ಜಾಮೂನ್‌ಗೆ ಫುಲ್‌ ಫಿದಾ ಆದ ಕೊರಿಯನ್ ಯುವತಿ: ವಿಡಿಯೋ ವೈರಲ್

Viral Video: ಸಣ್ಣ ಸಣ್ಣ ಸಮಾರಂಭದಿಂದ ಹಿಡಿದು ವಿಶೇಷ ಸಮಾರಂಭದವರೆಗೂ ಭಾರತೀಯರ ಅಡುಗೆ ಮನೆಯಲ್ಲಿ ಗುಲಾಬ್‌ ಜಾಮೂನ್‌ ಪ್ರಮುಖ ಸ್ಥಾನ ಪಡೆದಿದೆ. ಬಹುತೇಕರ ಇಷ್ಟದ ಸಿಹಿ ತಿನಿಸು. ಇದೀಗ ಗುಲಾಬ್ ಜಾಮಾನ್ ಸಂಬಂಧಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Yashaswini V | Last Updated : Nov 29, 2024, 01:51 PM IST
  • ಇದುವರೆಗೂ ಜಾಮೂನ್‌ ಕೇವಲ ಜಾಮೂನ್‌ ಆಗೇ ಉಳಿದಿತ್ತು.
  • ಆದರೆ ಈಗ ಅದು ತನ್ನ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸಿದೆ.
  • ಸಾಂಪ್ರದಾಯಿಕ ಜಾಮೂನ್‌ ಹೊರತಾಗಿ ಚಾಕ್ಲೇಟ್‌, ರಬ್ಡಿ, ಗುಲ್ಕಂದ್‌, ಪನ್ನೀರ್‌, ಕೇಸರ್‌ ಹೀಗೆ ಹಲವು ಬಗೆಯ ಜಾಮೂನ್‌ಗಳಿವೆ.
ಜಾಮೂನ್‌ಗೆ ಫುಲ್‌ ಫಿದಾ ಆದ ಕೊರಿಯನ್ ಯುವತಿ: ವಿಡಿಯೋ ವೈರಲ್  title=

Gulab Jamun Love Viral Video: ಇದುವರೆಗೂ ಕೊರಿಯನ್ನರ ಫ್ಯಾಷನ್‌, ಸ್ಟೈಲ್‌, ಸ್ಕಿನ್ ಕೇರ್, ಆಹಾರಕ್ಕೆ ಇಂದಿನ ಯುವ ಜನತೆಯಲ್ಲಿ ಮನ ಸೋಲದವರೇ ಇಲ್ಲ. ಆದರೆ, ಈಗ ಕಾಲ ಬದಲಾಗಿದೆ. ಕೊರಿಯನ್ನರು ನಮ್ಮ ಆಹಾರ ಪದ್ಧತಿ ಮನಸೋತಿರುವಂತೆ ಕಾಣುತ್ತಿದೆ. ಈಗ ವೈರಲ್‌ ಆಗಿರುವ ವಿಡಿಯೊವೊಂದು ಭಾರತೀಯರ ಆಹಾರ ಪದ್ಧತಿಯನ್ನು ಪ್ರಚುರಪಡಿಸಿದೆ.

ಹೌದು, ಕೊರಿಯಾ ಮೂಲದ ಕೆಲ್ಲಿ ಎಂಬುವರು ಗುಲಾಬ್‌ ಜಾಮೂನ್‌ ತಿಂದು ಭಾರತೀಯರಿಗೆ ಮೆಚ್ಚುಗೆ ತಿಳಿಸಿದ್ದಾರೆ. ಜಾಮೂನ್‌ ಟೇಸ್ಟ್‌ ಮಾಡುತ್ತಿರುವ  ವಿಡಿಯೊ ಈಗ ಸೋಶಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ. ಅವರು ಸಿಹಿ ಮತ್ತು ಮೆತ್ತನೆಯ ರಸಭರಿತ ಜಾಮೂನನ್ನು ಬಹಳ ಕುತೂಹಲಭರತವಾಗಿ ನೋಡುತ್ತಾ ಸವಿದಿರುವುದರ ಜೊತೆಗೆ ಖುಷಿಪಟ್ಟಿದ್ದಾರೆ. ಈ ಹಿಂದೆ ಜಿಲೇಬಿ ಸವಿದಿದ್ದ ಕೆಲ್ಲಿ ಈಗ ಜಾಮೂನ್‌ ಸವಿದು ಸಂಭ್ರಮಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Kelly Korea (@kelly_korean)

