Latest RTO rules: ವಾಹನ ಸವಾರರೇ ಎಚ್ಚರ.! ದಾಖಲೆ ಇಲ್ಲದೇ ರೋಡಿಗಳಿದರೆ ನಿಮ್ಮ ಗಾಡಿ ಸೀಜ್!!

Latest RTO rules in Karnataka: ವಾಹನ ಸವಾರರೇ ಎಚ್ಚರವಾಗಿರಿ. ಮೈಯೆಲ್ಲ ಕಣ್ಣಾಗಿದ್ದರೆ ಮಾತ್ರ ನೀವು ಬಚಾವ್‌ ಆಗಲು ಸಾಧ್ಯ. ಇಲ್ಲದಿದ್ದರೆ ನಿಮ್ಮ ಕೈ ತಪ್ಪಿ ಹೋಗುತ್ತೆ ನಿಮ್ಮ ಪ್ರೀತಿಯ ವಾಹನ.

Written by - Chetana Devarmani | Last Updated : Jul 16, 2023, 09:39 AM IST
  • ದಾಖಲೆ ಇಲ್ಲದೇ ರೋಡಿಗಳಿದರೆ ನಿಮ್ಮ ವಾಹನ ಸೀಜ್..!!
  • ಗ್ಯಾರಂಟಿ ಯೋಜನೆ ಅನುಷ್ಠಾನ ಎಫೆಕ್ಟ್
  • ಲಂಚ ಕೊಟ್ಟು ವಾಹನ ರೋಡಿಗಿಳಿಸೋ ಪ್ಲ್ಯಾನ್ ಇದ್ರೆ ಬಿಟ್ಟುಬಿಡಿ..!
Latest RTO rules: ವಾಹನ ಸವಾರರೇ ಎಚ್ಚರ.! ದಾಖಲೆ ಇಲ್ಲದೇ ರೋಡಿಗಳಿದರೆ ನಿಮ್ಮ ಗಾಡಿ ಸೀಜ್!!  title=
Latest RTO rules in Karnataka

ಬೆಂಗಳೂರು: ವಾಹನ ಸವಾರರಿಗೆ ಇಲ್ಲೊಂದು ಬಹುಮುಖ್ಯ ಮಾಹಿತಿಯಿದೆ. ಮನೆಯಿಂದ ಗಾಡಿ ಹೊರಗೆ ತೆಗೆಯುವ ಮುನ್ನ ನಿಮ್ಮ ಡಾಕ್ಯುಮೆಂಟ್ ಚೆಕ್‌ ಮಾಡಿಕೊಳ್ಳಿ. ಎಲ್ಲಾ ದಾಖಲೆ ಸರಿಯಿದೆ ಎನಿಸದರಷ್ಟೇ ಆಚೆ ಬನ್ನಿ. ದಾಖಲೆ ಇಲ್ಲದೇ ರೋಡಿಗಳಿದರೆ ನಿಮ್ಮ ವಾಹನ ಸೀಜ್ ಆಗಬಹುದು. ಲಂಚ ಕೊಟ್ಟು ವಾಹನ ರೋಡಿಗಿಳಿಸೋ ಪ್ಲ್ಯಾನ್ ಇದ್ರೆ ಅದನ್ನಂತೂ ಬಿಟ್ಟೇ ಬಿಡಿ. 

ಗ್ಯಾರಂಟಿ ಯೋಜನೆ ಅನುಷ್ಠಾನ ಎಫೆಕ್ಟ್ ಈಗ ವಾಹನ ಸವಾರರ ಮೇಲೆ ಬಿದ್ದಿದೆ. ಸರ್ಕಾರದಿಂದ ಸಾರಿಗೆ ಇಲಾಖೆಗೆ ಬಿಗ್ ಟಾಸ್ಕ್ ನೀಡಲಾಗಿದೆ. ಆದಾಯ ಕ್ರೂಢೀಕರಣಕ್ಕೆ ಹೆಚ್ಚು ಒತ್ತು ನೀಡಿರುವ ಸರ್ಕಾರ RTO ಮೇಲೆ ಒತ್ತಡ ಹೇರಿದೆ. ಹೀಗಾಗಿ ದಂಡಂ ದಶಗುಣಂ ಸೂತ್ರಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ನಿಯಮಿತ ದಾಖಲೆ ಇಲ್ಲದೇ ರೋಡಿಗಿಳಿದ್ರೆ ದಂಡ ಬೀಳುವುದು ಫಿಕ್ಸ್. 

ಇದನ್ನೂ ಓದಿ: ಫಾರ್ಮಿಂಗ್ ಸೊಸೈಟಿ ಜಮೀನು ಸಾಗುವಳಿದಾರ ರೈತರಿಗೆ ಮಾಲಿಕತ್ವ ನೀಡಲು ಶೀಘ್ರ ಕ್ರಮ: ಸಚಿವ ಸಂತೋಷ ಲಾಡ್

ಸಣ್ಣಪುಟ್ಟ ದಾಖಲೆಗಳು ಇಲ್ಲದೇ ಇದ್ರೂ ದಂಡ ಹಾಕಲಿದ್ದಾರೆ. ಪ್ರತಿ ವರ್ಷ 10,500 ಕೋಟಿ ಆದಾಯ ಟಾರ್ಗೆಟ್ ಇತ್ತು.‌ ಇದೀಗ ಗ್ಯಾರಂಟಿ ಎಫೆಕ್ಟ್ ನಿಂದಾಗಿ ಇದು 11,500 ಕೋಟಿಗೆ ಏರಿಕೆಯಾಗಿದೆ. ಹೆಚ್ಚುವರಿ ಒಂದು ಸಾವಿರ ಕೋಟಿ ಆದಾಯ ಸಂಗ್ರಹ ಮಾಡುವ ಟೆನ್ಷನ್‌ ಅಧಿಕಾರಿಗಳಿಗೆ ಶುರುವಾಗಿದೆ.  

