ʼಮಾಡಾಳ್‌ ಲೋಕಾಯುಕ್ತ ದಾಳಿʼ... 18 ಗಂಟೆ ಶೋಧ, 8.12 ಕೋಟಿ ಹಣ ಸೀಜ್..!

ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಪುತ್ರನ ಕಚೇರಿ ಹಾಗೂ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. ಸತತ 18 ಗಂಟೆಗಳ‌ ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಎಂಎಲ್‌ಎ ಮಗನ ಕಚೇರಿ ಹಾಗೂ ನಿವಾಸದಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ಅಕ್ರಮ ಹಣ ಪತ್ತೆಯಾಗಿದೆ‌. ಈ ಅಕ್ರಮ ಹಣ ಸಂಗ್ರಹಿಸುವಲ್ಲಿ ಶಾಸಕರನ್ನೆ A1 ಆರೋಪಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ತಲೆಮರೆಸಿಕೊಂಡಿರೋ ವಿರೂಪಾಕ್ಷಪ್ಪನ ಪತ್ತೆಗೆ ಶೋಧ ನಡೆಸಿದ್ದಾರೆ.‌ ಹಾಗಾದ್ರೆ ಲೋಕಾ ದಾಳಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

Written by - VISHWANATH HARIHARA | Edited by - Krishna N K | Last Updated : Mar 3, 2023, 07:37 PM IST
  • ಮಾಡಾಳ್ ವಿರೂಪಾಕ್ಷಪ್ಪ ಪುತ್ರನಿಂದ ಟೆಂಡರ್‌ಗಾಗಿ ಲಂಚ.
  • ಲೋಕಾ ಅಧಿಕಾರಿಗಳಿಂದ 18 ಗಂಟೆ ಶೋಧ, 8.12 ಕೋಟಿ ಹಣ ಸೀಜ್.
  • 8 ಗುಟ್ಕಾ ಬ್ಯಾಗಗಳ ಒಳಗಿತ್ತು 500, 2 ಸಾವಿರ ಮುಖಬೆಲೆಯ 6 ಕೋಟಿ ಹಣ.
ʼಮಾಡಾಳ್‌ ಲೋಕಾಯುಕ್ತ ದಾಳಿʼ... 18 ಗಂಟೆ ಶೋಧ, 8.12 ಕೋಟಿ ಹಣ ಸೀಜ್..! title=

ಬೆಂಗಳೂರು : ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಪುತ್ರನ ಕಚೇರಿ ಹಾಗೂ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. ಸತತ 18 ಗಂಟೆಗಳ‌ ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಎಂಎಲ್‌ಎ ಮಗನ ಕಚೇರಿ ಹಾಗೂ ನಿವಾಸದಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ಅಕ್ರಮ ಹಣ ಪತ್ತೆಯಾಗಿದೆ‌. ಈ ಅಕ್ರಮ ಹಣ ಸಂಗ್ರಹಿಸುವಲ್ಲಿ ಶಾಸಕರನ್ನೆ A1 ಆರೋಪಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ತಲೆಮರೆಸಿಕೊಂಡಿರೋ ವಿರೂಪಾಕ್ಷಪ್ಪನ ಪತ್ತೆಗೆ ಶೋಧ ನಡೆಸಿದ್ದಾರೆ.‌ ಹಾಗಾದ್ರೆ ಲೋಕಾ ದಾಳಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

KSDL ನಿಗಮದ ಟೆಂಡರ್ ನೀಡಲು ಲಂಚದ ಬೇಡಿಕೆ ಸಂಬಂಧ ನಿನ್ನೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಕ್ಷ ಲಕ್ಷ ಹಣ ಸ್ವೀಕರಿಸಬೇಕಾದ್ರೆ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಡಾಗಿ ಸಿಕ್ಕಿ ಬಿದ್ದಿದ್ರು. ದಾಳಿ ವೇಳೆ ಕೆ.ಕೆ. ಗೆಸ್ಟ್ ಹೌಸ್ ಸಮೀಪದ ಎಂ ಸ್ಟುಡಿಯೋ ಇಂಚಿಂಚು ಜಾಲಾಡಿದ ಅಧಿಕಾರಿಗಳು ಅಲ್ಲಿ ಸಿಕ್ಕ ಹಣ ಹಾಗೂ ಅಕ್ರಮ‌ ದಾಖಲೆಗಳನ್ನ ವಶಪಡಿಸಿಕೊಂಡಿದ್ರು. ಅಷ್ಟೇ ಅಲ್ಲದೇ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪನ ಪುತ್ರ ಮಾಡಾಳ್ ಪ್ರಶಾಂತ ಸೇರಿ ಐವರು ಆರೋಪಿಗಳನ್ನ ಬಂಧಿಸಿದ್ರು. ಆ ವೇಳೆ ಸಿಕ್ಕ ಮಾಹಿತಿ ಮೇರೆಗೆ ಸಂಜಯ್ ನಗರದ ಮಾಡಾಳ್ ಪ್ರಶಾಂತ್ ವಾಸವಾಗಿದ್ದ ಕೆಎಂವಿ ಮ್ಯಾನ್ಷನ್ ಅಪಾರ್ಟ್ ಮೇಲೆ ದಾಳಿ ನಡೆಸಿದ್ದು ಸತತ 18 ಗಂಟೆ ಶೋಧ ಕಾರ್ಯಚರಣೆ ನಡೆಸಿ ದಾಳಿ ಅಂತ್ಯಗೊಳಿಸಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಚನ್ನಗಿರಿ ಶಾಸಕರ ಪುತ್ರ; ಸಿಎಂ ಬೊಮ್ಮಾಯಿ ಹೇಳಿದ್ದೇನು..?

