ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ 40% ಇರುವ ಕಮಿಷನ್ 80% ಆಗಬಹುದು, ಭ್ರಷ್ಟಾಚಾರ ದುಪ್ಪಟ್ಟಾಗಲಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
#bjpಪಾಪದಪುರಾಣ ಹ್ಯಾಶ್ಟ್ಯಾಗ್ ಬಳಸಿ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನಮ್ಮ ಚಿಂತನೆ, ಭರವಸೆಗಳು ಜನಪರವಾಗಿದ್ದರೆ, ಬಿಜೆಪಿಯ ಚಿಂತನೆಗಳು ಭ್ರಷ್ಟಾಚಾರದ್ದಾಗಿರುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ 40% ಇರುವ ಕಮಿಷನ್ 80% ಆಗಬಹುದು, ಭ್ರಷ್ಟಾಚಾರ ದುಪ್ಪಟ್ಟಾಗಲಿದೆ. ಒಟ್ಟಿನಲ್ಲಿ ಕಮಿಷನ್ ಕಡ್ಡಾಯಗೊಳಿಸುತ್ತೇವೆ. ರಾಜ್ಯದ ಜನತೆಗೆ ಬಿಜೆಪಿ ಕೊಡುವ ಆಶ್ವಾಸನೆಗಳು ಹೀಗಿರುತ್ತವೆ!’ ಎಂದು ಟೀಕಿಸಿದೆ.
ನಮ್ಮ ಚಿಂತನೆ, ಭರವಸೆಗಳು ಜನಪರವಾಗಿದ್ದರೆ, @BJP4Karnataka ಚಿಂತನೆಗಳು ಭ್ರಷ್ಟಾಚಾರದ್ದಾಗಿರುತ್ತದೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ 40% ಇರುವ ಕಮಿಷನ್ 80% ಆಗಬಹುದು, ಭ್ರಷ್ಟಾಚಾರ ದುಪ್ಪಟ್ಟಾಗಲಿದೆ.
ಒಟ್ಟಿನಲ್ಲಿ ಕಮಿಷನ್ ಕಡ್ಡಾಯಗೊಳಿಸುತ್ತೇವೆರಾಜ್ಯದ ಜನತೆಗೆ ಬಿಜೆಪಿ ಕೊಡುವ ಆಶ್ವಾಸನೆಗಳು ಹೀಗಿರುತ್ತವೆ!#bjpಪಾಪದಪುರಾಣ pic.twitter.com/6FPLDkVa6u
— Karnataka Congress (@INCKarnataka) January 17, 2023
ಇದನ್ನೂ ಓದಿ: HD Lamani Passed Away: ಮಾಜಿ ಸಚಿವ ಎಚ್.ಡಿ.ಲಮಾಣಿ ವಿಧಿವಶ
‘#40PercentSarkaraವು ಕಮಿಷನ್ ಲೂಟಿ ಬಿಟ್ಟು ಬೇರೆ ಇನ್ಯಾವ ಸಾಧನೆ ಮಾಡಿಲ್ಲ. ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಟೇಪ್ ಕಟ್ ಮಾಡುವುದನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿಯುವುದು ಬಿಜೆಪಿ ಸರ್ಕಾರ. ನಮ್ಮ ಕೆಲಸಗಳಿಗೆ ಕ್ರೆಡಿಟ್ ಪಡೆಯುವುದನ್ನು ಬಿಟ್ಟು ತಮ್ಮ ಸಾಧನೆ ಏನೆಂದು ಹೇಳಲಿ ಬಿಜೆಪಿ’ ಅಂತಾ ಕುಟುಕಿದೆ.
#40PercentSarkara
ಕಮಿಷನ್ ಲೂಟಿ ಬಿಟ್ಟು ಬೇರೆ ಇನ್ಯಾವ ಸಾಧನೆ ಮಾಡಿಲ್ಲ.ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಟೇಪ್ ಕಟ್ ಮಾಡುವುದನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿಯುವುದು @BJP4Karnataka.
