ನವದೆಹಲಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವ ಲಿಂಗಾಯತ ಧರ್ಮ ಮಹಾಸಭೆ ಅಧ್ಯಕ್ಷೆ ಮಾತೆ ಮಹಾದೇವಿ ಪ್ರತ್ಯೇಕ ಪಕ್ಷ ಬೇಕು ಎಂದು ಪ್ರತಿಪಾದಿಸಿದ್ದಾರೆ.
ದೆಹಲಿಯ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಲಿಂಗಾಯತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾತೆ ಮಹಾದೇವಿ, ಪಂಜಾಬಿನ ಅಕಾಲಿದಳದ ಮಾದರಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಪಕ್ಷ ಬೇಕು ಎಂದು ಪ್ರತಿಪಾದಿಸಿದ್ದಾರೆ.
ರಾಜಕೀಯ ಶಕ್ತಿ ಅನಿವಾರ್ಯ:
ಪ್ರತ್ಯೇಕ ಧರ್ಮ ಹೋರಾಟಕ್ಕೆ ರಾಜಕೀಯ ಶಕ್ತಿ ಅನಿವಾರ್ಯವಾಗಿದೆ. ನಾವು ರಾಜಕೀಯ ಮಾಡಲು ಸಾಧ್ಯವಿಲ್ಲ. ರಾಜ್ಯದ ಲಿಂಗಾಯತ ನಾಯಕರು ಈ ಬಗ್ಗೆ ಯೋಚಿಸಬೇಕು. ರಾಜಕೀಯದಲ್ಲಿ ಇರುವ ಲಿಂಗಾಯತ ನಾಯಕರು ಮನಸ್ಸು ಈ ಬಗ್ಗೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಎಂ.ಬಿ. ಪಾಟೀಲ್ ಮತ್ತಿತರರಿಂದ ನಮ್ಮ ಹೋರಾಟಕ್ಕೆ ರಾಜಕೀಯ ಶಕ್ತಿ ಸಿಕ್ಕಿದೆ. ಎಂ.ಬಿ. ಪಾಟೀಲ್ ಮನಸ್ಸು ಮಾಡಬೇಕು. ಅವರು ಮನಸ್ಸು ಮಾಡಿದರೆ ಸಮುದಾಯದ ರಾಜಕೀಯ ನಾಯಕ ಆಗಬಹುದು ಎಂದು ನೇರವಾಗಿ ಎಂ.ಬಿ. ಪಾಟೀಲ್ ಗೆ ಮಾತೇ ಮಹಾದೇವಿ ಕರೆ ನೀಡಿದರು.