ರೇವಾ ವಿ.ವಿ.ಯಲ್ಲಿ ಜಿಯೋಪಾಲಿಟಿಕ್ಸ್ ಹಾಗೂ ಇಂಟರ್ ನ್ಯಾಷನಲ್ ಸ್ಟಡೀಸ್ ಕೇಂದ್ರಕ್ಕೆ ಚಾಲನೆ

ರೇವಾ ವಿಶ್ವವಿದ್ಯಾಲಯದಿಂದ ಜಿಯೋಪಾಲಿಟಿಕ್ಸ್ ಹಾಗೂ ಇಂಟರ್ ನ್ಯಾಷನಲ್ ಸ್ಟಡೀಸ್ ಗಾಗಿ ರೇವಾ ಎಕ್ಸಲೆನ್ಸ್ ಸೆಂಟರ್ ಅಧಿಕೃತವಾಗಿ ಉದ್ಘಾಟನೆ ಆಗಿದೆ. ಅಂದ ಹಾಗೆ ರೇವಾ ವಿಶ್ವವಿದ್ಯಾಲಯಕ್ಕೆ ಇದೊಂದು ಮೈಲುಗಲ್ಲಾಗಿದೆ. ಬುಧವಾರದಂದು ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

Written by - Zee Kannada News Desk | Last Updated : Feb 28, 2024, 09:01 PM IST
  • ರೇವಾ ವಿಶ್ವವಿದ್ಯಾಲಯಕ್ಕೆ ಇದೊಂದು ಮೈಲುಗಲ್ಲಾಗಿದೆ.
  • ಬುಧವಾರದಂದು ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
  • ರೇವಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪಿ. ಶ್ಯಾಮ ರಾಜು, ಪ್ರೊ ಚಾನ್ಸೆಲರ್ ಉಮೇಶ್ ಎಸ್. ರಾಜು ಅವರು ಸಹ ತಮ್ಮ ಗೌರವವನ್ನು ಅರ್ಪಿಸಿದರು.
ರೇವಾ ವಿ.ವಿ.ಯಲ್ಲಿ ಜಿಯೋಪಾಲಿಟಿಕ್ಸ್ ಹಾಗೂ ಇಂಟರ್ ನ್ಯಾಷನಲ್ ಸ್ಟಡೀಸ್ ಕೇಂದ್ರಕ್ಕೆ ಚಾಲನೆ  title=

ಬೆಂಗಳೂರು: ರೇವಾ ವಿಶ್ವವಿದ್ಯಾಲಯದಿಂದ ಜಿಯೋಪಾಲಿಟಿಕ್ಸ್ ಹಾಗೂ ಇಂಟರ್ ನ್ಯಾಷನಲ್ ಸ್ಟಡೀಸ್ ಗಾಗಿ ರೇವಾ ಎಕ್ಸಲೆನ್ಸ್ ಸೆಂಟರ್ ಅಧಿಕೃತವಾಗಿ ಉದ್ಘಾಟನೆ ಆಗಿದೆ. ಅಂದ ಹಾಗೆ ರೇವಾ ವಿಶ್ವವಿದ್ಯಾಲಯಕ್ಕೆ ಇದೊಂದು ಮೈಲುಗಲ್ಲಾಗಿದೆ. ಬುಧವಾರದಂದು ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹರ್ದೀಪ್ ಸಿಂಗ್ ಪುರಿ ಅವರಿಗೆ ಎನ್ ಸಿಸಿಯಿಂದ ಗೌರವ ಸಮರ್ಪಣೆ ಮಾಡುವುದರ ಮೂಲಕವಾಗಿ ಶೈಕ್ಷಣಿಕ ಕೇಂದ್ರದ ಆರಂಭೋತ್ಸವ ಕಾರ್ಯಕ್ರಮ ಚಾಲನೆ ಪಡೆಯಿತು. ರೇವಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪಿ. ಶ್ಯಾಮ ರಾಜು, ಪ್ರೊ ಚಾನ್ಸೆಲರ್ ಉಮೇಶ್ ಎಸ್. ರಾಜು ಅವರು ಸಹ ತಮ್ಮ ಗೌರವವನ್ನು ಅರ್ಪಿಸಿದರು. 