ನಮ್ಮ ಕೆಲಸಗಳಿಗೆ ಕ್ರೆಡಿಟ್ ಪಡೆಯುವುದನ್ನು ಬಿಟ್ಟು ತಮ್ಮ ಸಾಧನೆ ಏನೆಂದು ಹೇಳಲಿ ಬಿಜೆಪಿ. https://t.co/eoilhemWmW
— Karnataka Congress (@INCKarnataka) January 17, 2023
‘ಗುತ್ತಿಗೆದಾರರು ಸಾಕ್ಷಿ, ದಾಖಲೆ ಇಲ್ಲದೆ ಆರೋಪ ಮಾಡ್ತಿದಾರೆ ಎನ್ನುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರೇ, ಒಂದೊಂದೇ ಸಾಕ್ಷಿಗಳು ಹೊರಬರುತ್ತಿವೆಯಲ್ಲ, ಇನ್ನಾದರೂ ಕಮಿಷನ್ ಲೂಟಿಯನ್ನು ಉನ್ನತ ತನಿಖೆಗೆ ವಹಿಸುವಿರಾ? ಪ್ರಾಮಾಣಿಕ, ಪಾರದರ್ಶಕ ಎಂದು ಬಾಯಲ್ಲಿ ಹೇಳುವ ಮೊದಲು ಕೃತಿಯಲ್ಲಿ ಮಾಡಿ ತೋರಿಸುವುದು ಯಾವಾಗ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗುತ್ತಿಗೆದಾರರು ಸಾಕ್ಷಿ, ದಾಖಲೆ ಇಲ್ಲದೆ ಆರೋಪ ಮಾಡ್ತಿದಾರೆ ಎನ್ನುತ್ತಿದ್ದ @BSBommai ಅವರೇ,
ಒಂದೊಂದೇ ಸಾಕ್ಷಿಗಳು ಹೊರಬರುತ್ತಿವೆಯಲ್ಲ, ಇನ್ನಾದರೂ ಕಮಿಷನ್ ಲೂಟಿಯನ್ನು ಉನ್ನತ ತನಿಖೆಗೆ ವಹಿಸುವಿರಾ?
ಪ್ರಾಮಾಣಿಕ, ಪಾರದರ್ಶಕ ಎಂದು ಬಾಯಲ್ಲಿ ಹೇಳುವ ಮೊದಲು ಕೃತಿಯಲ್ಲಿ ಮಾಡಿ ತೋರಿಸುವುದು ಯಾವಾಗ?#40PercentSarkara
— Karnataka Congress (@INCKarnataka) January 17, 2023
ಇದನ್ನೂ ಓದಿ: ಸಿದ್ದು ಕಂಡ್ರೆ ಮೋದಿಗೆ ಭಯ- ಅದಕ್ಕೇ ರಾಜ್ಯಕ್ಕೆ ಓಡೋಡಿ ಬರ್ತಿದ್ದಾರೆ: ಕೈ ಶಾಸಕ ಪುಟ್ಟರಂಗಶೆಟ್ಟಿ
◆ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದಾಗಲೂ ಅಸಾಧ್ಯವೆಂದು ಟೀಕಿಸಿದರು
◆ಅನ್ನಭಾಗ್ಯ ಯೋಜನೆ ಘೋಷಿಸಿದಾಗಲೂ ಟೀಕಿಸಿದರು
ಆದರೆ ಕಾಂಗ್ರೆಸ್ ಯೋಜನೆಗಳು ಅಭೂತಪೂರ್ವ ಯಶಸ್ವಿಯಾಗಿ, ಜನರ ಬದುಕಿಗೆ ಆಸರೆಯಾದವು.
ನಮ್ಮ #GruhaLakshmi #GruhaJyothi ಯೋಜನೆಗಳು ಜನರ ಬದುಕಿಗೆ ಆಸರೆಯಾಗುವುದು ನಿಶ್ಚಿತ.
ಟೀಕಿಸುವವರಿಗೆ ಜನರ ಕಷ್ಟದ ಅರಿವಿಲ್ಲ.
— Karnataka Congress (@INCKarnataka) January 17, 2023
‘ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದಾಗಲೂ ಅಸಾಧ್ಯವೆಂದು ಟೀಕಿಸಿದರು, ಅನ್ನಭಾಗ್ಯ ಯೋಜನೆ ಘೋಷಿಸಿದಾಗಲೂ ಟೀಕಿಸಿದರು. ಆದರೆ ಕಾಂಗ್ರೆಸ್ ಯೋಜನೆಗಳು ಅಭೂತಪೂರ್ವ ಯಶಸ್ವಿಯಾಗಿ, ಜನರ ಬದುಕಿಗೆ ಆಸರೆಯಾದವು. ನಮ್ಮ #GruhaLakshmi #GruhaJyothi ಯೋಜನೆಗಳು ಜನರ ಬದುಕಿಗೆ ಆಸರೆಯಾಗುವುದು ನಿಶ್ಚಿತ. ಟೀಕಿಸುವವರಿಗೆ ಜನರ ಕಷ್ಟದ ಅರಿವಿಲ್ಲ’ವೆಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.