SSLC Final Exam 2022 Time Table: ಎಸ್ಎಸ್ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

SSLC Final Exam 2022 Time Table: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Examination Board) ವರ್ಷ 2022ರ SSLC ಮುಖ್ಯ ಪರೀಕ್ಷೆಗಾಗಿ (SSLC Main Exam 2022) ವೇಳಾಪಟ್ಟಿ ಪ್ರಕಟಿಸಿದೆ. ಈ ಪರೀಕ್ಷೆಗಳು ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ನಡೆಯಲಿವೆ. 

Written by - Nitin Tabib | Last Updated : Jan 25, 2022, 07:14 PM IST
  • SSLC ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ.
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ವೇಳಾಪಟ್ಟಿ ಪ್ರಕಟ
  • ಯಾವ ವಿಷಯದ ಪರೀಕ್ಷೆ ಯಾವಾಗ ತಿಳಿಯಲು ಸುದ್ದಿ ಓದಿ.
SSLC Final Exam 2022 Time Table: ಎಸ್ಎಸ್ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ  title=
SSLC Final Exam 2022 Time Table (File Photo)

SSLC Final Exam 2022 Time Table: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವರ್ಷ 2022ರ SSLC ಮುಖ್ಯ ಪರೀಕ್ಷೆಗಾಗಿ ವೇಳಾಪಟ್ಟಿ (SSLC Exam Time Table 2022) ಪ್ರಕಟಿಸಿದೆ. ಈ ಪರೀಕ್ಷೆಗಳು ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ನಡೆಯಲಿವೆ. ಮಾರ್ಚ್ 28 ರಂದು ಪ್ರಥಮ ಭಾಷೆಯ ಪರೀಕ್ಷೆ ನಡೆಯಲಿದ್ದರೆ 30 ರಂದು ದ್ವಿತೀಯ ಭಾಷೆಯ ಪರೀಕ್ಷೆ ನಡೆಯಲಿದೆ. ಎಪ್ರಿಲ್ 1 ರಂದು ಕೋರ್ ಸಬ್ಜೆಕ್ಟ್ ಗಳಿಗಾಗಿ (Elements of Mechanical & Electrical Engineering -2, Engineering Graphics, Elements Of Electronics Engineering, Elements Of Computer Science, Economics) ಪರೀಕ್ಷೆ ನಡೆಯಲಿದ್ದರೆ, 

ಇದನ್ನೂ ಓದಿ-ಕೆಪಿಸಿಸಿ ಅಧ್ಯಕ್ಷರ ಬಳಿ ಬಿಜೆಪಿ ಬಿಟ್ಟು ಬರುವ ಶಾಸಕರ, ಸಚಿವರ ಪಟ್ಟಿ ಇದೆ: ಜಿ.ಪರಮೇಶ್ವರ್ ಹೊಸ ಬಾಂಬ್

ಏಪ್ರಿಲ್ 4 ರಂದು ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 6ರಂದು ಸಾಮಾಜಿಕ ವಿಜ್ಞಾನ ಪರೀಕ್ಷೆ ನಡೆಯಲಿದ್ದರೆ, ಏಪ್ರಿಲ್ 8 ರಂದು ಮೂರನೇ ಭಾಷೆಗಳಿಗೆ (Hindi-NCERT, Hindi, Kannada, English, Arabic, Persian, Urdu, Sanskrit, Knonkani, Tulu) ಮತ್ತು NSOF ವಿಷಯಗಳಿಗೆ (Information Technology, Retail, Automobile, Health Care, Beauty&Wellness) ಪರೀಕ್ಷೆ ನಡೆಯಲಿದೆ. ಏಪ್ರಿಲ್ 11ನೇ ತಾರೀಖಿಗೆ ರಾಜ್ಯಶಾಸ್ತ್ರ ಮತ್ತು ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ.

ಇದನ್ನೂ ಓದಿ-Republic Day:ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಇನ್ನುಳಿದಂತೆ ಮಾರ್ಚ್ 29 ಮತ್ತು ಮಾರ್ಚ್ 31 ರಂದು ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಏಪ್ರಿಲ್ 2 ರಂದು ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ರಜೆ ಇದ್ದರೆ,  3ನೇ ತಾರೀಖಿಗೆ ಭಾನುವಾರದ ರಜೆ ಇರಲಿದೆ. ಏಪ್ರಿಲ್ 5, 7, 9, 10 ದಿನಾಂಕಗಳಂದು ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಪರೀಕ್ಷಾ ಸಮಯ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1.45ರವರೆಗೆ ಇರಲಿದೆ. ಪ್ರತಿ ವಿಷಯಕ್ಕೆ ಪ್ರಶ್ನೆ ಪತ್ರಿಕೆಯನ್ನು ಓದಲು 15 ನಿಮಿಷಗಳ ಸಮಯಾವಕಾಶ ನೀಡಲಾಗಿದೆ. ಕೊರೊನಾ ಮಹಾಮಾರಿಯ ನಡುವೆ SSLC ವಾರ್ಷಿಕ ಪರೀಕ್ಷೆ ನಡೆಸಲು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಅಧಿಕೃತ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದನ್ನೂ ಓದಿ-ಬಿಡಿಎ ಕರ್ಮಕಾಂಡ ಮೂರೇ ದಿನದಲ್ಲಿ ದಾಖಲಾಯ್ತು 8 ಎಫ್ಐಆರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News