ಬಾಗಲಕೋಟೆ : ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದ್ರೆ ಜೆಡಿಎಸ್ ಸ್ಪರ್ಧೆ ವಿಚಾರವಾಗಿ ಮಾಜಿ ಸಚಿವ ಸಿಎಂ ಇಬ್ರಾಹಿಂ ಬಾದಾಮಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ಯಾರು ನಿಂತರೂ ನನಗೇನು ಪ್ರಶ್ನೇ ಇಲ್ಲ.ನನ್ನ ಗುರಿಯೊಂದೇ ಮಹಾಭಾರತ ಇದು.ಎದುರು ಸೈನ್ಯ ಕೌರವರ ಸೈನ್ಯ, ನಮ್ಮದು ಪಾಂಡವರ ಸೈನ್ಯ. ಅರ್ಜುನರಾಗಿ ಕುಮಾರಸ್ವಾಮಿ ಇದ್ದಾರೆ, ಅವರಿಗೆ ಸಾರಥಿಯಾಗಿ ನಾನಿದ್ದೇನೆ. ಕುದುರೆ ಹೊಡೆಯೋದು ನನ್ನ ಕೆಲಸ, ಬಾಣ ಬಿಡೋದು ಅವರ ಕೆಲಸ. ಬಿಡ್ತಾರಂದ್ರೆ ನಡಿತಿರುತ್ತೆ, ಜಯ ನಮ ಪಾರ್ವತಿ ಹರ ಹರ ಮಹಾದೇವ. ಜೋಳಿಗೆ ಹಾಕ್ಕೊಂಡು ಮುಂದೆ ಹೋಗ್ತಿವಿ. ನಮ್ಮೆದುರಿಗೆ ಯಾರೂ ನಿಲ್ತಾರೆ ಅನ್ನೋದಲ್ಲ ನಮ್ಮ ಅಭ್ಯರ್ಥಿ ಗೆಲ್ಲಬೇಕು. ರಾಜ್ಯದಲ್ಲಿ ಸಜ್ಜನರ ಸರ್ಕಾರ ಬೇಕಾಗಿದೆ ಎಂದರು.
ಇದನ್ನೂ ಓದಿ : ಶೀಘ್ರದಲ್ಲೇ ಅಪಾಯದಲ್ಲಿರುವ ಕಟ್ಟಡಗಳ ತೆರವು: ಬಿಬಿಎಂಪಿ ಆಯುಕ್ತ
ಚಿಕ್ಕದೊಡ್ಡಪ್ಪನ ಮಕ್ಕಳು, ಕಮಿಷನ್ ಗಳು, ಇನ್ಸಪೆಕ್ಟರ್ ಗಳು, ಬಾಗರಗಿ, ದೇವರಿಗೆ, ಹಾಗರಗಿ ಮಹಾಪತಿವೃತೆ, ಸತಿಸಾವಿತ್ರಿಯರಿದ್ದಾರಲ್ಲ. ಈ ಪೇಪರ್ ನಲ್ಲಿ ಬರುತ್ತಲ್ಲ, ಅದ್ಯಾವುದು ನಮ್ಮದಿಲ್ಲ. ನಾವ್ಯಾರು ಮೇಲ್ಗಡೆ, ಕೆಳಗಡೆ ದುಡ್ಡು ಕೊಡೋ ಹಾಗಿಲ್ಲ. ನಮ್ಮ ಸಾಮಾನು, ಜೋಳಿಗೆ ನಮ್ಮ ಹತ್ತಿರ ಇರುತ್ತೆ. ಕರ್ನಾಟಕ ದುಡ್ಡು ಎಲ್ಲಿಯೂ ಹೋಗೋವಂಗಿಲ್ಲ, ನಮ್ಮ ದುಡ್ಡು ನಮ್ಮಲ್ಲೇ ಇರುತ್ತೆ. ಇದ್ರಿಂದ ಕರ್ನಾಟಕ ಇನ್ನೂ ಸಮೃದ್ಧಿ ಆಗುತ್ತೆ. ಯತ್ನಾಳಗೆ 2500ಕೋಟಿ ಹೋಗಿತ್ತು. ಅದೇ ದುಡ್ಡು ನಮ್ಮಲ್ಲಿದಿದ್ದರೆ ಎಷ್ಟು ಸಮೃದ್ದಿಯಾಗುತ್ತಿತ್ತು.
ಜೆಡಿಎಸ್ ಗೆ ಕಾಂಗ್ರೆಸ್ ನವರನ್ನ ಕರೆ ತರುವ ವಿಚಾರವಾಗಿ ಮಾತನಾಡಿದ ಅವರು, ಓ ಬಂದೆ ಬರ್ತಾರೆ, 13ನೇ ದಿನಾಂಕ ನಂತ್ರ ನೋಡ್ತಿರಿ. ದರ ದರ ಹಾಗೇಯೇ ನಮ್ಮ ಪಕ್ಷಕ್ಕೆ ಬರ್ತಾರೆ. ದೇವೇಗೌಡರೇ ನಮ್ಮ ಅಂತಿಮ ಹೈಕಮಾಂಡ್. ಅವರು ಯಾರನ್ನ ಕ್ಲೀಯರ್ ಮಾಡಿ ಕೊಡ್ತಾರೋ, ನಾವು ಸರ ಸರ ಹಾಗೇ ಹೋಗ್ತಿವಿ. ನೂರಕ್ಕೆ ನೂರರಷ್ಟು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ರಾಮ ಭಜನೆಗೆ ಪೊಲೀಸ್ ತಡೆ.. ಸರ್ಕಾರದ ವಿರುದ್ಧ ಶ್ರೀರಾಮ ಸೇನೆ ಕಿಡಿ
ಕೆಲವರು ಜೆಡಿಎಸ್ ನಿಂದಲೇ ಹೋಗ್ತಾರೆನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಆತುರ ಬೇಡ, ನಾವೇ ಲಿಸ್ಟ್ ಕೊಡ್ತಿವಿ ಕರೆದುಕೊಂಡು ಹೋಗಿ ಎಂದಿದ್ದೇವೆ. ನಾಡಗೌಡ, ವೀರೇಂದ್ರ ಪಾಟೀಲ ಪುತ್ರ, ಜೆಎಚ್.ಪಟೇಲ ಮಗ ಇದ್ದಾರೆ, ಎಲ್ಲ ಸಜ್ಜನರನ್ನ ಒಂದ ಕಡೆಗೆ ಸೇರಸಬೇಕೆಂದು ವಿಚಾರ ಮಾಡಿದ್ದೇನೆ. ಎಂಎಲ್ಎ ಗಳು ಯಾರೂ ಅಂತ ಹೇಳಲ್ಲ, ಸಮಯ ಬರುತ್ತೇ ಅವಾಗ ಹೇಳುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.