Breaking News: ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ

ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ

Written by - Zee Kannada News Desk | Last Updated : Aug 4, 2021, 10:20 AM IST
  • ನೂತನ ಸಚಿವರ ಪಟ್ಟಿಯನ್ನು ರಾಜಭವನಕ್ಕೆ 11 ಗಂಟೆಯ ಹೊತ್ತಿಗೆ ನೀಡಲಾಗುತ್ತದೆ
  • ಇನ್ನೂ 2 ವಿಷಯಗಳ ಬಗ್ಗೆ ಚರ್ಚೆ ಬಾಕಿ ಇದ್ದು, 11 ಗಂಟೆ ವೇಳೆಗೆ ಶುಭಸುದ್ದಿ ಸಿಗಲಿದೆ ಎಂದಿರುವ ಸಿಎಂ
  • ಕೆ.ಎಸ್.ಈಶ್ವರಪ್ಪ, ಎಸ್.ಟಿ.ಸೋಮಶೇಖರ್, ಮುರುಗೇಶ್ ನಿರಾಣಿ ಸೇರಿ ಹಲವರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕರೆ
Breaking News: ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ title=
ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆ(Karnataka Cabinet Expansion)ಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಈ ಮೂಲಕ ಸಿಎಂ ಬೊಮ್ನಾಯಿ(Basavaraj Bommai) ಸಂಪುಟಕ್ಕೆ ನೂತನ ಸಚಿವರು ಸೇರ್ಪಡೆಗೊಳ್ಳಲಿದ್ದಾರೆ.

ಈ ಕುರಿತು ಸ್ವತಃ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಬೊಮ್ಮಾಯಿ(Basavaraj Bommai), ‘ರಾಜಭವನದಿಂದ ಬೆಳಗ್ಗೆ 11.30 ರೊಳಗೆ ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಮಾಧ್ಯಮಗಳಲ್ಲಿ ಸಂಭಾವ್ಯ ಸಚಿವರ ಹೆಸರುಗಳು ಕೇಳಿಬರುತ್ತಿವೆ. ಹೀಗಾಗಿ ನಾನು ಈಗ ಯಾವುದೇ ಹೆಸರುಗಳನ್ನು ಹೇಳುವುದಿಲ್ಲ. ರಾಜಭವನದಿಂದಲೇ ಕ್ಯಾಬಿನೆಟ್ ಲಿಸ್ಟ್(Cabinet List) ಬಿಡುಗಡೆಯಾಗುತ್ತದೆ’ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಸಂಪುಟ ಕುಸ್ತಿ: ಮಂತ್ರಿ ಸ್ಥಾನಕ್ಕಾಗಿ ಕೇಸರಿ ಕಲಿಗಳ ಲಾಬಿ, ಸಿಎಂ ನಿವಾಸಕ್ಕೆ ದೌಡು

ನೂತನ ಸಚಿವರ ಪಟ್ಟಿಯನ್ನು ರಾಜಭವನಕ್ಕೆ 11 ಗಂಟೆಯ ಹೊತ್ತಿಗೆ ನೀಡಲಾಗುತ್ತದೆ. ಬಳಿಕ ಅಧಿಕೃತ ಪಟ್ಟಿ ಹೊರಬೀಳಲಿದೆ. ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭವು ರಾಜಭವನದ ಗಾಜಿನ ಮನೆಯಲ್ಲಿ ನೆರವೇರಲಿದೆ.

ಇನ್ನೂ 2 ವಿಷಯಗಳು ಬಾಕಿ ಇವೆ

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai), ‘ಇನ್ನೂ ಎರಡು ವಿಚಾರಗಳು ಬಗ್ಗೆ ಚರ್ಚೆ ಬಾಕಿ ಇದೆ. 11 ಗಂಟೆ ವೇಳೆಗೆ ಶುಭ ಸುದ್ದಿಯೊಂದು ಹೊರಬರುವ ವಿಶ್ವಾಸವಿದೆ. ಉಪಮುಖ್ಯಮಂತ್ರಿ ಸ್ಥಾನಗಳು ಸೇರಿದಂತೆ ಸಚಿವ ಸ್ಥಾನಗಳ ಬಗ್ಗೆ ಎಲ್ಲ ರೀತಿಯ ಮಾಹಿತಿ ಸಿಗಲಿದೆ’ ಅಂತಾ ತಿಳಿಸಿದ್ದಾರೆ.

ಬೊಮ್ಮಾಯಿ ಸಂಪುಟ ಸೇರುವ ಸಂಭಾವ್ಯರ ಪಟ್ಟಿ

ಕೆ.ಎಸ್.ಈಶ್ವರಪ್ಪ, ಎಸ್.ಟಿ.ಸೋಮಶೇಖರ್, ಮುರುಗೇಶ್ ನಿರಾಣಿ, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಬಿ.ಶ್ರೀರಾಮುಲು, ಶಂಕರ್ ಪಾಟೀಲ್ ಮುನೇನಕೊಪ್ಪ, ಎಂಟಿಬಿ ನಾಗರಾಜ್, ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಉಮೇಶ್ ಕತ್ತಿ, ಪುರ್ಣಿಮಾ ಶ್ರೀನಿವಾಸ್, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಆರಗ ಜ್ಞಾನೇಂದ್ರ, ಆನಂದ್ ಸಿಂಗ್, ವಿ.ಸೋಮಣ್ಣ ಸೇರಿ ಇನ್ನು ಅನೇಕರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕರೆ ಬಂದಿದೆ ಎಂದು ತಿಳಿದುಬಂದಿದೆ.  

ಇದನ್ನೂ ಓದಿ: HC Notice To BSY: ಸಿಎಂ ಸ್ಥಾನ ಕಳೆದುಕೊಳ್ಳುತ್ತಲೇ ಯಡಿಯೂರಪ್ಪ ಹಾಗೂ ಪುತ್ರನ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ನೋಟಿಸ್ ಜಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News