ಕೈದಿಗಳ ಸಂಬಳ ಮತ್ತೆ 3 ಪಟ್ಟು ಜಾಸ್ತಿ: ರಾಜ್ಯದ ಕೈದಿಗಳಿಗೆ ದೇಶದಲ್ಲೇ ಅತಿಹೆಚ್ಚು ಸ್ಯಾಲರಿ..!

Prisoners Salary Hike: ರಾಜ್ಯ ಗೃಹ ಇಲಾಖೆ ಕರ್ನಾಟಕದ ಖೈದಿಗಳ ಸಂಬಳವನ್ನು 3 ಪಟ್ಟು ಜಾಸ್ತಿ ಮಾಡಿ ಅದೇಶ ಹೊರಡಿಸಿದ್ದು, ರಾಜ್ಯದ ಜೈಲಿನಲ್ಲಿರುವ ಖೈದಿಗಳು ದೇಶದಲ್ಲೇ ಹೆಚ್ಚು ಸಂಬಳ ಪಡೆಯುವಂತಾಗಿದೆ.

Written by - VISHWANATH HARIHARA | Edited by - Puttaraj K Alur | Last Updated : Dec 29, 2022, 10:33 AM IST
  • ರಾಜ್ಯದ ಕೈದಿಗಳ ಸಂಬಳವನ್ನು ಮತ್ತೆ ಜಾಸ್ತಿ ಮಾಡಿದ ರಾಜ್ಯ ಗೃಹ ಇಲಾಖೆ
  • ಕರ್ನಾಟಕದ ಕೈದಿಗಳಿಗೆ 3 ಪಟ್ಟು ಸಂಬಳ ಜಾಸ್ತಿ ಮಾಡಿ ಸರ್ಕಾರದ ಅದೇಶ
  • ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯ
ಕೈದಿಗಳ ಸಂಬಳ ಮತ್ತೆ 3 ಪಟ್ಟು ಜಾಸ್ತಿ: ರಾಜ್ಯದ ಕೈದಿಗಳಿಗೆ ದೇಶದಲ್ಲೇ ಅತಿಹೆಚ್ಚು ಸ್ಯಾಲರಿ..! title=
ಕೈದಿಗಳ ಸಂಬಳ 3 ಪಟ್ಟು ಹೆಚ್ಚು!

ಬೆಂಗಳೂರು: ಸಂಬಳ ಸಾಕಾಗುತ್ತಿಲ್ಲವೆಂದು‌ ಅಂಗನವಾಡಿ ಕಾರ್ಯಕರ್ತೆಯರು, ‘ಡಿ’ ಗ್ರೂಪ್ ನೌಕರರು, ಗಾರ್ಮೆಂಟ್ಸ್ ಉದ್ಯೋಗಿಗಳು ಆಗಾಗ ಪ್ರತಿಭಟನೆ ಮಾಡುತ್ತಿರುತ್ತಾರೆ. ಇದ್ಯಾವುದಕ್ಕೂ ಸರ್ಕಾರ ಕ್ಯಾರೆ ಎಂದಿಲ್ಲ. ಆದರೆ ನಾನಾ ಕಾರಣಗಳಿಂದ ಜೈಲು ಸೇರಿರುವ ಕೈದಿಗಳಿಗೆ ಮಾತ್ರ ಭರಪೂರ ಸಂಬಳ ಜಾಸ್ತಿ ನೀಡುತ್ತಿದೆ.

ಹೌದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ರಾಜ್ಯ ಸರ್ಕಾರ ಮತ್ತೆ ಸಂಬಳ ಜಾಸ್ತಿ ಮಾಡಿದೆ. ರಾಜ್ಯ ಗೃಹ ಇಲಾಖೆ ಕರ್ನಾಟಕದ ಕೈದಿಗಳ ಸಂಬಳವನ್ನು 3 ಪಟ್ಟು ಜಾಸ್ತಿ ಮಾಡಿ ಅದೇಶ ಹೊರಡಿಸಿದ್ದು, ರಾಜ್ಯದ ಕೈದಿಗಳು ದೇಶದಲ್ಲೇ ಹೆಚ್ಚು ಸಂಬಳ ಪಡೆಯುವಂತಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳಿವೆ. ಈ 54 ಕಾರಾಗೃಹಗಳಲ್ಲಿ ಶಿಕ್ಷೆಗೊಳಗಾಗಿರುವ ಕೈದಿಗಳ ಸಂಖ್ಯೆ 3565. ಇವರಿಗೆ ನೀಡುತ್ತಿದ್ದ ಸಂಬಳ 1 ವರ್ಷಕ್ಕೆ 58 ಕೋಟಿ 28 ಲಕ್ಷದ 34,720 ರೂ. ಇಷ್ಟು ಪ್ರಮಾಣದ ತೆರಿಗೆ ಹಣವನ್ನು ರಾಜ್ಯ ಗೃಹ ಇಲಾಖೆ ಜೈಲಿನ ಕೈದಿಗಳಿಗೆ ನೀಡುತ್ತಿದೆ.

