ಬೆಂಗಳೂರು: ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾತ್ರ ಇರುವ ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್(KSRTC Electric Bus) ಗಳ ಸಂಚಾರವು ಶೀಘ್ರವೇ ಅಕ್ಕಪಕ್ಕದ ನಗರಗಳಿಗೂ ಓಡಾಡಲಿವೆ. ಮುಂದಿನ 3 ತಿಂಗಳಲ್ಲಿ KSRTCಗೆ ಮೊದಲ ಎಲೆಕ್ಟ್ರಿಕ್ ಬಸ್ ಬರಲಿದೆ. ಗುತ್ತಿಗೆ ಆಧಾರದಲ್ಲಿ 50 ಬಸ್ ಗಳನ್ನು ಪಡೆಯುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈದರಾಬಾದಿನ ಇವಿ ಟ್ರಾನ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ KSRTC ಕಾರ್ಯಾದೇಶ ನೀಡಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ 3 ತಿಂಗಳಲ್ಲಿ ಬೆಂಗಳೂರು ಮಾತ್ರವಲ್ಲದೆ ಅಕ್ಕಪಕ್ಕದ ನಗರಗಳಲ್ಲಿಯೂ ಎಲೆಕ್ಟ್ರಿಕ್ ಬಸ್(Electric Bus)ಗಳು ಓಡಾಲಿವೆ. ಬಸ್ ಗಳ ನಿರ್ವಹಣೆ, ಚಾರ್ಜಿಂಗ್ ಮತ್ತು ಚಾಲಕರ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಗುತ್ತಿಗೆ ಪಡೆದಿರುವ ಸಂಸ್ಥೆಯೇ ನೋಡಿಕೊಳ್ಳಲಿದೆ. KSRTCಯಿಂದಲೇ ನಿರ್ವಾಹಕರನ್ನು ನಿಯೋಜಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ವಿಚಾರವಾಗಿ ಬೆಂಗಳೂರಿನಲ್ಲಿ ಸಭೆ
ಪ್ರತಿ ಕಿಲೋ ಮೀಟರ್ ಗೆ ತಗಲುವ ವೆಚ್ಚ 55 ರೂ. ಆಗಿದ್ದು, ಗುತ್ತಿಗೆ ಕಂಪನಿಗೆ KSRTC ಹಣ ಪಾವತಿಸಲಿದೆ. ಇದಲ್ಲದೆ ದಿನಕ್ಕೆ ಕನಿಷ್ಠ 450 ಕಿಲೋ ಮೀಟರ್ ಸಂಚರಿಸಲು ವ್ಯವಸ್ಥೆಯನ್ನು ನಿಗಮ ಮಾಡಿಕೊಡಬೇಕಾಗುತ್ತದೆ. ಇದರಿಂದ ಪ್ರತಿ ಎಲೆಕ್ಟ್ರಿಕ್ ಬಸ್(Electric Buses in Bangalore)ಗೆ ದಿನಕ್ಕೆ 24,750 ರೂ.ಪಾವತಿಸಬೇಕಾಗುತ್ತದೆ. ಕನಿಷ್ಠ 450 ಕಿ.ಮೀ ಕ್ರಮಿಸಬಹುದಾದ ಮಾರ್ಗಗಳನ್ನೇ KSRTC ಸಂಸ್ಥೆ ಗುರುತು ಮಾಡಿಕೊಂಡಿದೆ. ಬೆಂಗಳೂರಿಂದ ದಾವಣಗೆರೆ, ಮಡಿಕೇರಿ, ಮೈಸೂರು, ವಿರಾಜಪೇಟೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಬಸ್ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಎಲೆಕ್ಟ್ರಿಕ್ ಬಸ್ ಗಳಲ್ಲಿ 43 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಹವಾನಿಯಂತ್ರಿತ ವ್ಯವಸ್ಥೆ(AC) ಇರಲಿದೆ. KSRTCಯಲ್ಲಿ ಸದ್ಯ ಇರುವ ಡೀಸೆಲ್ ಹವಾನಿಯಂತ್ರಿತ ಬಸ್ ಗಳಲ್ಲಿನ ಪ್ರಯಾಣ ದರವನ್ನೇ ಈ ಎಲೆಕ್ಟ್ರಿಕ್ ಬಸ್(BMTC New Electric Bus) ಗಳಿಗೂ ನಿಗದಿಪಡಿಸುವ ಸಾಧ್ಯತೆ ಇದೆ. ಡೀಸೆಲ್ ವೋಲ್ವೊ ಬಸ್ ಪ್ರತಿ ಕಿ.ಮೀ ಕ್ರಮಿಸಲು ಸದ್ಯ 56 ರೂ. ವೆಚ್ಚ ತಗುಲುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Chikkaballapur earthquake: ಮತ್ತೆ ಕಂಪಿಸಿದ ಚಿಕ್ಕಬಳ್ಳಾಪುರ ತಾಲೂಕು, ಭೂಕಂಪಕ್ಕೆ ಬೆಚ್ಚಿಬಿದ್ದ ಜನರು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.