ಕಾಂಗ್ರೆಸ್ ಸರ್ಕಾರದ 6 ತಿಂಗಳ ಆಡಳಿತದಲ್ಲಿ ಭ್ರಷ್ಟಾಚಾರ ಹಾಗೂ ಅರಾಜಕತೆ ಸದ್ದು ಮಾಡುತ್ತಿದೆ: ಬಿಜೆಪಿ

ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸುವ ಬದಲು ಕಾಂಗ್ರೆಸ್‌ ಸರ್ಕಾರ ಪ್ರತಿಭಟನಾ ನಿರತರನ್ನು ಹತ್ತಿಕ್ಕುತ್ತಿದೆ. ಬೆಳಗಾವಿಯ ಸುವರ್ಣ ಸೌಧದ ಬಳಿ ಪೋಲಿಸಪ್ಪ ದರ್ಪದಿಂದ ಪ್ರತಿಭಟನಾಕಾರರ ವಿರುದ್ದ ತೊಡೆ ತಟ್ಟಿದ್ದೆ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Dec 10, 2023, 09:03 AM IST
  • ಕಾಂಗ್ರೆಸ್ ಸರ್ಕಾರದ 6 ತಿಂಗಳ ಆಡಳಿತದಲ್ಲಿ ಕೇಳಿದ್ದು ಬರೀ ಭ್ರಷ್ಟಾಚಾರ ಹಾಗೂ ಅರಾಜಕತೆಯ ಸದ್ದು
  • ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಉಪದ್ರವ ನೀಡಲು ಸದಾ “ಸಿದ್ದ”ವಾಗಿರುವ #ATMSarkara
  • ರಾಜ್ಯದ ಜನತೆ ಸಾಲು ಸಾಲು ಪ್ರತಿಭಟನೆಗಳ ಮೂಲಕ ಪ್ರತಿರೋಧ ತೋರಿದ್ದಾರೆ ಎಂದು ಟೀಕಿಸಿದ ಬಿಜೆಪಿ
ಕಾಂಗ್ರೆಸ್ ಸರ್ಕಾರದ 6 ತಿಂಗಳ ಆಡಳಿತದಲ್ಲಿ ಭ್ರಷ್ಟಾಚಾರ ಹಾಗೂ ಅರಾಜಕತೆ ಸದ್ದು ಮಾಡುತ್ತಿದೆ: ಬಿಜೆಪಿ title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಈ 6 ತಿಂಗಳ ಆಡಳಿತದಲ್ಲಿ ಕೇಳಿದ್ದು ಬರೀ ಭ್ರಷ್ಟಾಚಾರ ಹಾಗೂ ಅರಾಜಕತೆಯ ಸದ್ದು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಉಪದ್ರವ ನೀಡಲು ಸದಾ “ಸಿದ್ದ”ವಾಗಿರುವ #ATMSarkaraಕ್ಕೆ ರಾಜ್ಯದ ಜನತೆ ಸಾಲು ಸಾಲು ಪ್ರತಿಭಟನೆಗಳ ಮೂಲಕ ಪ್ರತಿರೋಧ ತೋರಿದ್ದಾರೆ’ ಎಂದು ಟೀಕಿಸಿದೆ.

ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸುವ ಬದಲು ಕಾಂಗ್ರೆಸ್‌ ಸರ್ಕಾರ ಪ್ರತಿಭಟನಾ ನಿರತರನ್ನು ಹತ್ತಿಕ್ಕುತ್ತಿದೆ. ಬೆಳಗಾವಿಯ ಸುವರ್ಣ ಸೌಧದ ಬಳಿ ಪೋಲಿಸಪ್ಪ ದರ್ಪದಿಂದ ಪ್ರತಿಭಟನಾಕಾರರ ವಿರುದ್ದ ತೊಡೆ ತಟ್ಟಿದ್ದೆ ಇದಕ್ಕೆ ಸಾಕ್ಷಿ. ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿನಿತ್ಯ ಹೋರಾಟ, ಮುಷ್ಕರ, ಘೇರಾವ್‌, ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದು, ಸರ್ಕಾರದ ದಯನೀಯ ಆಡಳಿತದ ವೈಫಲ್ಯ ಹಾಗೂ ಜನತೆಯಲ್ಲಿ ಸರ್ಕಾರದ ವಿರುದ್ಧ ಮಡುಗಟ್ಟಿರುವ ಆಡಳಿತ ವಿರೋಧಿ ಅಲೆಯ ಸುಸ್ಪಷ್ಟ ನಿದರ್ಶನ’ವೆಂದು ಬಿಜೆಪಿ ಕಿಡಿಕಾರಿದೆ.