ನಿನ್ನೆ ಸಂಜೆ 6.30 ರ ಸುಮಾರಿಗೆ ಸಂಜಯನಗರದ ನಿವಾಸದ ಮೇಲೆ‌ ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ಹಾಗೂ ಎಸ್ಪಿ ಅಶೋಕ್ ನೇತೃತ್ವದಲ್ಲಿ ದಾಳಿ‌‌ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಾಡಾಳ್ ಪ್ರಶಾಂತ್ ವಾಸವಾಗಿರೋ ಸಂಜಯ್ ನಗರ ನಿವಾಸದ ಮೇಲೆ ದಾಳಿ ಮಾಡಿದ್ರು. ದಾಳಿ ವೇಳೆ ಮನೆಯ ಇಂಚಿಂಚು ಜಾಲಾಡಿದ್ರು. ಅ ವೇಳೆ ಶಾಸಕರ ಬೆಡ್ ರೂಂಗೆ ಹೋದ ಅಧಿಕಾರಿಗಳು ಅಲ್ಲಿನ ಬ್ಯಾಗ್ ಗಳನ್ನ ತೆರೆದು ನೋಡಿದಾಗ ಅದರಲ್ಲಿದ್ದ ಹಣ ಕಂಡ್ ಬೆಚ್ಚಿ ಬಿದ್ದಿದ್ರು.

ಸಂಜೆ ಮನೆಗೆ ಎಂಟ್ರಿಯಾದ ಲೋಕಾಯುಕ್ತ ಅಧಿಕಾರಿಗಳು ತಡರಾತ್ರಿಯೂ ಶೋಧ ಸ್ಥಗಿತಗೊಳಿಸದೇ ಮುಂದುವರೆಸಿದ್ರು. ಆ ವೇಳೆ ಪ್ಲಾಟ್ ನಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪನ ಬೆಡ್ ರೂಂ ಗೆ ಹೋದ ಅಧಿಕಾರಿಗಳಿಗೆ ಅಲ್ಲಿ ಹಳದಿ ಬಣ್ಣದ ಎಂಟು ಬ್ಯಾಗ್ ಗಳು ಕಂಡಿದ್ವು. ಮೇಲೆ ಗುಟ್ಕಾ ಹೆಸ್ರು ಬರೆದಿದ್ದು ಅದನ್ನ ತೆರೆದು ನೋಡಿದ ಅಧಿಕಾರಿಗಳು ಬ್ಯಾಗ್ ಗಳಲ್ಲಿದ್ದ ಕಂತೆ ಕಂತೆ ನೋಟುಗಳನ್ನ ಕಂಡು ಶಾಕ್ ಗೊಳಗಾಗಿದ್ರು. ಆ ರೀತಿ ಪತ್ತೆಯಾದ ಹಣವನ್ನ ಲೆಕ್ಕ ಮಾಡಲು ಕುಳಿತ ಅಧಿಕಾರಿಗಳು ಬೆಳಗಿನ ಜಾವವರೆಗೂ ಲೆಕ್ಕ ಮಾಡಿದ್ದು, ಅಂತಿಮವಾಗಿ ಆರು ಕೋಟಿ ಹಣ ಎಂದು ಗೊತ್ತಾಗಿತ್ತು. ಬಳಿಕ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣದ ಮೌಲ್ಯಮಾಪನ‌ ಮಾಡಲು ಸ್ಥಳೀಯ ಪೊಲೀಸ್ರಿಂದ ಅಕ್ಕಸಾಲಿಗನನ್ನ ಕರೆಸಿ ಚಿನ್ನದ ತೂಕ ಹಾಗೂ ಅದರ ಮೌಲ್ಯ ನಿಗದಿ ಮಾಡಿದ್ದಾರೆ. 

ಇದನ್ನೂ ಓದಿ: ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ!: ಕಾಂಗ್ರೆಸ್

ಬಳಿಕ ಮಹಜರು ಪ್ರಕ್ರಿಯೆ ಸೇರಿದಂತೆ ಇತರೆ ಕಾನೂನು ಪ್ರಕ್ರಿಯೆಗಳನ್ನ ಮುಗಿಸಿದ ಲೋಕಾಯುಕ್ತ ಅಧಿಕಾರಿಗಳು ಬಂಧಿತ ಆರೋಪಿಗಳನ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ಮಾಡಾಳ್ ಪ್ರಶಾಂತ್ ಸೇರಿದಂತೆ ಬಂಧಿತ ಐವರು ಆರೋಪಿಗಳನ್ನ ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಮತ್ತೊಂದೆಡೆ ಪ್ರಕರಣದ ಪ್ರಮುಖ ಆರೋಪಿಯನ್ನಾಗಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ವಿರುದ್ದ ಎಫ್ಐಆರ್ ಮಾಡಿಕೊಂಡಿರೋ ಲೋಕಾಯುಕ್ತ ಅಧಿಕಾರಿಗಳು ತಲೆಮರೆಸಿಕೊಂಡಿರೋ ಮಾಡಾಳ್ ವಿರೂಪಾಕ್ಷಪ್ಪನ ಪತ್ತೆಗೆ ಶೋಧ ನಡೆಸ್ತಿದ್ದಾರೆ. ಇದರ ಮಧ್ಯೆ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಭೀತಿಯಿಂದ ನಾಳೆ ಕೋರ್ಟ್ ಗೆ ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ದತೆ ನಡೆಸ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News