ಕೇಂದ್ರದ ಅಕ್ಕಿ ಪುಕ್ಕಟೆಯಾಗಿ ಕೊಟ್ಟು ಜಾಹೀರಾತು ನೀಡಿದ್ದ ಸಿದ್ದರಾಮಯ್ಯ: ಬಿಜೆಪಿ

ಬಣ್ಣಬಣ್ಣದ ಜಾಹೀರಾತು ನೀಡಿ ಸುಳ್ಳು ಹೇಳುತ್ತಾರೆಂದು ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು.

Written by - Zee Kannada News Desk | Last Updated : Jan 30, 2022, 06:45 AM IST
  • ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ಕೇಂದ್ರ ಸರ್ಕಾರದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟಿದ್ದರು
  • ಅನ್ನಭಾಗ್ಯದ ಹರಿಕಾರನೆಂದು ಬಸ್ಸು, ಗೋಡೆಗಳ ಮೇಲೆ ಸಿದ್ದರಾಮಯ್ಯ ಜಾಹೀರಾತು ಬರೆಸಿಕೊಂಡಿದ್ದರು
  • ಬಣ್ಣಬಣ್ಣದ ಜಾಹೀರಾತು ನೀಡಿ ಬಿಜೆಪಿ ಸರ್ಕಾರದವರು ಸುಳ್ಳು ಹೇಳುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು
ಕೇಂದ್ರದ ಅಕ್ಕಿ ಪುಕ್ಕಟೆಯಾಗಿ ಕೊಟ್ಟು ಜಾಹೀರಾತು ನೀಡಿದ್ದ ಸಿದ್ದರಾಮಯ್ಯ: ಬಿಜೆಪಿ  title=
ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ನೀಡಿದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟು ಅನ್ನಭಾಗ್ಯದ ಹರಿಕಾರನೆಂದು ಬಸ್ಸು, ಗೋಡೆಗಳ ಮೇಲೆ ಸಿದ್ದರಾಮಯ್ಯ ಜಾಹೀರಾತು ಬರೆಸಿಕೊಂಡಿದ್ದರು ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಣ್ಣಬಣ್ಣದ ಜಾಹೀರಾತು(Advertisement Allegation) ನೀಡಿ ಸುಳ್ಳು ಹೇಳುತ್ತಾರೆಂದು ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ತಿರುಗೇಟು ನೀಡಿದ್ದು, ‘ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಯಾಗಿದ್ದಾಗ ಹಸಿವು ಮುಕ್ತ ಕರ್ನಾಟಕ ಎಂದು ಘೋಷಣೆ ಮಾಡಿದ್ದರು. ಮೋದಿ ಸರ್ಕಾರ ನೀಡಿದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟು ಅನ್ನಭಾಗ್ಯದ ಹರಿಕಾರ ಎಂದು ಬಸ್ಸು, ಗೋಡೆಗಳ ಮೇಲೆ ಜಾಹೀರಾತು ಬರೆಸಿಕೊಂಡರು. ಸಿದ್ದರಾಮಯ್ಯನವರೇ ಇದಕ್ಕೆಲ್ಲ ಮಾಡಿದ ಖರ್ಚೆಷ್ಟು? ಜಾಹಿರಾತು ಸರ್ಕಾರದ ಒಂದು ಉಪಕ್ರಮ ಎಂಬುದು ತಿಳಿದಿಲ್ಲವೇ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: R Ashok : 'ರಾಜ್ಯದಲ್ಲಿ ಜನವರಿ 31ರಿಂದ ನೈಟ್ ಕರ್ಫ್ಯು ತೆರವು'

‘ಸಿದ್ದರಾಮಯ್ಯ(Siddaramaiah)ನವರೇ ನೀವು ಮುಖ್ಯಮಂತ್ರಿಯಾಗಿದ್ದಾಗ ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕ ಎಂದು ಜಾಹೀರಾತು ನೀಡಿದಿರಿ. ಆ ಬಣ್ಣ ಬಣ್ಣದ ಜಾಹೀರಾತಿಗೆ ಎಷ್ಟು ಕೋಟಿ ಖರ್ಚು ಮಾಡಿದ್ದಿರಿ? ಕೊನೆಗೂ ನಿಮ್ಮ ಕಾಲದಲ್ಲಿ ಬಯಲು ಬಹಿರ್ದೆಸೆ ನಿಲ್ಲಿಸಲು ಸಾಧ್ಯವಾಯಿತೇ?

ಸಿದ್ದರಾಮಯ್ಯ & ಡಿಕೆಶಿ ನಡುವೆ ನಾಯಕತ್ವಕ್ಕೆ ಗುದ್ದಾಟ!

‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್(DK Shivakumar) ಅವರ ಮಧ್ಯೆ ನಾಯಕತ್ವ ವಿಚಾರಕ್ಕೆ ಮತ್ತೆ ಗುದ್ದಾಟ ಆರಂಭವಾಗಿದೆ‌. ಚುನಾವಣೆಗೆ ಇನ್ನು 1 ವರ್ಷ ಬಾಕಿ ಇರುವಾಗಲೇ ಬೆಂಬಲಿಗರಿಗೆ ಟಿಕೆಟ್ ಕೊಡಿಸುವುದಕ್ಕೆ ಅಕ್ಷರಶಃ ಬಡಿದಾಟ ಶುರುವಿಟ್ಟುಕೊಂಡಿದ್ದಾರೆ. ಸ್ವಾರ್ಥದ ನಾಯಕತ್ವದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ, ಭ್ರಷ್ಟಾಚಾರ ಹಿಂದಿನಂತೆಯೇ ಮುಂದುವರೆದಿದೆ-ಸಿದ್ಧರಾಮಯ್ಯ

‘ಪುಲಕೇಶಿ ನಗರದ ಅಖಂಡ ಶ್ರೀನಿವಾಸ್ ಮೂರ್ತಿ(Akhanda Srinivas Murthy) ಅವರ ನಿವಾಸಕ್ಕೆ ಬೆಂಕಿ ಹಚ್ಚಿದಾಗ ಮೌನಕ್ಕೆ ಶರಣಾಗಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ಈಗ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಮಾತ್ರ ಎಲ್ಲಿಲ್ಲದ ಕಾಳಜಿ ಪ್ರದರ್ಶನ ಮಾಡುತ್ತಿದ್ದಾರೆ. ಒಡೆದ ಮನೆ ಕಾಂಗ್ರೆಸ್ ಪಕ್ಷದಲ್ಲಿ ಸ್ವಾರ್ಥದ ಹೋರಾಟ ಆರಂಭಗೊಂಡಿದೆ’ ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News