ನಾಳೆ ರಾಜ್ಯ ಅನರ್ಹ ಶಾಸಕರ 'ಸುಪ್ರೀಂ' ಭವಿಷ್ಯ

  ರಾಜ್ಯ ವಿಧಾನಸಭೆಯಿಂದ 17 ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತೀರ್ಪನ್ನು ಸುಪ್ರೀಂ ಕೋರ್ಟ್ ನವೆಂಬರ್ 13 ರಂದು ಪ್ರಕಟಿಸಲಿದೆ.

Last Updated : Nov 12, 2019, 09:02 PM IST
ನಾಳೆ ರಾಜ್ಯ ಅನರ್ಹ ಶಾಸಕರ 'ಸುಪ್ರೀಂ' ಭವಿಷ್ಯ  title=
file photo

ನವದೆಹಲಿ:  ರಾಜ್ಯ ವಿಧಾನಸಭೆಯಿಂದ 17 ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತೀರ್ಪನ್ನು ಸುಪ್ರೀಂ ಕೋರ್ಟ್ ನವೆಂಬರ್ 13 ರಂದು ಪ್ರಕಟಿಸಲಿದೆ.

ಸುಪ್ರೀಕೋರ್ಟ್ ನ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸಂಜೀವ್ ಖನ್ನಾ, ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠ ಈ ತೀರ್ಪು ನೀಡಲಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಅಕ್ಟೋಬರ್ 25 ರಂದು ಆದೇಶವನ್ನು ಕಾಯ್ದಿರಿಸಿತ್ತು.

ಈ ವರ್ಷದ ಜುಲೈನಲ್ಲಿ ಕರ್ನಾಟಕದ 17 ಮಾಜಿ ಶಾಸಕರು ತಮ್ಮ ಹಿಂದಿನ ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಅನರ್ಹತೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 17 ಶಾಸಕರ ರಾಜೀನಾಮೆಯಿಂದಾಗಿ ಈ ವರ್ಷದ ಜುಲೈನಲ್ಲಿ ಎಚ್ಡಿ ಕುಮಾರಸ್ವಾಮಿ ನೇತೃತ್ವದ ಆಡಳಿತ ಉರುಳಿತ್ತು. ನಂತರ ಅವರನ್ನು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಅವರು ಪಕ್ಷಾಂತರದ ಕಾರಣದಿಂದ ಅನರ್ಹಗೊಳಿಸಿದ್ದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿದ್ದ ಅರ್ಜಿಗಳಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಅನರ್ಹ ಶಾಸಕರು ರಾಜ್ಯದ 15 ವಿಧಾನಸಭಾ ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯದ ಮುಂದೆ ಮೊರೆ ಹೋಗಿದ್ದರು. ಶಾಸಕರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್, ಆರ್ಯಮಾ ಸುಂದರಂ, ಎ.ಕೆ. ಗಂಗೂಲಿ, ಕೆ.ವಿ.ಸ್ವನಾಥನ್, ಸಜನ್ ಪೂವಾಯ್ಯ ಮತ್ತು ವಿ ಗಿರಿ ವಾದಿಸಿದ್ದಾರೆ.

Trending News