ಅಧ್ಯಕ್ಷೀಯ ಭಾಷಣ ಮಾಡಿದಂಥ ಕುಲಪತಿಗಳಾದ ಪಿ. ಶ್ಯಾಮ ರಾಜು, ರೇವಾ ವಿಶ್ವವಿದ್ಯಾಲಯದ ಪಾಲಿನ ಈ ಐತಿಹಾಸಿಕ ಕ್ಷಣದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು.  ಜಿಯೋಪಾಲಿಟಿಕ್ಸ್ ಹಾಗೂ ಇಂಟರ್ ನ್ಯಾಷನಲ್ ಸ್ಟಡೀಸ್ ಗಾಗಿ ರೇವಾ ಎಕ್ಸಲೆನ್ಸ್ ಸೆಂಟರ್ ಉದ್ಘಾಟಿಸುವ ಮೂಲಕ ಉನ್ನತ ಶಿಕ್ಷಣದಲ್ಲಿನ ಉತ್ಕೃಷ್ಟತೆಯನ್ನು ಅಳವಡಿಸಿಕೊಳ್ಳುವುದಕ್ಕೆ ರೇವಾ ವಿಶ್ವವಿದ್ಯಾಲಯಕ್ಕೆ ಇರುವ ಅಚಲವಾದ ಬದ್ಧತೆ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಈ ಉನ್ನತ ಅಧ್ಯಯನ ಕೇಂದ್ರದ ಉದ್ಘಾಟನೆಯನ್ನು ಮಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ಅರ್ಪಿಸಿದ ಶ್ಯಾಮ ರಾಜು ಅವರು, ಸಚಿವರಿಗೆ ತಮ್ಮ ಈ ಹಿಂದಿನ ವೃತ್ತಿ ಹಾಗೂ ಶೈಕ್ಷಣಿಕ ಅಧ್ಯಯನದ ಹಿನ್ನೆಲೆಯಲ್ಲಿ ಅನುಮಾನವೇ ಇಲ್ಲದಂತೆ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಅವರಲ್ಲಿ ಇರುವಂಥ ಅನುಭವವನ್ನು  ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಜತೆಗೆ ಹಂಚಿಕೊಳ್ಳುವಂತೆ ಮನವಿ ಮಾಡಿದರು.

ಇದನ್ನೂ ಓದಿ:  2 ಎಕರೆಯಲ್ಲಿ ಪೇರು ಹಣ್ಣು ಬೆಳೆದು 30 ಲಕ್ಷ ರೂ ಆದಾಯ: ನಿಡೋಣಿ ರೈತನ ಯಶೋಗಾಥೆ..!  

ಕಾರ್ಯಕ್ರಮ ಉದ್ಘಾಟಿಸಿದ ಹರ್ದೀಪ್ ಸಿಂಗ್ ಪುರಿ ಅವರು ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ದೆಹಲಿ ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕರಿಗೆ ಸೇವೆ ಸಲ್ಲಿಸಿದ್ದವರು. ಅವರು ತಮ್ಮ ಭಾಷಣದ ವೇಳೆ ಮಾತನಾಡಿ, ವರ್ಷಗಳ ಕಾಲದ ತಮ್ಮ ಪ್ರಾಧ್ಯಾಪಕ ವೃತ್ತಿ ಬೌದ್ಧಿಕವಾಗಿ ಬಹಳ ತೃಪ್ತಿಯನ್ನು ನೀಡಿದೆ. ಆದ್ದರಿಂದ ಇಂದಿನ ಕಾರ್ಯಕ್ರಮದ ಪ್ರಾಮುಖ್ಯ ಅರಿತುಕೊಳ್ಳುವುದರಲ್ಲಿ ಶೈಕ್ಷಣಿಕ ಅನುಭವವು ಎಷ್ಟು ಪ್ರಮುಖವಾದದ್ದು ಎಂಬುದನ್ನು ಅವರು ವಿವರಿಸಿದರು. ದೇಶದ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಅವರು, ಭಾರತವು ವಿಶ್ವದ ಮೂರನೇ ಅತಿ ಬಲಿಷ್ಠ ಆರ್ಥಿಕತೆ ಎತ್ತರಕ್ಕೆ ಏರುವ ಆಗುವ ಬಗ್ಗೆ ವಿಶ್ವಾಸದಿಂದ ಹೇಳಿದರು. ಅದೇ ರೀತಿ ಜಿಯೋಪಾಲಿಟಿಕ್ಸ್ ನಲ್ಲಿ ಭಾರತವು ಕೇಂದ್ರ ಶಕ್ತಿಯಾಗಲಿದೆ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ತಿಳಿಸಿದರು. 