ಇದನ್ನೂ ಓದಿ: NEW YEAR ಗೆ ಬ್ರಿಗೇಡ್ ರೋಡ್ ಸಜ್ಜು: ಭದ್ರತೆ ಪರಿಶೀಲಿಸಿದ ಕಮಿಷನರ್

ಕೈದಿಗಳ ಸಂಬಳ ಹೀಗಿರುತ್ತೆ ನೋಡಿ

  • ಆರಂಭದ 1 ವರ್ಷದವರೆಗೆ ಪ್ರತಿದಿನಕ್ಕೆ 524 ರೂ. ನಿಗದಿ ಆಗಿರುತ್ತದೆ
  • 1 ವರ್ಷ ಅನುಭವದ ಬಳಿಕ ಕುಶಲ ಬಂಧಿ ಎಂದು ಪರಿಗಣನೆ
  • ಆಗ ಓರ್ವ ಕೈದಿಗೆ ಸಿಗುವ ಸಂಬಳ ದಿನಕ್ಕೆ 548 ರೂ.
  • ಅಂದರೆ ವಾರದ ರಜೆ ಪಡೆದು ಕೆಲಸ ಮಾಡಿದ್ರೆ ಸಿಗುವ ಸಂಬಳ 14,248 ರೂ. 
  • 2 ವರ್ಷ ಅನುಭವ ಆದರೆ ಅರೆ ಕುಶಲ ಬಂಧಿ ಎಂದು ಪರಿಗಣನೆ
  • ಆಗ ಓರ್ವ ಕೈದಿಗೆ ಸಿಗುವ ಸಂಬಳ ದಿನಕ್ಕೆ 615 ರೂ.
  • ವಾರದ ರಜೆ ಪಡೆದು ಕೆಲಸ ಮಾಡಿದ್ರೆ ತಿಂಗಳಿಗೆ 15,990 ರೂ. ನೀಡಲಾಗುತ್ತದೆ
  • 3 ವರ್ಷ ಅನುಭವ ಆದ ಬಳಿಕ ತರಬೇತಿ ಕೆಲಸಗಾರ ಬಂಧಿ ಎಂದು ಪರಿಗಣನೆ
  • ಆಗ ಓರ್ವ ಕೈದಿಗೆ ದಿನಕ್ಕೆ ಸಿಗುವ ಸಂಬಳ ದಿನಕ್ಕೆ 663 ರೂ.
  • ವಾರದ ರಜೆ ಪಡೆದು ಕೆಲಸ ಮಾಡಿದ್ರೆ ಸಿಗುವ ತಿಂಗಳ ಸಂಬಳ 17,238 ರೂ. ಆಗುತ್ತದೆ

ಇನ್ನೂ ಕೈದಿಗಳಿಗೆ ಸಂಬಳ ಹೆಚ್ಚಳದ ಸುದ್ದಿ ತಿಳಿದ  ಹಲವರು ತಪ್ಪು ಮಾಡಿ ಜೈಲಿಗೆ ಹೋಗಿ ಊಟ- ವಸತಿ ಜೊತೆಗೆ ಉತ್ತಮ ಸಂಬಳ ತಗೆದುಕೊಳ್ಳುವುದು ಉತ್ತಮವೆಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ವ್ಯಂಗ್ಯವಾಡುತ್ತಿದ್ದಾರೆ.

ಇದನ್ನೂ ಓದಿ: New Year 2023: ಮಹಾಕುಡುಕರಿಗೆ ಪೊಲೀಸರಿಂದ ಇಲ್ಲೊಂದು ಬಂಪರ್ ಆಫರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News