CM Ibrahim : ತನಿಖೆ ಮಾಡೋದಕ್ಕೆ ಬಿಜೆಪಿ ಅವರಿಗೆ -- ಇಲ್ಲ : ಸಿಎಂ ಇಬ್ರಾಹಿಂ

ವಕ್ಫ್ ಬೋರ್ಡ್ ಬಗ್ಗೆ ಮೂರು ವರ್ಷ ರಿಪೋರ್ಟ್ ಇಟ್ಟುಕೊಂಡಿದ್ದಾರೆ, ಹುಲಿ ಬಂತು ಹುಲಿ ಅಂತಾ ಹೇಳ್ತಾರೆ.

Written by - Channabasava A Kashinakunti | Last Updated : Sep 22, 2022, 05:58 PM IST
  • ಹುಲಿ ಬಂತು ಹುಲಿ ಅಂತಾ ಹೇಳ್ತಾರೆ
  • ತನಿಖೆ ಮಾಡೋದಕ್ಕೆ ಬಿಜೆಪಿ ಅವರಿಗೆ ಬೀಜ ಇಲ್ಲ
  • ಜೆಡಿಎಸ್ ನಾಯಕ ಸಿಎಂ ಇಬ್ರಾಹಿಂ
CM Ibrahim : ತನಿಖೆ ಮಾಡೋದಕ್ಕೆ ಬಿಜೆಪಿ ಅವರಿಗೆ -- ಇಲ್ಲ : ಸಿಎಂ ಇಬ್ರಾಹಿಂ title=

ಬೆಂಗಳೂರು : ವಕ್ಫ್ ಬೋರ್ಡ್ ಬಗ್ಗೆ ಮೂರು ವರ್ಷ ರಿಪೋರ್ಟ್ ಇಟ್ಟುಕೊಂಡಿದ್ದಾರೆ, ಹುಲಿ ಬಂತು ಹುಲಿ ಅಂತಾ ಹೇಳ್ತಾರೆ. ತನಿಖೆ ಮಾಡೋದಕ್ಕೆ ಬಿಜೆಪಿ ಅವರಿಗೆ ಬೀಜ ಇಲ್ಲ ಎಂದು ಜೆಡಿಎಸ್ ನಾಯಕ ಸಿಎಂ ಇಬ್ರಾಹಿಂ ಅವರು ಬಿಜೆಪಿ ನಾಯಕರನ್ನು ಏಕ ವಚನದಲ್ಲೇ ಜಾಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ಪಿ‌ಎಸ್‌ಐ ಹಗರಣದಲ್ಲಿ ನಿಮ್ಮ ಜೇಬಿಗೆ ಕೈ ಹಾಕಿದ್ರೆ ನೀವು ಬೇರೆಯವರ ಜೇಬಿಗೆ ಕೈಹಾಕ್ತೀರಾ? ಐಎಂಎ, ಅಮಾನತ್ ಬ್ಯಾಂಕ್, ಸಹಕಾರ ಸಂಘದ ಹಗರಣಗಳ ವರದಿ ಏನಾಯ್ತು? ಜನತಾ ದಳ ಸರ್ಕಾರಕ್ಕೆ ಬಂದಾಗ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳನ್ನ ಜೈಲಿಗೆ ಕಳಿಸ್ತೇವೆ. ನಿಮಗೆ ಧೈರ್ಯ ಇದ್ರೆ ಎಲ್ಲಾ ಹಗರಣಗಳನ್ನ ಸಿಬಿಐ‌ಗೆ ಕೊಡಿ. ನೋಡ್ತೀನಿ ಮಾಡ್ತೀನಿ ಅಂತಾ ಯಾಕೆ ಹೇಳ್ತಾ ಇದ್ದೀರಾ? ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ : ಪೇ ಸಿಎಂ ಪೋಸ್ಟರ್ ಪ್ರಕರಣ - ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಸೇರಿ ಐವರ ಬಂಧನ

ಎನ್ ಐಎ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀವೆಲ್ಲ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಶ್ರೀರಾಮಸೇನೆ, ಆರ್‌ಎಸ್‌ಎಸ್‌ ಭಜರಂಗದಳ ಪಿಎಫ್ ಐ ಅಲ್ಲಾ ಒಂದೇ ತಾಯಿ ಮಕ್ಕಳು. ನಮಗೆ ಜನತಾದಳ ಒಂದೆ. ನಮ್ಮ ತಾಯಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಹೇಳಿದ್ದಾರೆ. 

ಇದನ್ನೂ ಓದಿ : "ಪೇ ಸಿಎಂ ಅಭಿಯಾನ: ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಷಡ್ಯಂತ್ರ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News