Mysuru: ವಕೀಲೆ ಅನುಮಾನಾಸ್ಪದ ಸಾವು; ಪೋಷಕರಿಂದ ಗಂಭೀರ ಆರೋಪ

ಸ್ಥಳಕ್ಕೆ ಭೇಟಿ ನೀಡಿದ ಕುವೆಂಪುನಗರ ಠಾಣೆಯ ಇನ್ಸಪೆಕ್ಟರ್, ಚಂದ್ರಕಲಾ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Written by - Zee Kannada News Desk | Last Updated : Mar 12, 2022, 12:50 PM IST
  • ಮೈಸೂರಿನಲ್ಲಿ ವಕೀಲರ ಸಂಘದ ಸದಸ್ಯ, ವಕೀಲೆ ಚಂದ್ರಕಲಾ ಆತ್ಮಹತ್ಯೆಗೆ ಶರಣು
  • ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಗಂಭೀರ ಆರೋಪ ಮಾಡಿದ ಚಂದ್ರಕಲಾ ಪೋಷಕರು
  • ಚಂದ್ರಕಲಾ ಪತಿ ಮತ್ತು ಮಾವನ ವಶಕ್ಕೆ ಪಡೆದು ಕುವೆಂಪು ನಗರ ಪೊಲೀಸರಿಂದ ವಿಚಾರಣೆ
Mysuru: ವಕೀಲೆ ಅನುಮಾನಾಸ್ಪದ ಸಾವು; ಪೋಷಕರಿಂದ ಗಂಭೀರ ಆರೋಪ title=
ವಕೀಲೆ ಚಂದ್ರಕಲಾ ಆತ್ಮಹತ್ಯೆಗೆ ಶರಣು!

ಮೈಸೂರು: ವಕೀಲೆ ಹಾಗೂ ಮೈಸೂರು ವಕೀಲರ ಸಂಘದ ಸದಸ್ಯರಾದ ಚಂದ್ರಕಲಾ ಎಂಬವರು ಆತ್ಮಹತ್ಯೆ(Lawyer Suicide)ಗೆ ಶರಣಾಗಿದ್ದು, ಮೃತರ ಪೋಷಕರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಗಂಭೀರ ಆರೋಪ(Dowry Case) ಮಾಡಿದ್ದಾರೆ.

ರಾಮಕೃಷ್ಣನಗರದ ನಿವಾಸಿ ಚಂದ್ರಕಲಾ(32)ಎಂಬವರೇ ಆತ್ಮಹತ್ಯೆ(Lawyer Suspects Death)ಮಾಡಿಕೊಂಡವರು. ಇವರು 2019ರಲ್ಲಿ ರಾಮಕೃಷ್ಣ ನಗರ ನಿವಾಸಿ ವಿಚ್ಛೇದಿತ ಪ್ರದೀಪ್ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ 6 ತಿಂಗಳ ಒಂದು ಮಗು ಕೂಡ ಇತ್ತು ಎನ್ನಲಾಗಿದೆ. ಇಂದು ಬೆಳಗಿನ ಜಾವ 4.30ರ ವೇಳೆಗೆ ಮೃತ ಚಂದ್ರಕಲಾ ಪತಿ ಆಕೆಯ ಪೋಷಕರಿಗೆ ಕರೆ ಮಾಡಿ ಮನೆಯ ಬಳಿ ಬರುವಂತೆ ತಿಳಿಸಿದ್ದ. ಬಳಿಕ 6ಗಂಟೆಯ ಸುಮಾರಿಗೆ ಅವರ ನಿವಾಸಕ್ಕೆ ಸಮೀಪವಿರುವ ಖಾಸಗಿ ಆಸ್ಪತ್ರೆಯ ಬಳಿ ಬರಲು ಹೇಳಿದ್ದ.

ಇದನ್ನೂ ಓದಿ: Bike Thief : ಬೈಕ್ ಕಳ್ಳ ಪತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಪತ್ನಿ!

ಇದರಿಂದ ಅನುಮಾನಗೊಂಡ ಮೃತ ಚಂದ್ರಕಲಾ ಪೋಷಕರು ಇದು ಆತ್ಮಹತ್ಯೆಯಲ್ಲ, ಅಕೆಯ ಅತ್ತೆ-ಮಾವ, ಮತ್ತಾಕೆಯ ಪತಿ ಸೇರಿ ಕೊಲೆ ಮಾಡಿದ್ದಾರೆ. ವರದಕ್ಷಿಣೆಗಾಗಿಯೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕುವೆಂಪುನಗರ ಠಾಣೆ(Kuvempunagar Police station)ಯ ಇನ್ಸಪೆಕ್ಟರ್, ಚಂದ್ರಕಲಾ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಅತ್ತೆ ಪರಾರಿಯಾಗಿದ್ದಾರೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ವಕೀಲರ ಸಂಘ(Mysuru Lawyer Organisation)ದ ಕಾರ್ಯದರ್ಶಿ ಉಮೇಶ್ ಅವರು  ಸಹೋದ್ಯೋಗಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Dharwad Crime: ಕುಡಿದು ಬಂದು ಎಗರಾಡಿದ್ದ ಗಂಡನ ಹತ್ಯೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News