ಹೆಂಡತಿ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ ಗಂಡನ ಬಂಧನ

ವಿಜಯಪುರ ಮೂಲದ ದಂಪತಿ ಕಳೆದ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು‌.‌ ನಗರಕ್ಕೆ ಬಂದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು‌.

Written by - VISHWANATH HARIHARA | Last Updated : Jul 26, 2023, 03:49 PM IST
  • ಆರು ತಿಂಗಳ ಹಿಂದಷ್ಟೇ ಮದುವೆಯಾದ ಜೋಡಿ ಅದು
  • ಮಾತು ಮಾತಿಗೂ ಜಗಳ ನಡೆಯುತ್ತಿತ್ತು
  • ನಿನ್ನೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ಹೆಂಡತಿ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ  ಗಂಡನ ಬಂಧನ  title=

ಬೆಂಗಳೂರು : ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿ ಯಾರಿಗೂ ಅನುಮಾನ ಬರಬಾರದು ಅಂತಾ ಪ್ಲ್ಯಾನ್ ಮಾಡಿ ನೇಣಿಗೆ ಶರಣಾಗಿರುವ ರೀತಿ ಹೈಡ್ರಾಮ ಮಾಡಿದ್ದ ಕಿಲಾಡಿ ಗಂಡ ಪೊಲೀಸರ  ಅತಿಥಿಯಾಗಿದ್ದಾನೆ. ಆರೋಪಿ ಸಿದ್ದಪ್ಪ ಬಸವರಾಜನನ್ನ ಹೆಂಡತಿ ಕೆಂಚಮ್ಮಳ ಕೊಲೆ ಆರೋಪದ ಮೇರೆಗೆ ಬಂಧಿಸಲಾಗಿದೆ. 

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ವಾಸವಾಗಿದ್ದ ಆರೋಪಿ ಸಿದ್ದಪ್ಪ ಬಸವರಾಜ ಹೆಂಡತಿ ಕೆಂಚಮ್ಮಳನ್ನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ  ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.  

ಇದನ್ನೂ  ಓದಿ : Today's Dam Water Level: ಯಾವ ಡ್ಯಾಂನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹ ವಾಗಿದೆ ಗೊತ್ತಾ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!

ವಿಜಯಪುರ ಮೂಲದ ದಂಪತಿ ಕಳೆದ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು‌.‌ ನಗರಕ್ಕೆ ಬಂದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು‌. ವಿವಾಹವಾದ ಆರಂಭದಲ್ಲೇ ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಪ್ರತಿ ದಿನ ಇಬ್ಬರ ನಡುವೆ ಜಗಳವಾಗುತ್ತಿತ್ತು. ನಿನ್ನೆ ಸಹ ದಂಪತಿ ನಡುವೆ ಕಿರಿಕ್ ಶುರುವಾಗಿತ್ತು. ಇದೇ ಕೋಪದಲ್ಲಿ ಸಿದ್ದಪ್ಪ ಹೆಂಡತಿ ಕೆಂಚಮ್ಮಳ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 

ನಂತರ ಆತಂಕಗೊಂಡ ಸಿದ್ದಪ್ಪ, ಹತ್ಯೆ ವಿಷಯ ತಿಳಿದರೆ ಪೊಲೀಸರು ಬಂಧಿಸುತ್ತಾರೆ ಎಂದು ಭಾವಿಸಿ ತಾನೇ ಹೆಂಡತಿಯನ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಕ್ರೈಂ ಸೀನ್ ಸೃಷ್ಟಿ ಮಾಡಿ ಸಂಬಂಧಿಕರಿಗೆ ಪೋನ್ ಮಾಡಿ ನನ್ನ ಹೆಂಡತಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಕಥೆ ಹೇಳಿದ್ದಾನೆ. ತನ್ನ ಮೇಲೆ ಅನುಮಾನ ಬರಬಾರದು ಎನ್ನುವ ಉದ್ದೇಶದಿಂದ ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದ. 

ಇದನ್ನೂ  ಓದಿ EMRS Recruitment 2023: ಏಕಲವ್ಯ ಮಾದರಿ ಶಾಲೆಯಲ್ಲಿ 4,062 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಇಂದು ಮುಂಜಾನೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಸಿದ್ದಪ್ಪನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ  ಒಪ್ಪಿಕೊಂಡಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News