Karnataka Cabinet Expansion: ಡಿಸಿಎಂ ಹುದ್ದೆ ಕ್ಯಾನ್ಸಲ್, ಬಿ.ವೈ.ವಿಜಯೇಂದ್ರಗೆ ಮಂತ್ರಿಸ್ಥಾನವಿಲ್ಲ!

ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಬಿ.ವೈ.ವಿಜಯೇಂದ್ರಗೆ ಸ್ಥಾನವಿಲ್ಲ

Written by - Zee Kannada News Desk | Last Updated : Aug 4, 2021, 02:55 PM IST
  • ಮಧ್ಯಾಹ್ನ 2.15ಕ್ಕೆ ಒಟ್ಟು 29 ಸಚಿವರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ
  • ಈ ಬಾರಿಯ ಸಚಿವ ಸಂಪುಟದಲ್ಲಿ ಡಿಸಿಎಂ ಸ್ಥಾನವನ್ನು ಕೈಬಿಡಲಾಗಿದೆ
  • ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಬಿ.ವೈ.ವಿಜಯೇಂದ್ರಗೆ ಸ್ಥಾನವಿಲ್ಲ
Karnataka Cabinet Expansion: ಡಿಸಿಎಂ ಹುದ್ದೆ ಕ್ಯಾನ್ಸಲ್, ಬಿ.ವೈ.ವಿಜಯೇಂದ್ರಗೆ ಮಂತ್ರಿಸ್ಥಾನವಿಲ್ಲ!  title=
ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಬಿ.ವೈ.ವಿಜಯೇಂದ್ರಗೆ ಸ್ಥಾನವಿಲ್ಲ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ(Karnataka Cabinet Expansion)ಕಸರತ್ತು ಕೊನೆಗೂ ಮುಕ್ತಾಯವಾಗಿದೆ. ಇಂದು ಮಧ್ಯಾಹ್ನ 2.15ಕ್ಕೆ ಒಟ್ಟು 29 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಬೊಮ್ಮಾಯಿಯವರೇ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ನೂತನ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

‘ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರಗೆ ಸಂಪುಟದಲ್ಲಿ ಮಂತ್ರಿಸ್ಥಾನ ನೀಡುತ್ತಿಲ್ಲ’ ಎಂದು ಬೊಮ್ಮಾಯಿ(Basavaraj Bommai)ಯವರೇ ಸ್ಪಷ್ಟಪಡಿಸಿದ್ದಾರೆ. ‘ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ. ನೂತನ ಸಚಿವರಾಗಿ ಆಯ್ಕೆಯಾದವರಿಗೆ ಈಗಾಗಲೇ ಪ್ರಮಾಣವಚನ ಸ್ವೀಕಾರ ಸಮಾರಂಭ(Oath Taking Ceremony)ಕ್ಕೆ ಆಗಮಿಸುವಂತೆ ಕರೆ ಮಾಡಿ ತಿಳಿಸಲಾಗಿದೆ’ ಅಂತಾ ಸಿಎಂ ತಿಳಿಸಿದ್ದಾರೆ.

ಬಿ.ವೈ.ವಿಜಯೇಂದ್ರಗೆ ಸ್ಥಾನವಿಲ್ಲ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ(BY Vijayendra)ಗೆ ಸಚಿವ ಸ್ಥಾನ ಕೈತಪ್ಪಿದೆ. ಬೊಮ್ಮಾಯಿ ಕ್ಯಾಬಿನೆಟ್ ಸೇರಲು ವಿಜಯೇಂದ್ರ ಭಾರೀ ಸರ್ಕಸ್ ಮಾಡಿದ್ದರು. ಬಿ.ಎಸ್.ಯಡಿಯೂರಪ್ಪರೊಂದಿಗೆ ಅವರು ಇಂದು ಬೆಳಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ಆದರೆ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಸಿಎಂ ಬೊಮ್ಮಾಯಿ ನೇರವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದರು. ಹೀಗಾಗಿ ವಿಜಯೇಂದ್ರರಿಗೆ ಮಂತ್ರಿಗಿರಿ ತಪ್ಪುತ್ತದೆ ಅಂತಾ ಹೇಳಲಾಗಿತ್ತು. ವಿಜಯೇಂದ್ರರಿಗೆ ಸಂಪುಟದಲ್ಲಿ ಸ್ಥಾನ ನೀಡುತ್ತಿಲ್ಲವೆಂದು ಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ.

ಸಂಪುಟದಲ್ಲಿ ಮಹಿಳೆಗೆ ಅವಕಾಶ

ಇಂದು ಒಟ್ಟು 29 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೊಮ್ಮಾಯಿಯವರ ಕ್ಯಾಬಿನೆಟ್(Basavaraj Bommai Cabinet)ನಲ್ಲಿ  8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 3 SC, 1 ST ಸೇರಿದಂತೆ ಒಬ್ಬ ಮಹಿಳಾ ಶಾಸಕಿಗೆ ಅವಕಾಶ ನೀಡಲಾಗಿದೆ. ‘ಮುಂದಿನ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಂಪುಟ ರಚನೆಯಾಗಿದೆ. ಈ ಬಾರಿ ಸಂಪುಟದಲ್ಲಿ ಅನುಭವಸ್ಥರು ಮತ್ತು ಹೊಸಬರು ಇದ್ದಾರೆ’ ಅಂತಾ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಡಿಸಿಎಂ ಹುದ್ದೆ ಇರುವುದಿಲ್ಲ

ಈ ಬಾರಿ ಉಪಮುಖ್ಯಮಂತ್ರಿ ಹುದ್ದೆಗಾಗಿ ಘಟಾನುಘಟಿಗಳ ನಡುವೆ ಭಾರೀ ಪೈಪೋಟಿ ನಡೆದಿತ್ತು. ಯಾರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಬಿಜೆಪಿ(BJP) ಹೈಕಮಾಮಡ್ ತಲೆಕೆಡಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಡಿಸಿಎಂ ಹುದ್ದೆಯೇ ಬೇಡವೆಂದು ವರಿಷ್ಠರು ತಿಳಿಸಿದ್ದಾರೆ ಅಂತಾ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಹಿರಿಯರ ನಾಯಕರಿಗೆ ಕೊಕ್!

ಬಿ.ಎಸ್‌.ಯಡಿಯೂರಪ್ಪ(BS Yediyurappa) ಸಂಪುಟದಲ್ಲಿದ್ದ 7 ಸಚಿವರಿಗೆ ಈ ಬಾರಿ ಕೊಕ್ ನೀಡಲಾಗಿದೆ. ಜಗದೀಶ್ ಶೆಟ್ಟರ್, ಎಸ್.ಸುರೇಶ್ ಕುಮಾರ್, ಸಿ.ಪಿ.ಯೋಗೇಶ್ವರ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಶ್ರೀಮಂತ್ ಪಾಟೀಲ್ ಮತ್ತು ಲಕ್ಷ್ಮಣ್ ಸವದಿಯವರು ಸಂಪುಟದಿಂದ ಹೊರಗೆ ಉಳಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News