ಬೆಂಗಳೂರು: ರಾಜ್ಯದಲ್ಲಿನ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ನಾಳೆಯಿಂದಲೇ (ನವೆಂಬರ್ 11) ನೀತಿ ಸಂಹಿತೆಯನ್ನು ಜಾರಿ ಮಾಡಿದೆ.
ಈಗ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ' ಡಿಸೆಂಬರ್ 5 ರಂದು ಮತದಾನ ನಡೆಯಲಿದೆ ಮತ್ತು ಡಿಸೆಂಬರ್ 9 ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ಮತ ಎಣಿಕೆ ನಡೆಯಲಿದೆ.ಚುನಾವಣಾ ನೀತಿ ಸಂಹಿತೆ ನವೆಂಬರ್ 11 ರಿಂದ ಜಾರಿಗೆ ಬರುತ್ತದೆ' ಎಂದು ತಿಳಿಸಿದ್ದಾರೆ.
Sanjeev Kumar, Chief Electoral Officer of Karnataka: Voting to take place on 5 December & counting of votes on 9 December for by-elections to 15 Karnataka Assembly Constituencies. Model Code of Conduct comes into effect from 11 November. pic.twitter.com/xkJY0Os5ws
— ANI (@ANI) November 10, 2019
ಅನರ್ಹ ಶಾಸಕರು ತಮ್ಮ ಪ್ರಕರಣ ಇತ್ಯರ್ಥವಾಗುವರೆಗೂ ಡಿಸೆಂಬರ್ 5 ರಂದು ನಡೆಯಲಿರುವ ರಾಜ್ಯ ಚುನಾವಣೆ ಮುಂದೂಡಬೇಕೆಂದು ಮನವಿ ಮಾಡಿದ್ದರು. ಈಗ ಅವರ ಪ್ರಕರಣ ಅಂತ್ಯ ಕಾಣುವ ಮೊದಲೇ ಚುನಾವಣಾ ಆಯೋಗವು ಮತದಾನದ ದಿನಾಂಕವನ್ನು ಘೋಷಿಸಿರುವುದು ಅನರ್ಹ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದೇ 18 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಇದುವರೆಗೆ ಸುಮಾರು 29 ನಾಮಪತ್ರವನ್ನು ಸಲ್ಲಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.