ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅತ್ಯಾಚಾರವನ್ನು ಸಾಮಾನ್ಯೀಕರಿಸುವ ಹೇಳಿಕೆಯನ್ನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ನೀಡುವ ಮೂಲಕ ಈಗ ವಿವಾದವನ್ನು ಸೃಷ್ಟಿಸಿದ್ದಾರೆ

Written by - Zee Kannada News Desk | Last Updated : Dec 16, 2021, 10:11 PM IST
  • ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅತ್ಯಾಚಾರವನ್ನು ಸಾಮಾನ್ಯೀಕರಿಸುವ ಹೇಳಿಕೆಯನ್ನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ನೀಡುವ ಮೂಲಕ ಈಗ ವಿವಾದವನ್ನು ಸೃಷ್ಟಿಸಿದ್ದಾರೆ
  • ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ವಿಧಾನಸಭೆಯಲ್ಲಿ, ಅತ್ಯಾಚಾರ ಅನಿವಾರ್ಯವಾದಾಗ, ಮಲಗಿ ಅದನ್ನು ಆನಂದಿಸಬೇಕು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್  title=
file photo

ಬೆಂಗಳೂರು: ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅತ್ಯಾಚಾರವನ್ನು ಸಾಮಾನ್ಯೀಕರಿಸುವ ಹೇಳಿಕೆಯನ್ನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ನೀಡುವ ಮೂಲಕ ಈಗ ವಿವಾದವನ್ನು ಸೃಷ್ಟಿಸಿದ್ದಾರೆ

ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ವಿಧಾನಸಭೆಯಲ್ಲಿ, ಅತ್ಯಾಚಾರ ಅನಿವಾರ್ಯವಾದಾಗ, ಮಲಗಿ ಅದನ್ನು ಆನಂದಿಸಬೇಕು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಭಾರತವು ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರತಿನಿಧಿಸುತ್ತದೆ-ಪ್ರಧಾನಿ ಮೋದಿ

ಸದನದ ಸದಸ್ಯರು ರೈತರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿದಾಗ ಅವರ ಬೇಡಿಕೆಗೆ ಸ್ಪಂದಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲರಿಗೂ ಮಾತನಾಡಲು ಸಮಯ ನೀಡಿದರೆ ಸದನ ನಡೆಸುವುದು ಹೇಗೆ? ಎಂದು ಪ್ರಶ್ನಿಸಿದರು. ಈ ಬಗ್ಗೆ ನಿರ್ಧರಿಸುವಂತೆ ಶಾಸಕರನ್ನು ಕೋರಿದ ಅವರು, ರಮೇಶ್ ಕುಮಾರ್ ಅವರಿಗೆ , "ನಾನು ಇದನ್ನು ನಿಯಂತ್ರಣದಲ್ಲಿಟ್ಟುಕೊಂಡು ವ್ಯವಸ್ಥಿತವಾಗಿ ಮುನ್ನಡೆಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: ಭಾರತವು ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರತಿನಿಧಿಸುತ್ತದೆ-ಪ್ರಧಾನಿ ಮೋದಿ

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು“ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಬೇಕು ಎನ್ನುವ ಮಾತಿದೆ ಆ ಸ್ಥಿತಿ ನಿಮ್ಮದಾಗಿದೆ" ಎಂದರು.ಆದರೆ ಸದನದಲ್ಲಿ ರಮೇಶ್ ಕುಮಾರ್ ಅವರ ಮಾತಿಗೆ ಯಾರು ಕೂಡ ಪ್ರತಿರೋಧ ವ್ಯಕ್ತಪಡಿಸದೆ ಸದಸ್ಯರೆಲ್ಲರೂ ಸಹ ನಕ್ಕು ಸುಮ್ಮನಾದರು.

ರಮೇಶ್ ಕುಮಾರ್ ಈ ಹೇಳಿಕೆಯು ವಾಸ್ತವವಾಗಿ ಈ ಹಿಂದೆ ಆಗಾಗ್ಗೆ ಬಳಸುತ್ತಿದ್ದ ಮಾತಾಗಿದೆ, ಆದರೆ ಅದರ ಆಕ್ಷೇಪಾರ್ಹ ಸ್ವರೂಪದಿಂದಾಗಿ ಈಗ ಇದನ್ನು ಬಳಸಲಾಗುವುದಿಲ್ಲ. ಕಠಿಣ ಪರಿಸ್ಥಿತಿಯನ್ನು ಎದುರಿಸಲು ಯಾವುದೇ ಅನ್ಯ ಮಾರ್ಗವಿಲ್ಲದಿದ್ದಾಗ, ಅದನ್ನು ಎದುರಿಸುವ ಬದಲು ಅದರ ಜೊತೆಗೆ ಹೊಂದಿಕೊಂಡು ಹೋಗುವುದು ಉತ್ತಮ ಎನ್ನುವುದನ್ನು ಸೂಚಿಸಲು ಈ ಮಾತನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಓಮಿಕ್ರಾನ್ ರೂಪಾಂತರದ ಐದು ಹೊಸ ಪ್ರಕರಣಗಳು ಪತ್ತೆ

ಆದರೆ ವಾಸ್ತವಾಗಿ ಅವರ ಈ ಹೇಳಿಕೆ ಅತ್ಯಾಚಾರದಂತಹ ಘೋರ ಅಪರಾಧವನ್ನು ಸಾಮ್ಯಾನ್ಯಗೊಳಿಸುತ್ತದೆ, ಈ ಹಿನ್ನಲೆಯಲ್ಲಿ ಈಗ ರಮೇಶ್ ಕುಮಾರ್ ಅವರ ಈ ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News