ಸಿಎಂ ಸ್ಥಾನಕ್ಕಾಗಿ ಬೊಮ್ಮಾಯಿ‌ ಸುಮ್ಮನೆ ಕೂರಬಾರದಿತ್ತು: ಡಿ.ಕೆ.ಶಿವಕುಮಾರ್

ಕರ್ನಾಟಕ-ತಮಿಳುನಾಡಿನವರೇ ಮಾಡಿಕೊಳ್ಳುವುದಾದರೆ ಇವರು ಯಾಕೆ ಬೇಕು. ಸುಪ್ರಿಂ ಕೋರ್ಟ್‌ (Supreme Court) ಕುಡಿಯುವ ನೀರಿಗೆ ಯಾವುದೇ ಎನ್‌ಓ‌ಸಿ ಬೇಕಾಗಿಲ್ಲ ಅಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

Written by - Zee Kannada News Desk | Last Updated : Mar 6, 2022, 04:56 PM IST
  • ಕರ್ನಾಟಕ-ತಮಿಳುನಾಡಿನವರೇ ಮಾಡಿಕೊಳ್ಳುವುದಾದರೆ ಇವರು ಯಾಕೆ ಬೇಕು
  • ಸುಪ್ರಿಂ ಕೋರ್ಟ್‌ ಕುಡಿಯುವ ನೀರಿಗೆ ಯಾವುದೇ ಎನ್‌ಓ‌ಸಿ ಬೇಕಾಗಿಲ್ಲ ಅಂದಿದ್ದಾರೆ
  • ಕೇಂದ್ರ ಸರ್ಕಾರ ನಮಗೆ ಎನ್‌ಓಸಿ ಕೊಡುವ ಕೆಲಸ ಮಾಡಬೇಕು
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ
ಸಿಎಂ ಸ್ಥಾನಕ್ಕಾಗಿ ಬೊಮ್ಮಾಯಿ‌ ಸುಮ್ಮನೆ ಕೂರಬಾರದಿತ್ತು:  ಡಿ.ಕೆ.ಶಿವಕುಮಾರ್  title=
ಡಿ.ಕೆ.ಶಿವಕುಮಾರ್

ರಾಮನಗರ: ಕರ್ನಾಟಕ-ತಮಿಳುನಾಡಿನವರೇ ಮಾಡಿಕೊಳ್ಳುವುದಾದರೆ ಇವರು ಯಾಕೆ ಬೇಕು. ಸುಪ್ರಿಂ ಕೋರ್ಟ್‌ (Supreme Court) ಕುಡಿಯುವ ನೀರಿಗೆ ಯಾವುದೇ ಎನ್‌ಓ‌ಸಿ ಬೇಕಾಗಿಲ್ಲ ಅಂದಿದ್ದಾರೆ. ಕೇಂದ್ರ ಸರ್ಕಾರ ನಮಗೆ ಎನ್‌ಓಸಿ (NOC) ಕೊಡುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಮ್ಮುಖದಲ್ಲಿ ಕೇಂದ್ರ ಸಚಿವರು ನಾವು ಏನು ಮಾಡಲು ಆಗುವುದಲ್ಲ ಎಂದಿದ್ದಾರೆ. ಅವರ ಹೇಳಿಕೆಗೆ ಸಿಎಂ ಮೌನದಿಂದ ಬಂದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ‌ (CM Bommai) ಉತ್ತರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. 

ಇದನ್ನೂ ಓದಿ: women's world cup 2022 : ಪಾಕ್ ವಿರುದ್ಧ ಗೆದ್ದು ಬಿಗಿದಿ ಭಾರತ ಮಹಿಳಾ ಮಣಿಗಳು!

ಕನಕಪುರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC DK Shivakumar), ಉತ್ತರ ನೀಡಲು ಆಗದಿದ್ದಲ್ಲಿ ಸಿಎಂ ಈ ಕೂಡಲೇ ರಾಜೀನಾಮೆ ನೀಡಬೇಕು. ಕೇಂದ್ರ ಮಂತ್ರಿ ನನ್ನ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ ಎಂದರೆ ಅರ್ಥ ಏನು ಎಂದು ಕಿಡಿಕಾರಿದ್ದಾರೆ.

ಸಿಎಂ ಸ್ಥಾನಕ್ಕಾಗಿ ಬೊಮ್ಮಾಯಿ‌ ಸುಮ್ಮನೆ ಕೂರಬಾರದಿತ್ತು. ಮೇಕೆದಾಟು (Mekedatu) ಯೋಜನೆಗೆ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು, ಅವರು ರಾಜಕಾರಣ ಮಾಡೋರು ಈ ವಿಚಾರಕ್ಕೆ ಯಾವತ್ತು ಒಪ್ಪಲ್ಲ. ಕೂಡಲೇ ಎನ್‌ಓಸಿ ಕೊಡಿಸಬೇಕು. ದಿನಾಂಕ ನಿಗದಿ ಮಾಡಿಸಬೇಕು ಎಂದಿದ್ದಾರೆ. 

ಕೇಂದ್ರ ಸರ್ಕಾರಕ್ಕೆ ಶಕ್ತಿ ಇಲ್ಲ ಎಂಬುದನ್ನ ತೋರಿಸುತ್ತಿದೆ. ಇದಕ್ಕೆ ಸಿಎಂ ಉತ್ತರ ನೀಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಇಲ್ಲವಾದ್ರೆ ಅಧಿಕಾರ ಬಿಟ್ಟು ಹೋಗಲಿ ಎಂದು ಸಿಎಂ ಬಸವರಾಜ ಬೊಮ್ಮಯಿ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ: Video:ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ 19 ವರ್ಷದ ರೇಖಾ ಇಂದು YouTube ನಲ್ಲಿ One Leg Dancer

ಮೇಕೆದಾಟು ಬಗ್ಗೆ ಕುಮಾರಸ್ವಾಮಿ (Kumaraswamy) ಟ್ವೀಟ್ ವಿಚಾರ, ಕುಮಾರಸ್ವಾಮಿ ದೊಡ್ಡವರು. ಅವರ ಬಗ್ಗೆ ನಾನು ಏನು‌ ಮಾತನಾಡುವುದಿಲ್ಲ. ಅವರಿಗೆ ಉತ್ತರ ಕೋಡೋ ಶಕ್ತಿ ನನಗಿಲ್ಲ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News