Congress: ಗ್ರಾ.ಪಂ. ಚುನಾವಣೆ: ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದ ಕಾಂಗ್ರೆಸ್!

ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಜವಾಬ್ದಾರಿ ಹಂಚಿಕೆ

Last Updated : Dec 5, 2020, 06:22 PM IST
  • ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಜವಾಬ್ದಾರಿ ಹಂಚಿಕೆ
  • ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ತಯಾರಿ
  • ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ರಾಮಲಿಂಗ ರೆಡ್ಡಿ, ಕೃಷ್ಣ ಬೈರೇ ಗೌಡ, ಬೈರತಿ ಸುರೇಶ್, ನಾರಾಯಣ ಸ್ವಾಮಿ, ಬಿ ಶಿವಣ್ಣ, ಎಸ್.‌ ರವಿಗೆ ಉಸ್ತುವಾರಿ
Congress: ಗ್ರಾ.ಪಂ. ಚುನಾವಣೆ: ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದ ಕಾಂಗ್ರೆಸ್! title=

ಬೆಂಗಳೂರು: ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ತಯಾರಿ ನಡೆಯುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(D.K.Shivakumar)‌ ಇಂದು  ಈ ಕುರಿತಾದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ನಿಯೋಜಿತ ಉಸ್ತುವಾರಿಗಳು ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ.

B.S.Yediyurappa: 'ಸಿಎಂ ಯಡಿಯೂರಪ್ಪ ಆಧುನಿಕ ಹಿಟ್ಲರ್'

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ರಾಮಲಿಂಗ ರೆಡ್ಡಿ, ಕೃಷ್ಣ ಬೈರೇ ಗೌಡ, ಬೈರತಿ ಸುರೇಶ್, ನಾರಾಯಣ ಸ್ವಾಮಿ, ಬಿ ಶಿವಣ್ಣ, ಎಸ್.‌ ರವಿಗೆ ಉಸ್ತುವಾರಿ ನೀಡಲಾಗಿದೆ.

Nikhil: ಮಂಡ್ಯದಿಂದ ಲೋಕಸಭೆಗೆ ನಿಖಿಲ್ ಮತ್ತೊಮ್ಮೆ ಸ್ಪರ್ಧೆ: ಸುಳಿವು ಕೊಟ್ಟ ಹೆಚ್ ಡಿಕೆ

ಅದರಂತೆ, ಬಾಗಲಕೋಟೆ ಜಿಲ್ಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್‌ಆರ್‌ ಪಾಟೀಲ್, ಮಾಜಿ ಸಚಿವೆ ಉಮಾಶ್ರೀ, ಶಾಸಕ ಆನಂದ್ ನ್ಯಾಮೇಗೌಡ, ಎಚ್‌ವೈ ಮೇಟಿ,. ವಿಜಯಾನಂದ ಕಾಶ್ಯಂಪೂರ್‌ ಅವರಿಗೆ ಉಸ್ತುವಾರಿ ನೀಡಲಾಗಿದೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಉಸ್ತುವಾರಿಯನ್ನು ನೀಡಲಾಗಿದೆ.

H D Kumaraswamy: ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಕೆಟ್ಟೆ: 'ಬಿಗ್ ಬಾಂಬ್ ಸ್ಫೋಟಿಸಿದ' ಹೆಚ್ ಡಿಕೆ!

ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಸಾದ್ ಅಬ್ಬಯ್ಯ, ಎಬಿ ಪಾಟೀಲ್, ಎಲ್ ಹನುಮಂತಯ್ಯ ಸೇರಿದಂತೆ ಇತರರಿಗೆ ಉಸ್ತುವಾರಿ ನೀಡಲಾಗಿದೆ.

ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ: ಐವರಿಗೆ ಮಾತ್ರ ಸಚಿವಸ್ಥಾನ!

ಗ್ರಾಮ ಪಂಚಾಯತ್ ಚುನಾವಣೆ ನಡೆಯುವ ಪ್ರತಿಯೊಂದು ಜಿಲ್ಲೆಗಳಿಗೂ ಉಸ್ತುವಾರಿ ನೇಮಕ ಮಾಡಲಾಗಿದ್ದು ಈ ಮೂಲಕ ಚುನಾವಣೆಗೆ ಕಾಂಗ್ರೆಸ್ ತಯಾರಾಗಿದೆ. ಡಿಸೆಂಬರ್ 22 ರಿಂದ ಗ್ರಾಮಪಂಚಾಯತ್ ಚುನಾವಣೆ ಆರಂಭಗೊಳ್ಳಲಿದೆ.

ರಾಜ್ಯದ ಜನತೆಗೆ ಮತ್ತೊಂದು 'ಭರ್ಜರಿ ಗುಡ್ ನ್ಯೂಸ್'..!

Trending News