ಕಾಂಗ್ರೆಸ್ ಗ್ಯಾರಂಟಿ ಯೋಜನೆ, ಭ್ರಷ್ಟಾಚಾರದಿಂದ ಕರ್ನಾಟಕ ದಿವಾಳಿಯಾಗಲಿದೆ: ಬಿಜೆಪಿ

#ATMSarkaraದ ತುಘಲಕ್ ಆಡಳಿತವು ರಾಜ್ಯವನ್ನು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದು, ಬೊಕ್ಕಸ ಬರಿದು ಮಾಡಿ ಕರ್ನಾಟಕವನ್ನು ದಿವಾಳಿ ಮಾಡಲಿರುವುದು ದುರಾದೃಷ್ಟವಶಾತ್‌ ನಿಶ್ಚಿತವೆಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Sep 30, 2023, 05:20 PM IST
  • ರಾಜ್ಯವನ್ನು ಕಂಡು ಕೇಳರಿಯದಂತಹ ಆರ್ಥಿಕ ಕುಸಿತಕ್ಕೆ ತಳ್ಳಿರುವುದಷ್ಟೆ ಸಿದ್ದರಾಮಯ್ಯ ಸರ್ಕಾರದ ಸಾಧನೆ
  • ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಭ್ರಷ್ಟಾಚಾರದಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಲಿದೆ
  • ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಯೊಂದನ್ನು ಬಿಟ್ಟು ಮಿಕ್ಕೆಲ್ಲ ಅನಾಚಾರ ಮಾಡುತ್ತಿದೆ
ಕಾಂಗ್ರೆಸ್ ಗ್ಯಾರಂಟಿ ಯೋಜನೆ, ಭ್ರಷ್ಟಾಚಾರದಿಂದ ಕರ್ನಾಟಕ ದಿವಾಳಿಯಾಗಲಿದೆ: ಬಿಜೆಪಿ  title=
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ರಾಜ್ಯವನ್ನು ಹಿಂದೆಂದೂ ಕಂಡು ಕೇಳರಿಯದಂತಹ ಆರ್ಥಿಕ ಮಹಾಕುಸಿತಕ್ಕೆ ತಳ್ಳಿರುವುದಷ್ಟೆ ಸಿಎಂ ಸಿದ್ದರಾಮಯ್ಯನವರ ಸರ್ಕಾರದ 4 ತಿಂಗಳ ಸಾಧನೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಭ್ರಷ್ಟಾಚಾರದಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಲಿದೆ’ ಎಂದು ಟೀಕಿಸಿದೆ.

‘ಸೋರಿಕೆ ತಡೆಗಟ್ಟಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಮರ್ಥ ಆಡಳಿತದ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕವನ್ನು ದೇಶದಲ್ಲೇ ಸದೃಢ ಆರ್ಥಿಕತೆಯ ರಾಜ್ಯವನ್ನಾಗಿ ಮಾಡಿತ್ತು. ಗ್ಯಾರಂಟಿಗಳ ಅವಾಸ್ತವಿಕ ಅನುಷ್ಠಾನವಲ್ಲದೆ, ಪರಾಕಾಷ್ಠೆಗೆ ತಲುಪಿದ ವರ್ಗಾವಣೆ ದಂಧೆ ಮತ್ತು ಕಲೆಕ್ಷನ್‌ ವ್ಯವಹಾರದಲ್ಲಿ ಮುಳುಗಿದ ಸಚಿವರಿಂದ ಆಡಳಿತ ಸಂಪೂರ್ಣ ನಿಸ್ತೇಜವಾಗಿದೆ ಎಂಬುದಕ್ಕೆ ರಾಜಸ್ವ ಸಂಗ್ರಹದಲ್ಲಿ ಆಗಿರುವ 8,000 ಕೋಟಿ ರೂ. ಕೊರತೆಯೇ ಕೈಗನ್ನಡಿ. #ATMSarkaraದ ತುಘಲಕ್ ಆಡಳಿತವು ರಾಜ್ಯವನ್ನು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದು, ಬೊಕ್ಕಸ ಬರಿದು ಮಾಡಿ ಕರ್ನಾಟಕವನ್ನು ದಿವಾಳಿ ಮಾಡಲಿರುವುದು ದುರಾದೃಷ್ಟವಶಾತ್‌ ನಿಶ್ಚಿತ’ವೆಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಅಡ್ಜಸ್ಟ್‌ಮೆಂಟ್‌ ರಾಜಕಾರಣಿ, ಛದ್ಮವೇಷಧಾರಿ, ಡೋಂಗಿ ಸಮಾಜವಾದಿ: ಸಿದ್ದು ವಿರುದ್ಧ ಎಚ್‍ಡಿಕೆ ವಾಗ್ದಾಳಿ

