್ನಟ್ಟಿ ಹಿಡಿದಿಡಿದ್ದಾರೆ.
ಕಿರಿದಾದ ಮಾರ್ಗಗಳು ಮತ್ತು ಬೀದಿಗಳಲ್ಲಿ ಅವರನ್ನು ಬೆನ್ನಟ್ಟಿದ ನಂತರ, ಪೊಲೀಸರು ಅಪರಾಧಿಯನ್ನು ಹಿಡಿಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Video Viral) ಆಗಿದೆ.
Mangalore:ಬಾಲ್ಯದಲ್ಲಿ ನಾವು ಕಳ್ಳ-ಪೊಲೀಸ್ ಆಟ ಆಡಿರಬೇಕು, ಆದರೆ ನಿಜ ಜೀವನದಲ್ಲಿ ಇದನ್ನು ನೋಡುವುದು ಅಪರೂಪ. ಸಿನಿಮೀಯ ರೀತಿಯಲ್ಲಿ ಪೊಲೀಸರು ಕಳ್ಳನನ್ನು ಹಿಡಿದಿರುವ ಘಟನೆ ಮಂಗಳೂರಿನಲ್ಲಿ ಜರುಗಿದೆ.#Mangalore #Mangalorecrime #Crimenews #ViralVideo #Zeekannadanews #Mangalorepolice pic.twitter.com/Bwxflw1lTE
— Zee Kannada News (@ZeeKannadaNews) January 13, 2022
ಆರೋಪಿಯಿಂದ ಕದ್ದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಿನಿಮಾ ಚೇಸ್ ಇದೀಗ ಮಂಗಳೂರಿನಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದು, ವಿಡಿಯೋ ವೈರಲ್ ಆಗಿದೇ. ಹಲವರು ಪೊಲೀಸರ ಶೌರ್ಯವನ್ನು ಶ್ಲಾಘಿಸಿದ್ದಾರೆ.
ಈ ವಿಡಿಯೋವನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿ ಕುಮಾರ್ (Shashi Kumar) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಲಿವ್ ಇನ್ ರಿಲೇಷನ್ ಶಿಪ್ ವೇಳೆ ಹುಟ್ಟಿತು ಅನುಮಾನ, ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸೋ ನಾಟಕ.. ಆಗಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.