‘ಎಂ.ಕೆ.ಸ್ಟಾಲಿನ್‌ ನಾಡಿಗೆ ಕಾವೇರಿಯನ್ನು ಬೇಕಾಬಿಟ್ಟಿಯಾಗಿ ಹರಿಬಿಟ್ಟು, ರಾಜ್ಯದ ರೈತರ ಅಧಃಪತನವನ್ನು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮೊದಲು ತಟ್ಟಿದ್ದೇ ಕಾವೇರಿ ನೀರು ಹೋರಾಟ ಸಮಿತಿಯ ಪ್ರತಿಭಟನೆ, ಬೆಂಗಳೂರು ಬಂದ್.‌ ಆದರೆ ವೋಟಿಗಾಗಿ ಮೂರನ್ನೂ ಬಿಟ್ಟಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರಿಗೆ ಮೇಲಿಂದ ಮೇಲೆ ಮಾಡಿದ್ದು ಬರೀ ಅನ್ಯಾಯ ಮಾತ್ರ. ಇನ್ನು ರಾಜ್ಯದ ಕೃಷಿ ಸಚಿವ ಎನಿಸಿಕೊಂಡ ಮಹಾನುಭಾವ ಎನ್.ಚೆಲುವರಾಯಸ್ವಾಮಿಯವರು ಮಾತ್ರ ರಾಜ್ಯದ ರೈತರಿಗೆ ಬೆಳೆಗಳನ್ನೇ ಬೆಳೆಯಬೇಡಿ ಎಂದು ಆದೇಶಿಸುವಷ್ಟು ಸ್ಟಾಲಿನ್‌ ನಾಡಿನ ಗುಲಾಮಗಿರಿಯಲ್ಲಿ ಬದುಕುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆಗೆ ಬೇಸತ್ತು ರಸ್ತೆಗಿಲೆದು ಪ್ರತಿಪಟಿಸಿದ ಟೆಕ್ಕಿಗಳು, ಸಾರ್ವಜನಿಕರು!

‘ಇನ್ನು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್‌ ಅವರಿಗೆ ಕಬ್ಬು ಬೆಳೆಯುವ ರೈತರಿಗೆ ಸಿಹಿ ನೀಡುವ ಬದಲು, ಹೆಚ್ಚಿನ ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ ಎನ್ನುವಷ್ಟು ಅಹಂಕಾರ ಮತ್ತು ಮದ. ಸೂತ್ರ ಹರಿದ ಗಾಳಿಪಟದಂತಾಗಿರುವ ರಾಜ್ಯ ಸಾರಿಗೆ ಇಲಾಖೆಯಲ್ಲಿ ಬಸ್-ಆಟೋ-ಟ್ಯಾಕ್ಸಿ ಚಾಲನೆಗಿಂತ ಪ್ರತಿಭಟನೆ-ಬಂದ್‌ಗಳು ನಡೆದಿದ್ದೇ ಹೆಚ್ಚು. ಖಾಸಗಿ ಬಸ್‌, ಟ್ಯಾಕ್ಸಿ, ಆಟೋ ಚಾಲಕ-ಮಾಲಿಕರು ಪ್ರತಿಭಟನೆ ನಡೆಸಿದ್ದಾಯ್ತು, ಸಾಲದ್ದಕ್ಕೆ ರಾಜ್ಯ ಸಾರಿಗೆ ಬಸ್‌ಗಳ ಚಾಲಕ-ನಿರ್ವಾಹಕರು ಪ್ರತಿಭಟನೆ ನಡೆಸಿದ್ದಾಯ್ತು, ಇಷ್ಟಾದರೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತ್ರ ನಾಟ್‌ ರೀಚೆಬಲ್. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯತ್‌ಗಳ ಪಿಡಿಒಗಳು ಸಹ ತಮಗಾದ ಅನ್ಯಾಯದ ವಿರುದ್ದ ಪ್ರತಿಭಟನೆ ಹಾದಿ ಹಿಡಿದರು. ತಮಗೆ ಸಂಬಂಧಿಸದ ವಿಚಾರಗಳಲ್ಲಿ ಮೂಗು ತೂರಿಸುವ #TrollMinister ಪ್ರಿಯಾಂಕ್ ಖರ್ಗೆಯವರು, ತಮಗೆ ಸಂಬಂಧಿಸಿದ ಈ ವಿಚಾರದಲ್ಲಿ ಮಾತ್ರ ಗಪ್‌ ಚುಪ್’ ಎಂದು ಬಿಜೆಪಿ ಕುಟುಕಿದೆ.

