Human Trafficking : ಮಹಿಳೆಯರೆ ಎಚ್ಚರ! ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಾರೆ ಹುಷಾರ್‌‌!

ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಾನವ ಕಳ್ಳಸಾಗಣೆ ಜಾಡು ಬೆಳಕಿಗೆ ಬಂದಿದೆ. ಬಾಂಗ್ಲಾ ಮೂಲದ ಮಹಿಳೆಯರನ್ನ ನಗರಕ್ಕೆ ಕರೆತಂದು, ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಆಘಾತಕಾರಿ ಘಟನೆ ಬಯಲಾಗಿದೆ.

Written by - Channabasava A Kashinakunti | Last Updated : Dec 15, 2021, 07:38 PM IST
  • ನಿಮಗೆ ಯಾರಾದರೂ ಅಪರಿಚಿತರು ಕೆಲಸ ಕೊಡಿಸೋದಾಗಿ ಹೇಳ್ತಿದ್ದಾರಾ?
  • ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಾನವ ಕಳ್ಳಸಾಗಣೆ ಜಾಡು ಬೆಳಕಿಗೆ ಬಂದಿದೆ.
  • ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಆಘಾತಕಾರಿ ಘಟನೆ
Human Trafficking : ಮಹಿಳೆಯರೆ ಎಚ್ಚರ! ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಾರೆ ಹುಷಾರ್‌‌! title=

ಬೆಂಗಳೂರು : ನಿಮಗೆ ಯಾರಾದರೂ ಅಪರಿಚಿತರು ಕೆಲಸ ಕೊಡಿಸೋದಾಗಿ ಹೇಳ್ತಿದ್ದಾರಾ? ಹಾಗಾದ್ರೆ ಹುಷಾರ್. ಏಕೆಂದರೆ ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಾನವ ಕಳ್ಳಸಾಗಣೆ ಜಾಡು ಬೆಳಕಿಗೆ ಬಂದಿದೆ. ಬಾಂಗ್ಲಾ ಮೂಲದ ಮಹಿಳೆಯರನ್ನ ನಗರಕ್ಕೆ ಕರೆತಂದು, ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಆಘಾತಕಾರಿ ಘಟನೆ ಬಯಲಾಗಿದೆ.

NGO ಸಹಾಯದಿಂದ ಮಹಿಳೆ ಸೇರಿದಂತೆ ಅಪ್ರಾಪ್ತೆಯನ್ನ ರಕ್ಷಣೆ ಮಾಡಲಾಗಿದೆ. ಮುಂಬೈ ಮೂಲದ ಮಹಿಳೆಯೊಬ್ಬಳು ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದಿಂದ ಮಹಿಳೆ ಹಾಗೂ ಅಪ್ರಾಪ್ತೆಯನ್ನ ಕರೆಸಿ, ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆ(Prostitution) ನಡೆಸುತ್ತಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಕೊಡಿಗೆಹಳ್ಳಿ ಪೊಲೀಸರು, ಮಹಿಳೆ ಹಾಗೂ ಅಪ್ರಾಪ್ತೆಯನ್ನ ರಕ್ಷಿಸಿದ್ದಾರೆ.

ಇದನ್ನೂ ಓದಿ : Bengaluru Police : ಬೆಳಗ್ಗೆ ಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಸದ್ದು! ರೌಡಿ ಕಾಲು ಪಂಕ್ಚರ್

ಹೆಣ್ಣಿಗೆ ಹೆಣ್ಣೇ ಶತ್ರು

ಸಂತ್ರಸ್ತರನ್ನು ಕರೆತಂದಿದ್ದ ಮುಂಬೈ(Mumbai) ಮೂಲದ ಮಹಿಳೆಯನ್ನ ಬಂಧಿಸಲಾಗಿದೆ. ಕೆಲಸ ಕೊಡಿಸುವ ಅಮಿಷವೊಡ್ಡಿ, ಮಹಿಳೆ ಹಾಗೂ ಅಪ್ರಾಪ್ತೆಯನ್ನ ಆರೋಪಿ ಮಹಿಳೆ ವೇಶ್ಯಾವಾಟಿಕೆಗೆ ದೂಡಿದ್ದಳು. ಈ ಬಗ್ಗೆ ಎನ್ ಜಿಒ ಮಾಹಿತಿ ಸಂಗ್ರಹಿಸಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ಭದ್ರಪ್ಪ ಲೇಔಟ್ ನ ಲಾಡ್ಜ್ ಮೇಲೆ ದಾಳಿ ನಡೆಸಿ ಸಂತ್ರಸ್ತರನ್ನ ರಕ್ಷಿಸಿದ್ದಾರೆ.

ಆದರೆ ವಿಚಾರಣೆ ವೇಳೆ ಸಂತ್ರಸ್ತ ಮಹಿಳೆ ತಾನು ಪಶ್ಚಿಮ ಬಂಗಾಳ ಮೂಲದವಳು ಎನ್ನುತ್ತಿದ್ದು, ಪಾಸ್ ಪೋರ್ಟ್ ಮತ್ತು ದಾಖಲೆಗಳನ್ನ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಾನವ ಕಳ್ಳಸಾಗಣೆ ಮೂಲಕ ಇಬ್ಬರನ್ನೂ ಕರೆತಂದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Water: ವಿಷವಾಯ್ತು ಜೀವಜಲ: ಕರುನಾಡಿನ ಕೊಳವೆ ಬಾವಿಗಳಲ್ಲಿ 'ಅಣುಬಾಂಬ್'..!

ಹೈಟೆಕ್ ದಂಧ!

ಇದೀಗ ಪೊಲೀಸರ(Bangalore Police) ಕೈಗೆ ಸಿಕ್ಕಿಬಿದ್ದಿರುವ ಆರೋಪಿ ಮಹಿಳೆ, ಹಿಂದೆ ಕೂಡ ಇಂತಹದ್ದೇ ಕೇಸ್'ನಲ್ಲಿ ಅಂದರ್ ಆಗಿದ್ದಳು. ಆದರೂ ಬುದ್ದಿ ಕಲಿಯದೆ ಮತ್ತದೇ ಕೆಲಸ ಮಾಡಿ ಕಂಬಿ ಹಿಂದೆ ಬಿದ್ದಿದ್ದಾಳೆ. ಫೋನ್ ಕಾಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿ ಮಹಿಳೆ, ಬೆಂಗಳೂರು ಮಾತ್ರವಲ್ಲದೆ ಮುಂಬೈ ಮತ್ತಿತರ ಭಾಗದಲ್ಲಿ ಸುತ್ತಾಡಿ ಹೈಟೆಕ್ ದಂಧೆ ನಡೆಸುತ್ತಿದ್ದಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News