ಕನ್ನಡ ನಾಡಿನ ಜನರ ಸ್ವಾಭಿಮಾನವೇ ನನ್ನ ಸ್ವಾಭಿಮಾನ : ಸಿಎಂ ಸಿದ್ದರಾಮಯ್ಯ

   

Last Updated : Dec 25, 2017, 07:57 PM IST
ಕನ್ನಡ ನಾಡಿನ ಜನರ ಸ್ವಾಭಿಮಾನವೇ ನನ್ನ ಸ್ವಾಭಿಮಾನ : ಸಿಎಂ ಸಿದ್ದರಾಮಯ್ಯ title=

ಬೆಂಗಳೂರು : ಈ ಕನ್ನಡ ನಾಡಿನ ಜನರ ಸ್ವಾಭಿಮಾನವೇ ನನ್ನ ಸ್ವಾಭಿಮಾನ. ಬೇರೆ ರಾಜ್ಯವರು  ಕರ್ನಾಟಕಕ್ಕೆ ಬಂದು ಪಾಠ ಹೇಳುವ ಅವಶ್ಯಕತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇತ್ತೀಚಿಗೆ ಪರಿವರ್ತನಾ ರ್ಯಾಲಿಗಾಗಿ ಕರ್ನಾಟಕಕ್ಕೆ ಬಂದಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥರವರು ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಈ ಸಂದರ್ಭದಲ್ಲಿ ಖಾರವಾಗಿ ಪ್ರತಿಕ್ರಯಿಸಿದ ಸಿದ್ದರಾಮಯ್ಯ ನಮ್ಮ ರಾಜ್ಯದ ಬಗ್ಗೆ ಬೇರೆಯರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ ಎಂದು ಅವರಿಗೆ ತೀರುಗೇಟು ನೀಡಿದರು.

ಗದಗ್ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಆದ್ದರಿಂದ ಆಶೀರ್ವಾದ ಮಾಡಿದ ಜನರಿಗೆ ನಾವು  ಹೇಳಿದ್ದೆನು ಮತ್ತು ಇಲ್ಲಿಯವರೆಗೆ ಮಾಡಿರುವುದೇನು ಎನ್ನುವುದನ್ನು ತಿಳಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ನಾನು ರಾಜ್ಯದ ಎಲ್ಲ  ಜಿಲ್ಲೆಗಳಿಗೂ ಸಂಚರಿಸುತ್ತಿದ್ದೇನೆ ಎಂದರು.

ಇದೆ ಸಂದರ್ಭದಲ್ಲಿ ಅನಂತಕುಮಾರ ಹೆಗಡೆಯವರು ಸಂವಿಧಾನವನ್ನು ಬದಲಾವಣೆ ಮಾಡುವುದರ ಕುರಿತು ಪ್ರತಿಕ್ರಯಿಸಿದ ಸಿದ್ದರಾಮಯ್ಯ ಮನುವಾದಿಯ ಹಿಡನ್ ಅಜೆಂಡಾ ಹೊಂದಿರುವ ಇಂತಹ ವ್ಯಕ್ತಿಗಳನ್ನು ಎಂದಿಗೂ ಅಧಿಕಾರಕ್ಕೆ ತರಬೇಡಿ ಎಂದು ರಾಜ್ಯದ ಜನರಲ್ಲಿ ವಿನಂತಿಕೊಂಡರು.

ಮಹಾದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮತ್ತು ಬಿಜೆಪಿಯ ಯಡಿಯೂರಪ್ಪ ನಡುವಿನ ಪತ್ರದ ವ್ಯವಹಾರದ ಬಗ್ಗೆ ವ್ಯಂಗವಾಡಿದ ಸಿದ್ದರಾಮಯ್ಯನವರು ಇವರಿಬ್ಬರು ಸೇರಿ ಒಂದು ಒಳ್ಳೆಯು ಕಥೆ ಹೆಣೆದಿದ್ದಾರೆ ಅದರ ನಿರ್ದೇಶಕರು ಅಮಿತ್ ಶಾ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು

ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗಳ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಧರ್ಮಗಳ ನಡುವೆ ಬೆಂಕಿ ಹಚ್ಚಿ ದೇಶದ ಸಾಮರಸ್ಯವನ್ನು ಹಾಳುಮಾಡಬೇಡಿ  ಜನರು ನೆಮ್ಮದಿ, ಶಾಂತಿಯಿಂದ ಬಾಳುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರು ಹೇಳಿದರು.

Trending News