ಇನ್ನು ಕಾರ್ಯಕ್ರಮದ ವೇಳೆ ಪ್ರಶ್ನೋತ್ತರಕ್ಕೆ ಸಹ ವೇದಿಕೆ ಒದಗಿಸಲಾಗಿತ್ತು. ಈ ವೇಳೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿಯಿಂದ ಹೊರಗಿಡುವ ಬಗ್ಗೆ ಕೇಂದ್ರ ಸಚಿವರನ್ನು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ಜಿಎಸ್ ಟಿ ಸಮಿತಿಯಲ್ಲಿನ ನಿರ್ಧಾರಗಳು ಸರ್ವಾನುಮತದ ಮೇಲೆ ಆಧಾರವಾಗಿದೆ. ಇದರ ಸೇರ್ಪಡೆಗೆ ಸದಸ್ಯರ ಬೆಂಬಲ ಇಲ್ಲದಿರುವುದು ದೀರ್ಘಾವಧಿಯಲ್ಲಿ ಅನುಕೂಲಕರವಾಗಿ ಕಂಡುಬರುತ್ತದೆ ಎಂದರು.

ಇನ್ನು ಭಾಷಣಕಾರರಾಗಿ ಸಚಿವರ ವಾಕ್ ಚಾತುರ್ಯ ಇಷ್ಟು ಚೆನ್ನಾಗಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಪ್ರಕ್ರಿಯೆಯನ್ನು ಆನಂದಿಸುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ರಾಜತಾಂತ್ರಿಕ ವೃತ್ತಿಯಲ್ಲಿದ್ದು ಹಾಗೂ ಈಗ ಕೇಂದ್ರ ಸಚಿವರಾಗಿ ವಿವಿಧ ಜವಾಬ್ದಾರಿ, ವೃತ್ತಿಯ ಅನುಭವಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿದೆ ಎಂಬುದನ್ನು ತಿಳಿಸಿದರು.

ಇದನ್ನೂ ಓದಿ: ಕಡ್ಡಾಯ ಕನ್ನಡ: ಪಾಲಿಕೆ ವತಿಯಿಂದ ಕನ್ನಡೇತರ ಫಲಕಗಳ ತೆರವು

ಭಾರತದಲ್ಲಿ ಫಾಸಿಲ್ ಫ್ಯುಯೆಲ್ ಭವಿಷ್ಯ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಾಯಕತ್ವದಲ್ಲಿ ಭಾರತವು ಅನ್ವೇಷಣೆ ಹಾಗೂ ಉತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹಸಿರು ಹೈಡ್ರೋಜನ್ ನಲ್ಲಿ ಬಹಳ ಮುಂದೆ ಸಾಗಿದೆ ಮತ್ತು ಇದು ನಿಜವಾದ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.

ಪ್ರೊ ಚಾನ್ಸೆಲರ್ ಉಮೇಶ್ ಎಸ್. ರಾಜು ಅವರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವಂದನೆಗಳನ್ನು ಅರ್ಪಿಸುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು. ರೇವಾ ವಿಶ್ವವಿದ್ಯಾಲಯದ ಪ್ರಯಾಣದಲ್ಲಿ ಸಹಕರಿಸಿದ ಮಾಧ್ಯಮಗಳಿಗೆ ಕುಲಪತಿಗಳಾದ ಪಿ. ಶ್ಯಾಮ ರಾಜು ಕೃತಜ್ಞತೆ ಸಲ್ಲಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News