ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ ಜ್ವರದಿಂದ ಮೃತಪಟ್ಟಿದೆ ಎಂದು ಎಎನ್ಐ ವರದಿ ಮಾಡಿದೆ.
62 ವರ್ಷ ವಯಸ್ಸಾಗಿದ್ದ ಇಂದಿರಾ ಎನ್ನುವ ಆನೆ ಕಳೆದ 20 ದಿನಗಳಿಂದ ಜ್ವರದಿಂದ ಬಳಲುತ್ತಿತ್ತು ಎನ್ನಲಾಗಿದೆ.ಈಗ ದೇವಸ್ತಾನದ ಭಕ್ತಾದಿಗಳು ಹಾಗೂ ಸ್ಥಳೀಯರು ಈಗ ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಅದು ಸಾವನ್ನಪ್ಪಿದೆ ಎಂದು ದೂರಿದ್ದಾರೆ.
Karnataka: A 62-year-old elephant named Indira, belonging to Kollur Shree Mookambika Temple in Udupi district, died yesterday due to fever. The elephant was suffering from fever since last 20 days. pic.twitter.com/eo8sIOGdFX
— ANI (@ANI) August 14, 2019
ಕಳೆದ 22 ವರ್ಷಗಳಿಂದ ದೇವಸ್ತಾನದ ಸೇವೆ ಸಲ್ಲಿಸುತ್ತಿದ್ದ ಇಂದಿರಾ ನಿಧನಕ್ಕೆ ಭಕ್ತರು ಕಂಬನಿ ಮೀಡಿದಿದ್ದಾರೆ. ಈ ಆನೆ ಕೊಲ್ಲೂರು ದೇವಸ್ತಾನಕ್ಕೆ ಕಟ್ಟಿಗೆ ಮಾರಾಟಗಾರನಿಂದ ಕೊಡುಗೆ ರೂಪದಲ್ಲಿ ಬಂದಿತ್ತು ಎನ್ನಲಾಗಿದೆ