‘ರಾಜ್ಯದಲ್ಲಿ ಅಭಿವೃದ್ಧಿಯೊಂದನ್ನು ಬಿಟ್ಟು ಮಿಕ್ಕೆಲ್ಲ ಅನಾಚಾರಗಳನ್ನು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿಗಳ ಅಸಮರ್ಪಕ ಅನುಷ್ಠಾನದದಿಂದ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವುದಕ್ಕೆ ಕಾಂಗ್ರೆಸ್ ಶಾಸಕರೇ ಮಗದೊಮ್ಮೆ ಅಸಮಾಧಾನಗೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ #ATMSarakara ನಯಾ ಪೈಸೆಯನ್ನೂ ಕೊಡದೆ ಹಿಂದುಳಿದ ತಾಲೂಕುಗಳನ್ನು ವಂಚಿಸುತ್ತಿದೆ. 3ನೇ ವ್ಯಕ್ತಿಯ ಕೈವಾಡ, ವರ್ಗಾವಣೆ ದಂಧೆ, ಸಚಿವರ ದರ್ಪ, ಅನುದಾನ ಕೊರತೆ ವಿಚಾರವಾಗಿ ಕಾಂಗ್ರೆಸ್ ಶಾಸಕರೇ ಪ್ರತಿದಿನ ಅಸಮಾಧಾನವನ್ನು ಹೊರ ಹಾಕಿದರೂ ಸಿದ್ದರಾಮಯ್ಯ ಅವರಂತೂ ಕ್ಯಾರೆ ಎನ್ನದೆ ಭಂಡತನ ಪ್ರದರ್ಶಿಸುತ್ತಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅತಿಥಿ ಉಪನ್ಯಾಸಕರಿಗೆ ವೇತನವನ್ನೇ ನೀಡಿಲ್ಲ. ಕಳೆದು 5 ತಿಂಗಳಿನಿಂದ ವೇತನ ಸಿಗದೆ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದರೂ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಸಂಬಳ ಬಿಡುಗಡೆ ಮಾಡದೆ ಸತಾಯಿಸುತ್ತಿದೆ. ಇನ್ನು ಅತಿಥಿ ಉಪನ್ಯಾಸಕರದ್ದಷ್ಟೇ ಈ ಪರಿಸ್ಥಿತಿ ‌ಅಲ್ಲ. ಅಂಗನವಾಡಿ, ಸರ್ಕಾರಿ ಸಾರಿಗೆ ನೌಕರರು, ಸರ್ಕಾರಿ ಗುತ್ತಿಗೆ ನೌಕರರು ಸೇರಿದಂತೆ ಹಲವರು ಸಂಬಳವಿಲ್ಲದೆ ಜೀವನ ನಡೆಸುವುದಕ್ಕೂ ಸಾಧ್ಯವಿಲ್ಲದೆ ಬೀದಿಗೆ ಬಂದಿದ್ದಾರೆ. ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡದೆ ಅದರ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ಗುಡಿಸಿ ಗುಂಡಾಂತರ ಮಾಡಿ, ಜನರ ಬದುಕನ್ನು ದುಸ್ತರವಾಗಿಸಿದೆ ಈ ಅಸಮರ್ಥ #ATMSarkara’ವೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬರ ಘೋಷಣೆ ಮಾಡಿದರೆ ಸಾಲದು ಪರಿಹಾರ ಕಾರ್ಯ ಆರಂಭ ಮಾಡಿ

‘ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದ್ದರ ಹಿಂದೆ ಇರುವುದು ಕೇವಲ ಜನರ ಕಣ್ಣಿಗೆ ಮಣ್ಣೆರಚುವ ಉದ್ದೇಶ. 10 ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳಿ, ಕೊನೆಗೆ 5ಕ್ಕೆ ಇಳಿಸಿ, ಅದನ್ನೂ ಕೊಡದೆ ಹಣ ಕೊಡುವುದಾಗಿ ಹೇಳಿದ್ದು ಮತ್ತು ಈಗ ಅದಕ್ಕೂ ಕೈ ಎತ್ತಿರುವುದು ಸಿದ್ದರಾಮಯ್ಯರ ಸರ್ಕಾರ ಜನತೆಗೆ ಮಾಡುತ್ತಿರುವ ಮೋಸಕ್ಕೆ ಪ್ರತ್ಯಕ್ಷ ಸಾಕ್ಷಿ. ತನ್ನ ಅವಾಸ್ತವಿಕ ಗ್ಯಾರಂಟಿಗಳಿಂದ ಅತ್ತ ಖಜಾನೆಯನ್ನೂ ಬರಿದು ಮಾಡಿ, ಇತ್ತ ಯೋಜನೆಗಳನ್ನೂ ಸರಿಯಾಗಿ ಅನುಷ್ಠಾನ ಮಾಡದೆ ಮೋಸ ಮಾಡುತ್ತಿರುವ ಈ #ATMSarkaraವು ಕರ್ನಾಟಕ ರಾಜ್ಯ ಕಂಡ ಅತಿದೊಡ್ಡ ವಂಚಕ ಸರ್ಕಾರ’ವೆಂದು ಬಿಜೆಪಿ ಟೀಕಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News