‘ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಶ್ಯಾಡೋ ಸಿಎಂ ಯತೀಂದ್ರರ ಕಲೆಕ್ಷನ್-ಕಮಿಷನ್-ಕರಪ್ಷನ್‌ ಹಾವಳಿಗೆ ಬೇಸತ್ತ ರಾಜ್ಯದ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಸುಸ್ತಾಗಿ, ತಮಗೆ ದಯಾಮರಣ ಕಲ್ಪಿಸಿ ಎನ್ನುವಷ್ಟರ ಮಟ್ಟಿಗೆ ಅಸಹಾಯಕರಾಗಿದ್ದಾರೆ. ಆದರೆ ಭಂಡ ಕಾಂಗ್ರೆಸ್‌ ಸರ್ಕಾರದ್ದು ಮಾತ್ರ “ಮತ್ತಷ್ಟು ಕಮೀಷನ್‌ ಕೊಡಿ-ಇನ್ನಷ್ಟು ಕಲೆಕ್ಷನ್‌ ಮಾಡಿ” ಎನ್ನುವ ಧೋರಣೆ. ರಾಜ್ಯದ ಇಂಧನ ಇಲಾಖೆಯದ್ದು ಬೇರೆಯದ್ದೇ ಕತೆ, ಎಲೆಕ್ಟ್ರಿಕ್‌ ಗುತ್ತಿಗೆದಾರರು ತಮಗೆ ಬರಬೇಕಾದ ಬಾಕಿ ಬಿಲ್‌ಗೆ ಸುವರ್ಣಸೌಧದ ಮುಂದೆ ಪ್ರತಿಭಟನೆಗೆ ಕುಳಿತಿದ್ದು ಸಚಿವ ಕೆ.ಜೆ.ಜಾರ್ಜ್ ಅವರಿಗೆ ಗೊತ್ತೇ ಇಲ್ವಂತೆ!! ಇದು ಈ ಸರ್ಕಾರದ ಅಸಲಿ ಹಣೆಬರಹ’ ಅಂತಾ ಬಿಜೆಪಿ ಕುಟಿಕಿದೆ.

‘ಇನ್ನು ತಮಗೆ ಪ್ರಣಾಳಿಕೆಯಲ್ಲಿ ನೀಡಿದ್ದ ವೇತನದ ಹೆಚ್ಚಳ ಭರವಸೆಯನ್ನು ಈಡೇರಿಸಿ ಎಂದು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಬೀದಿಗಿಳಿದ್ದು ಪ್ರತಿಭಟಿಸಿದ್ದೇ ಬಂತು. ಆದರೆ ಸರ್ಕಾರ ಮಾತ್ರ ಕ್ಯಾರೆ ಅನ್ನಲಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಂತೂ ಮಹಿಳೆಯರ ಪ್ರತಿಭಟನೆಗೂ ತಮಗೂ ಸಂಬಂಧವೇ ಇಲ್ಲವಂತೆ ವರ್ತಿಸುತ್ತಿರುವುದು ಅತ್ಯಂತ ಸೋಜಿಗ. ರಾಜ್ಯದಾದ್ಯಂತ ವಕೀಲರು ತಮಗಾದ ಅನ್ಯಾಯದ ವಿರುದ್ದ ಪ್ರತಿಭಟಿಸುತ್ತಿದ್ದಾರೆ. ಸಂಪೂರ್ಣ ಮೌನ ವ್ರತ ಆಚರಿಸುತ್ತಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಿಗೆ, ನೀವು ಈ ರಾಜ್ಯದ ಕಾನೂನು ಸಚಿವ ಎಂಬುದನ್ನು ಯಾರಾದರೂ ನೆನಪಿಸಬೇಕಷ್ಟೆ. ಇದು ಭ್ರಷ್ಟ ಕಾಂಗ್ರೆಸ್‌ಸರ್ಕಾರದ 6 ತಿಂಗಳ ಅರಾಜಕತೆಯ ಆಡಳಿತದ ಹೂರಣ. ಕಾಂಗ್ರೆಸ್‌ ಇಂತಹ ಕೆಟ್ಟ ದುರಾಡಳಿತಕ್ಕೆ ಕರ್ನಾಟಕ ಮಾಡೆಲ್‌ ಎಂದು ಹೆಸರಿಟ್ಟು, ಅದನ್ನೇ ಉಳಿದ ರಾಜ್ಯಗಳಲ್ಲಿ ಅಳವಡಿಸುತ್ತಿರುವುದು ಅತ್ಯಂತ ಅಪಾಯಕಾರಿ. ಅಸಲಿಗೆ ಗ್ಯಾರಂಟಿ ಹೆಸರಿನಲ್ಲಿ ಕರ್ನಾಟಕದ ಜನತೆಗೆ 420 ಆಡಳಿತ ನೀಡುತ್ತಿರುವುದೇ, ಕಾಂಗ್ರೆಸ್‌ನ 6 ತಿಂಗಳ ದುರಾಡಳಿತದ ಮಹಾನ್‌ ಸಾಧನೆ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ದುರ್ಮರಣ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News