ಆದಾಯ ಸಂಗ್ರಹಕ್ಕೆ RTO ಇಲಾಖೆ ಬಿಗ್ ಆಪರೇಷನ್ ಮಾಡ್ತಿದೆ. ವರ್ಷಕ್ಕೆ 4.35 ಲಕ್ಷ ವಾಹನ ತಪಾಸಣೆ ಟಾರ್ಗೆಟ್‌ ಹಾಕಿಕೊಂಡಿದೆ. ಈ ಹಿಂದೆ ಸಾರಿಗೆ ಅಧಿಕಾರಿಗಳು ಪ್ರತಿ ವರ್ಷ 2.50 ಲಕ್ಷ ವಾಹನ ತಪಾಸಣೆ ಮಾಡುತ್ತಿದ್ದರು. 

ಇದೀಗ ಸರ್ಕಾರ ಆದಾಯ ಟಾರ್ಗೆಟ್ ನೀಡಿದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಹನ ತಪಾಸಣೆ ತೀವ್ರಗೊಳಿಸಲು ನಿರ್ಧಾರಿಸಿದೆ. ಇನ್ಮೇಲೆ ಒಂದು ವರ್ಷದಲ್ಲಿ 4.35 ಲಕ್ಷ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೆ ಮಾಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. 

ಇದನ್ನೂ ಓದಿ: ಸತ್ಯವನ್ನು ಮರೆಮಾಚಿ, ಸುಳ್ಳನ್ನೇ ಸತ್ಯವೆಂದು ನಿರೂಪಿಸುವುದು ಕಾಂಗ್ರೆಸ್‍ನ ಸಾಮಾನ್ಯ ಲಕ್ಷಣ: ಬಿಜೆಪಿ

ಅತಿ ಹೆಚ್ಚು ವಾಹನ ಇರುವ ಬೆಂಗಳೂರು ನಗರವೇ ಮೇನ್ ಟಾರ್ಗೆಟ್ ಆಗಿದೆ. ರಾಜಧಾನಿಯಲ್ಲಿ ಬರೋಬ್ಬರಿ 1.05 ಲಕ್ಷ ವಾಹನಗಳು ಇವೆ. ವಾಹನ ದಾಖಲೆ ಇಲ್ಲದೆ ಸಂಚರಿಸಿದ್ರೆ ದಂಡ ಬೀಳೋದು ಪಕ್ಕಾ. ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುವರಿ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈ ಮೊದಲು ಮಾಡುತ್ತಿದ್ದ ತಪಾಸಣೆ ಡಬಲ್ ಮಾಡಲು ನಿರ್ಧಾರ ಮಾಡಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ವಿಶೇಷ ತಪಾಸಣೆ ತಂಡವನ್ನು ಹೆಚ್ಚುವರಿ ನೇಮಕ ಮಾಡಲಿದೆ. 

ಯಾವೆಲ್ಲಾ ವಾಹನ ತಪಾಸಣೆ?

ಪರವಾನಿಗೆ ಇಲ್ಲದೆ ವಾಹನಗಳು, ಆರ್ ಸಿ, ಇನ್ಶೂರೆನ್ಸ್‌ ಕಾರ್ಡ್ ಇಲ್ಲದೇ ಇರುವ ವಾಹನಗಳು, ನಂಬರ್ ಪ್ಲೇಟ್ ನಿಯಮ ಉಲ್ಲಂಘಿಸಿದ್ರೆ ದಂಡ ಬೀಳಲಿದೆ. ಡಬಲ್ ಸೀಟ್ ಬೆಲ್ಟ್ ಹಾಕದೇ ಇದ್ರೆ, ಡಿಎಲ್ ಇಲ್ಲದೇ ಹೋದ್ರೆ, ಸೀಟ್ ಕ್ಯಾಪಟಿಸಿ ಮೀರಿ ಸಂಚರಿಸಿದರೆ ಫೈನ್‌ ಫಿಕ್ಸ್‌. ಹಳೆ ದಂಡ ಬಾಕಿ ಕಟ್ಟದೇ ಇರುವವರಿಗೂ ದಂಡ ಹಾಕಲಾಗುವುದು. ತೆರಿಗೆ ಕಟ್ಟದೇ ಓಡಾಡೋ ವಾಹನಗಳಿಗೆ, ನಿಯಮ ಮೀರಿ ಅಂತಾರಾಜ್ಯ ವಾಹನ ಓಡಾಟ ಮಾಡೋರಿಗೆ ದಂಡ ಬೀಳಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News