ಕೆಪಿಎಲ್ ಬೆಟ್ಟಿಂಗ್ ಹಗರಣ: ಮಾಜಿ ರಣಜಿ ಆಟಗಾರ ಸುಧೇಂದ್ರ ಶಿಂಧೆ ಬಂಧನ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬೆಟ್ಟಿಂಗ್ ಹಗರಣಕ್ಕೆ ಸಹಾಯ ಮಾಡಿದ್ದಕ್ಕಾಗಿ ಮಾಜಿ ರಣಜಿ ಆಟಗಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‌ಸಿಎ) ನಿರ್ವಹಣಾ ಸಮಿತಿ ಸದಸ್ಯ ಸುಧೇಂದ್ರ ಶಿಂಧೆ ಅವರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Last Updated : Dec 4, 2019, 08:28 PM IST
 ಕೆಪಿಎಲ್ ಬೆಟ್ಟಿಂಗ್ ಹಗರಣ: ಮಾಜಿ ರಣಜಿ ಆಟಗಾರ ಸುಧೇಂದ್ರ ಶಿಂಧೆ ಬಂಧನ  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬೆಟ್ಟಿಂಗ್ ಹಗರಣಕ್ಕೆ ಸಹಾಯ ಮಾಡಿದ್ದಕ್ಕಾಗಿ ಮಾಜಿ ರಣಜಿ ಆಟಗಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ (ಕೆಎಸ್‌ಸಿಎ) ನಿರ್ವಹಣಾ ಸಮಿತಿ ಸದಸ್ಯ ಸುಧೇಂದ್ರ ಶಿಂಧೆ ಅವರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಸ್ಫಾಕ್ ಅಲಿ ತಾರಾ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಶಿಂಧೆ ಅವರನ್ನು ಬಂಧಿಸಲಾಗಿದೆ 'ಎಂದು ಕೇಂದ್ರ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಐಎಎನ್‌ಎಸ್‌ಗೆ ದೃಡಪಡಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ 2019 ಕೆಪಿಎಲ್ ಆವೃತ್ತಿಯಲ್ಲಿ, ಅಲಿ ಒಡೆತನದ ಬೆಳಗಾವಿ ಪ್ಯಾಂಥರ್ಸ್ ಟಿ 20 ತಂಡದ ತರಬೇತುದಾರರಾಗಿದ್ದ ಶಿಂಧೆ ಅವರನ್ನು ಬಂಧಿಸಲಾಯಿತು. ಅವರು ಜಾಮೀನಿನಲ್ಲಿದ್ದಾರೆ. ಶಿಂಧೆ ಅವರನ್ನು ಬುಧವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಜೈನ್ ಹೇಳಿದ್ದಾರೆ.

ಸೋಮವಾರದಂದು ಐವರು ಪೊಲೀಸ್ ಅಧಿಕಾರಿಗಳು ಶಿಂಧೆ ಅವರ ಮನೆಯಲ್ಲಿ ಹುಡುಕಾಟ ನಡೆಸಿ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈಗ ಇದರ ವಿಚಾರವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಜೈನ್ ಹೇಳಿದ್ದಾರೆ. 'ಮಾಜಿ ರಣಜಿ ಆಟಗಾರರಾಗಿರುವ ಶಿಂಧೆ ಕೋಚ್ ಹಾಗೂ ಆಯ್ಕೆದಾರನಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಮೃತ್ಯುಂಜಯ ತಿಳಿಸಿದ್ದಾರೆ. ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ಕರ್ನಾಟಕದ ರಾಯಚೂರು ಪ್ರದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಶಿಂಧೆ ಅವರಿಗೆ ವಹಿಸಲಾಗಿತ್ತು ಎನ್ನಲಾಗಿದೆ.

ಸ್ಥಳೀಯ ಟಿ 20 ಪಂದ್ಯಾವಳಿ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗವು ರಾಜ್ಯ ಕ್ರಿಕೆಟ್ ಸಂಘದಿಂದ ಮಾಹಿತಿಯನ್ನು ಕಲೆಹಾಕುತ್ತಲೇ ಇದೆ ಎನ್ನಲಾಗಿದೆ. ಬಿಸಿಸಿಐ ಒಡೆತನದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಪೂರಕವಾಗಿ ಕೆಪಿಎಲ್ ಸ್ಥಳೀಯ ಫ್ರ್ಯಾಂಚೈಸ್ ಆಧಾರಿತ ಪ್ರಮುಖ ಲೀಗ್ ಆಗಿ ಹೊರಹೊಮ್ಮಿದೆ.

Trending News