ಸಣ್ಣ ಸಣ್ಣ ಸಮಾರಂಭದಿಂದ ಹಿಡಿದು ವಿಶೇಷ ಸಮಾರಂಭದವರೆಗೂ ಭಾರತೀಯರ ಅಡುಗೆ ಮನೆಯಲ್ಲಿ ಗುಲಾಬ್‌ ಜಾಮೂನ್‌ ಪ್ರಮುಖ ಸ್ಥಾನ ಪಡೆದಿದೆ. ಬಹುತೇಕರ ಇಷ್ಟದ ಸಿಹಿ ತಿನಿಸು ಈಗ ಕೆಲ್ಲಿ ಮೂಲಕ ಇತರೆ ದೇಶಗಳಲ್ಲೂ ಗಮನ ಸೆಳೆಯುತ್ತಿದೆ. ಜಾಮೂನ್‌ ಕೇವಲ ಭಾರತದ ಜನಪ್ರಿಯ ತಿಂಡಿ ಮಾತ್ರವಾಗಿರದೆ ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಗಳಂತಹ ದಕ್ಷಿಣ ಏಷ್ಯಾದ ದೇಶಗಳಲ್ಲಿ ಜನಪ್ರಿಯ ಸಿಹಿ ತಿನಿಸಾಗಿದೆ.

ಇದನ್ನೂ ಓದಿ- ಆನೆ ಮರಿ ಬೇಟೆಗೆ ಹೊಂಚು ಹಾಕಿ ಅಮ್ಮನನ್ನು ಕಂಡು ಹೆದರಿ ಎಸ್ಕೇಪ್ ಆದ ಹುಲಿ ವಿಡಿಯೋ ವೈರಲ್..!

ಇದುವರೆಗೂ ಜಾಮೂನ್‌ ಕೇವಲ ಜಾಮೂನ್‌ ಆಗೇ ಉಳಿದಿತ್ತು. ಆದರೆ ಈಗ ಅದು ತನ್ನ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸಿದೆ. ಅಂದರೆ ಜಾಮೂನ್‌ ಐಸ್‌ಕ್ರೀಮ್‌, ಜಾಮೂನ್ ಚೀಸ್‌ ಕೇಕ್‌, ಜಾಮೂನ್‌ ಮಿಲ್ಕ್‌ ಶೇಕ್‌, ಸ್ಯಾಂಡ್‌ವಿಚ್‌, ಪ್ಯಾನ್ ಕೇಕ್‌ ಸೇರಿದಂತೆ ಇನ್ನೂ ಹಲವಾರು ಪದಾರ್ಥಗಳ ಜೊತೆ ತನ್ನ ಕಾಂಬಿನೇಷನ್‌ ಹಂಚಿಕೊಂಡಿದೆ. 

ಸಾಂಪ್ರದಾಯಿಕ ಜಾಮೂನ್‌ ಹೊರತಾಗಿ ಚಾಕ್ಲೇಟ್‌, ರಬ್ಡಿ, ಗುಲ್ಕಂದ್‌, ಪನ್ನೀರ್‌, ಕೇಸರ್‌ ಹೀಗೆ ಹಲವು ಬಗೆಯ ಜಾಮೂನ್‌ಗಳಿವೆ.  ಪಾಕಶಾಲೆಯ ಇತಿಹಾಸಕಾರ ಮೈಕೆಲ್ ಕ್ರೊಂಡ್ಲ್ ಪ್ರಕಾರ, ಈ ಗುಲಾಬ್‌ ಜಾಮೂನ್‌ 12ನೇ ಶತಮಾನದಿಂದಲೂ ಇದ್ದು, ಇಸ್ಲಾಮಿಕ್‌ ಅವಧಿಯಲ್ಲಿ ಮಧ್ಯಕಾಲೀನ ಭಾರತದಲ್ಲಿ ಗುಲಾಬ್ ಜಾಮೂನ್ ಹೊರಹೊಮ್ಮಿತು.
 
ಇದನ್ನೂ ಓದಿ- ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಅಟ್ಟಾಡಿಸಿ ಹಿಡಿದ ಚಿರತೆ: ವಿಡಿಯೋ ವೈರಲ್

ಪರ್ಷಿಯನ್ ಪ್ರಭಾವವನ್ನು ಸ್ಥಳೀಯ ಪ್ರಭಾವಗಳೊಂದಿಗೆ ಬೆರೆತು ಅಂತಿಮವಾಗಿ ಗುಲಾಬ್‌  ಜಾಮೂನ್‌ ರೂಪವಾಗಿ ಮಾರ್ಪಟ್ಟಿತು. "ಗುಲಾಬ್" ಎಂಬ ಪದವು ಪರ್ಷಿಯನ್ ಪದಗಳಾದ ಗುಲ್ (ಹೂವು) ಮತ್ತು ಆಬ್ (ನೀರು) ಗಳಿಂದ ಬಂದಿದೆ. ಇದು ಗುಲಾಬಿ ನೀರಿನ ಪರಿಮಳಯುಕ್ತ ಸಿರಪ್ ಅನ್ನು ಸೂಚಿಸುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News