ಇದು ಮಜವಾದಿ ಸಿದ್ದರಾಮಯ್ಯ ನಡೆಸುತ್ತಿರುವ ಶೋಕಿಲಾಲ ಸರ್ಕಾರ!: ಬಿಜೆಪಿ ಟೀಕೆ

ಸಿಎಂ ಸಿದ್ದರಾಮಯ್ಯನವರ ಯೋಜನೆಗಳೆಲ್ಲಾ ಜಾರಿಯಾಗುವ ಬದಲು ಕೇವಲ ಘೋಷಣೆ ಮಾಡಲಷ್ಟೇ ಸೀಮಿತ. ಸಹಕಾರಿ ಸಾಲಗಳ ಬಡ್ಡಿ ಮನ್ನಾ ಎಂದು ಹೇಳಿಕೆ ನೀಡಿ ಈಗ ರೈತರಿಗೆ ಬ್ಯಾಂಕ್‌ ಮೂಲಕ ನೋಟಿಸ್‌ ಕೊಡಲಾಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Dec 24, 2023, 01:22 PM IST
  • ಪ್ರೈವೇಟ್‌ ಜೆಟ್‌ನಲ್ಲಿ ಮಜವಾದಿ ಸಿದ್ದರಾಮಯ್ಯರ ಜಾಲಿ ಟ್ರಿಪ್
  • ಸಚಿವರಿಗೆ ಹೊಸ ಕಾರುಗಳು, ಮನೆ ಕಚೇರಿಗೆ ಸುಣ್ಣಬಣ್ಣ
  • ತೆಲಂಗಾಣ ಚುನಾವಣೆಯಲ್ಲಿ #ATMSarkaraದ ಮೋಜು
ಇದು ಮಜವಾದಿ ಸಿದ್ದರಾಮಯ್ಯ ನಡೆಸುತ್ತಿರುವ ಶೋಕಿಲಾಲ ಸರ್ಕಾರ!: ಬಿಜೆಪಿ ಟೀಕೆ title=
ಮಜವಾದಿ ಸಿದ್ದರಾಮಯ್ಯರ ಜಾಲಿ ಟ್ರಿಪ್!

ಬೆಂಗಳೂರು: ಬರ ಬಂದು ನರಳಿದ ರೈತರಿಗೆ ಪರಿಹಾರ ಕೊಡುವುದಕ್ಕೆ ಹಣವಿಲ್ಲ, ಅಭಿವೃದ್ಧಿಗೆ ದುಡ್ಡಿಲ್ಲ ಎನ್ನುತ್ತಿರುವ ಶೋಕಿಲಾಲ ಕಾಂಗ್ರೆಸ್ ಸರ್ಕಾರದ ಮೋಜು - ಮಸ್ತಿ, ಆಡಂಬರಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಪ್ರೈವೇಟ್‌ ಜೆಟ್‌ನಲ್ಲಿ ಮಜವಾದಿಯ ಜಾಲಿ ಟ್ರಿಪ್, ಸಚಿವರಿಗೆ ಹೊಸ ಕಾರುಗಳು, ಮನೆ ಕಚೇರಿಗೆ ಸುಣ್ಣಬಣ್ಣ, ತೆಲಂಗಾಣ ಚುನಾವಣೆಯಲ್ಲಿ #ATMSarkaraದ ಮೋಜು, ಜನರ ತೆರಿಗೆ ಹಣದಲ್ಲಿ ಸಚಿವರ ವಿದೇಶಿ ಪ್ರವಾಸ, ಪಂಚ ರಾಜ್ಯ ಚುನಾವಣೆಗೆ ಕರ್ನಾಟಕದಿಂದ ಫಂಡಿಂಗ್, ಸರ್ಕಾರಿ ಖರ್ಚಿನಲ್ಲಿ ಬೆಂಗಳೂರಿನಲ್ಲಿ ಇಂಡಿ ಕೂಟದ ಸಭೆ ಮತ್ತು ಸರ್ಕಾರದ ಹುಳುಕು ಮುಚ್ಚಿಕೊಳ್ಳಲು ಕೋಟಿ ಕೋಟಿ ವ್ಯಯ. ಇದು ಮಜವಾದಿ ಸಿದ್ದರಾಮಯ್ಯನವರು ನಡೆಸುತ್ತಿರುವ ಶೋಕಿಲಾಲ ಸರ್ಕಾರ’ವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಯಡಿಯೂರಪ್ಪ ಆಪ್ತ ಬಳಗಕ್ಕೆ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ

‘'ಸಿಎಂ ಸಿದ್ದರಾಮಯ್ಯನವರ ಯೋಜನೆಗಳೆಲ್ಲಾ ಜಾರಿಯಾಗುವ ಬದಲು ಕೇವಲ ಘೋಷಣೆ ಮಾಡಲಷ್ಟೇ ಸೀಮಿತ. ಸಹಕಾರಿ ಸಾಲಗಳ ಬಡ್ಡಿ ಮನ್ನಾ ಎಂದು ಹೇಳಿಕೆ ನೀಡಿ ಈಗ ರೈತರಿಗೆ ಬ್ಯಾಂಕ್‌ ಮೂಲಕ ನೋಟಿಸ್‌ ಕೊಡಲಾಗುತ್ತಿದೆ. 7 ಗಂಟೆ ನಿರಂತರ ವಿದ್ಯುತ್‌ ಎಂಬ ಹೇಳಿಕೆ ಸಿದ್ದರಾಮಯ್ಯರವರ ಟ್ವೀಟ್‌ಗಳಿಗೆ ಮಾತ್ರ ಸೀಮಿತ ಎಂದು ಕಷ್ಟ ಅನುಭವಿಸುತ್ತಿರುವ ರೈತರ ಗಮನಕ್ಕೆ ಈಗಾಗಲೇ ಬಂದಿದೆ. ಕಾಂಗ್ರೆಸ್ ಸರ್ಕಾರ ಬಂದು 7 ತಿಂಗಳಾದವು. ಈಗಲಾದರೂ ತುಸು ಮಾತು ಕಡಿಮೆ ಮಾಡಿ ಕೆಲಸ ಮಾಡಲು ಆರಂಭಿಸಿ’ ಎಂದು ಬಿಜೆಪಿ ಕುಟುಕಿದೆ.

‘ಮತಾಂಧ, ಕ್ರೂರಿ, ದ್ರೋಹಿ, ಕನ್ನಡ ವಿರೋಧಿ, ಟಿಪ್ಪು ನಿಜ ಕನಸುಗಳನ್ನು ಹೊತ್ತು ಅಧಿಕಾರ ಹಿಡಿದಿರುವ ಸಿದ್ದರಾಮಯ್ಯ "ಸಾ/ಹೇ/ಬ್" ಅವರು ಮತಾಂಧನ ಕನಸುಗಳನ್ನು ಈಡೇರಿಸಲು ಪಣತೊಟ್ಟಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News